लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು ವಿಶ್ವದಾದ್ಯಂತ ಕೋಟ್ಯಂತರ ಮನೆಗಳಲ್ಲಿ ಬಳಕೆಯಾಗುವ ಸಿಲಿಂಡರ್ ಅನಿಲದ (LPG) ಬಳಕೆಗೆ ಅಡಿಪಾಯ ಹಾಕಿದವರು ಅಮೆರಿಕದ ರಸಾಯನಶಾಸ್ತ್ರಜ್ಞ “ವಾಲ್ಟರ್ ಸ್ನೆಲ್ಲಿಂಗ್” (1883-1965).

1 min read

ಇಂದು ವಿಶ್ವದಾದ್ಯಂತ ಕೋಟ್ಯಂತರ ಮನೆಗಳಲ್ಲಿ ಬಳಕೆಯಾಗುವ ಸಿಲಿಂಡರ್ ಅನಿಲದ (LPG) https://nisargacare.com/services/  ಬಳಕೆಗೆ ಅಡಿಪಾಯ ಹಾಕಿದವರು ಅಮೆರಿಕದ ರಸಾಯನಶಾಸ್ತ್ರಜ್ಞ “ವಾಲ್ಟರ್ ಸ್ನೆಲ್ಲಿಂಗ್” (1883-1965).

ವಿಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಲ್ಲ, ಅದು ಸಾಮಾನ್ಯ ಜನರ ಬದುಕನ್ನು ಸುಲಭಗೊಳಿಸಬೇಕು ಎಂಬ ಆಲೋಚನೆ ಅವರದಾಗಿತ್ತು.

1910ರಲ್ಲಿ ವಾಲ್ಟರ್ ಸ್ನೆಲ್ಲಿಂಗ್ ಅವರು ಪೆಟ್ರೋಲ್ ಟ್ಯಾಂಕ್‌ಗಳಿಂದ ಅನಿಲವು ಆವಿಯಾಗುತ್ತಿರುವುದನ್ನು ಗಮನಿಸಿದರು. ವ್ಯರ್ಥವಾಗಿ ಆವಿಯಾಗುತ್ತಿರುವ ಈ ಅನಿಲ ಭವಿಷ್ಯದ ಅತ್ಯುತ್ತಮ ಇಂಧನವಾಗಬಲ್ಲದು ಎಂದು ಭಾವಿಸಿದರು.

ಈ ಕುರಿತು ಸಂಶೋಧನೆ ನಡೆಸಿ ಪೆಟ್ರೋಲ್‌ನಲ್ಲಿರುವ ಪ್ರೊಪೇನ್ (Propane) ಮತ್ತು ಬ್ಯುಟೇನ್ (Butane) ಎಂಬ ಅನಿಲಗಳನ್ನು ಪ್ರತ್ಯೇಕಿಸಿ, ಅವುಗಳನ್ನು ಉಕ್ಕಿನ ಸಿಲಿಂಡರ್ ಗಳಲ್ಲಿ ದ್ರವ ರೂಪದಲ್ಲಿ ಸಂಗ್ರಹಿಸಬಹುದು ಎಂದು ತೋರಿಸಿಕೊಟ್ಟರು.

ಇವರಿಂದಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಲಭವಾಗಿ ಸಾಗಿಸಬಹುದಾದ ಮತ್ತು ಅಡುಗೆಗೆ, ಕೈಗಾರಿಕೆಗಳಿಗೆ ಬಳಸಬಹುದಾದ ಸ್ವಚ್ಛ ಇಂಧನ ಲಭ್ಯವಾಯಿತು.

ಅಮೆರಿಕದ ಬ್ಯೂರೋ ಆಫ್ ಮೈನ್ಸ್‌ನಲ್ಲಿ ಸ್ಫೋಟಕಗಳ ತಜ್ಞರಾಗಿ ಸೇವೆ ಸಲ್ಲಿಸಿದ್ದ ಇವರು, ಗಣಿಗಾರಿಕೆಯ ಸುರಕ್ಷತೆ ಮತ್ತು ಸ್ಫೋಟಕಗಳ ಕುರಿತು ಇವರು ಅನೇಕ ಸಂಶೋಧನೆಗಳನ್ನು ಮಾಡಿದ್ದರು.

“ಯಾವುದೇ ಅನಿಲ ಅಥವಾ ಸ್ಫೋಟಕ ಅಪಾಯಕಾರಿಯಲ್ಲ, ಅದನ್ನು ಬಳಸುವ ವಿಧಾನ ಸರಿಯಿಲ್ಲದಿದ್ದರೆ ಮಾತ್ರ ಅದು ಅಪಾಯಕಾರಿ.”

(ಗಣಿ ಕೆಲಸಗಾರರಿಗೆ ಅವರು ಇದನ್ನು ಒತ್ತಿ ಹೇಳುತ್ತಿದ್ದರು).

ಪನಾಮಾ ಕಾಲುವೆಯ ನಿರ್ಮಾಣದ ಸಮಯದಲ್ಲಿ ಸ್ನೆಲ್ಲಿಂಗ್ ಅವರು ನೀರಿನ ಅಡಿಯಲ್ಲಿ ಬಳಸಬಹುದಾದ ಸ್ಫೋಟಕ ಸಾಧನವನ್ನು (Detonator) ಕಂಡುಹಿಡಿದರು.

ಈ ಆವಿಷ್ಕಾರದಿಂದ ಅಮೆರಿಕ ಸರ್ಕಾರಕ್ಕೆ ಆಗಿನ ಕಾಲದಲ್ಲೇ ವರ್ಷಕ್ಕೆ ಸುಮಾರು 5 ಲಕ್ಷ ಡಾಲರ್‌ಗಳಷ್ಟು ಉಳಿತಾಯವಾಯಿತು ಮತ್ತು ಬೃಹತ್ ಕಾಲುವೆ ನಿರ್ಮಾಣ ಕಾರ್ಯ ಸುಲಭವಾಯಿತು.. 🌹🌹🌹. ರವಿಕುಮಾರ್. 🌹🌹🌹. ಬೆಂಗಳೂರು.. 🌹🌹🌹

About Author

Leave a Reply

Your email address will not be published. Required fields are marked *

You may have missed