लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಅವಿನ್ ಟಿವಿ ಸುದ್ದಿಜಾಲ ✍️:

ಹೆಸರನ್ನು ಬರೆಯುವಾಗ ಉಚ್ಚರಣೆ ಮಾಡುವಾಗ ಎಚ್ಚರವಿರಲಿ………

ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನವನ್ನು ವಿಶ್ವದ ಮೂಲೆ ಮೂಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬಹುಶಃ ವಿಶ್ವದ ಯಾವ ಸಾಮಾಜಿಕ ನಾಯಕರ ಜನ್ಮದಿನವನ್ನು ಇಷ್ಟು ಸಡಗರ ಮತ್ತು ಸಂಭ್ರಮದಿಂದ ಆಚರಿಸುವುದಿಲ್ಲ. ಇದು ಆ ತತ್ವಜ್ಞಾನಿಗೆ ಸಂದ ಗೌರವೇ ಸರಿ.
ಅವರ ವಿಚಾರಧಾರೆಗಳನ್ನು ಈ ಮೂಲಕವಾದರೂ ಹೊಸ ಬಗೆಯ ಚಿಂತನೆಗಳಿಗೆ ಹೊಸ ಬಗೆಯ ಚರ್ಚೆಗಳಿಗೆ ಅವರ ವಿಚಾರಧಾರೆಗಳು ಸಮ ಸಮಾಜ ಕಟ್ಟಲು ಸ್ಪೂರ್ತಿಯಾಗಲಿ.

ಇದು ಒಳ್ಳೆಯ ಬೆಳವಣಿಗೆ ಈ ಬಗ್ಗೆ ಚರ್ಚೆ ಮುಂದೊಂದು ದಿನ ಮುಂದುವರೆಸೋಣ…………..

ಈ ಹಿಂದೆ ಡಾ. ಬಿ. ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸುವ ಬಗ್ಗೆ ಒಂದಿಷ್ಟು ಚರ್ಚೆಯನ್ನು ಮಾಡಲಾಗಿತ್ತು.

ಮುಂದುವರೆದಂತೆ…….

ಈಗ ಬಹುಮುಖ್ಯವಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನು ಬ್ಯಾನರ್, ಪ್ಲೆಕ್ಸ್ ಗಳಲ್ಲಿ ಕರಪತ್ರಗಳಲ್ಲಿ ಹಾಗೂ ವೇದಿಕೆಯಲ್ಲಿ ನಮೂದಿಸುವುದು ಹೇಗೆ? ಎಂಬ ಚರ್ಚೆ ಅತಿ ಅಗತ್ಯವಾಗಿದೆ.

ಇತ್ತೀಚಿಗೆ ಅವರ ಹೆಸರನ್ನು

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್, ವಿಶ್ವ ರತ್ನ,ಆಧುನಿಕ ಮನು, ಭಾರತ ರತ್ನ, ಸಂವಿಧಾನ ಶಿಲ್ಪಿ, ಕ್ರಾಂತಿ ಸೂರ್ಯ, ಮಹಾ ನ್ ಮಾನವ ತವಾದಿ, ಬಡವರ ಆಶಾಕಿರಣ, ಪರಮಪೂಜ್ಯ, ತನಗೆ ಇಷ್ಟ ಬಂದ ರೀತಿಯಲ್ಲಿ ಹೆಸರನ್ನು ನಮೂದಿಸುವ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇವುಗಳನ್ನು ಪ್ರೀತಿಯಿಂದ ಹೇಳಬಹುದಷ್ಟೇ, ಆದರೆ ಬರವಣಿಗೆಯಲ್ಲಿ ವೇದಿಕೆಯಲ್ಲಿ ಫ್ಲಕ್ಸ್ ಬ್ಯಾನರ್ ಗಳಲ್ಲಿ ಕರಪತ್ರಗಳಲ್ಲಿ ಖಂಡಿತ ಹಾಕಲೇಬಾರದು ಒಂದು ವೇಳೆ ಹಾಕಿದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗುತ್ತದೆ.

ಭಾರತದ ಸಂವಿಧಾನದ ಮೂರನೇ ಅಧ್ಯಾಯದ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ 18ನೇ ವಿಧಿಯಲ್ಲಿ ಸಮಾನತೆ ಹಕ್ಕನ್ನು ಪ್ರಸ್ತಾಪಿಸುವಾಗ ಸ್ವತಹ ಡಾ. ಬಿ.ಆರ್ ಅಂಬೇಡ್ಕರ್ ಅವರ ಬರೆದಿದ್ದಾರೆ.

ವಿಧಿ: 18
ಬಿರುದು ಬಾವಳಿಗಳ ಸ್ವೀಕಾರ ಮತ್ತು ನಿಷೇಧ

ಎಂದು ಅಂದರೆ ಭಾರತದ ಪ್ರತಿಯೊಬ್ಬ ವ್ಯಕ್ತಿಯು ಇಲ್ಲಿ ಸಮಾನವಾಗಿರಬೇಕು ಸಮಾನತೆ ಹಕ್ಕನ್ನು ಪ್ರಸ್ತಾಪಿಸಿದ್ದಾರೆ ಭವಿಷ್ಯ ಡಾ. ಬಿ.ಆರ್ ಅಂಬೇಡ್ಕರ್ ಅವರು ಬದುಕಿದ್ದರೆ ಯಾವ ಬಿರುದು ಬಾವಳಿಗಳನ್ನು ಸ್ವೀಕರಿಸುತ್ತಿರಲಿಲ್ಲ.

ಇವೆಲ್ಲ ಅವರು ಮರಣ ಹೊಂದಿದ ನಂತರ ಪ್ರಭುತ್ವವೇ ತನ್ನ ಹಿತಾಶಕ್ತಿಗೆ ಕೊಟ್ಟಂತಹ ಅನೇಕ ಪುರಸ್ಕಾರಗಳು.

ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಲೆಕೆಳಗಾಗಿಸಿ ಅವರ ಚಿಂತನೆಗಳಿಗೆ ವಿರುದ್ಧವಾಗಿ ಒಂದು ಸಮುದಾಯವನ್ನು ಸೆಳೆಯುವ ಸಲುವಾಗಿ ಕೊಟ್ಟಂತಹ ಪ್ರಶಸ್ತಿಗಳಾಗಿವೆ. ಪುರಸ್ಕಾರಗಳಾಗಿವೆ.

ಇಲ್ಲಿ ಯಾರು ಮುಖ್ಯರಲ್ಲ ಯಾರೋ ಮುಖ್ಯರಲ್ಲ ಎಂಬ ತತ್ವವನ್ನು ಡಾ. ಬಿಆರ್ ಅಂಬೇಡ್ಕರ್ ಅವರು ಸ್ವತ ಪಾಲಿಸಿದರು ಅವರ ಚಿಂತನೆಗಳಲ್ಲಿ ಬರೆದಿದ್ದಾರೆ.

ಗಾಂಧೀಜಿಯವರನ್ನು ಎಂದೂ ಕೂಡ ಮಹಾತ್ಮ ಎಂದು ಡಾ. ಬಿ.ಆರ್ ಅಂಬೇಡ್ಕರ್ ಅವರು ಕರೆಯುತ್ತಿರಲಿಲ್ಲ ಮಿಸ್ಟರ್ ಗಾಂಧಿ ಎಂದು ನಮೂದಿಸುತ್ತಿದ್ದರು. ಇಲ್ಲಿ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಮಹಾತ್ಮ ಎಂಬ ಪದವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ಬಳಸುತ್ತಿರಲಿಲ್ಲ ಎಂದರೆ ಇದು ಪ್ರಭುತ್ವ ಕೊಟ್ಟ ಮಹಾತ್ಮ ಎಂಬ ಪದ ಎಂದು ಅರ್ಥ ಮಾಡಿಕೊಳ್ಳಬಹುದು.
ಪ್ರಭುತ್ವ ಕೊಡುವ ಯಾವುದೇ ಪದನಾಮಗಳನ್ನು ಪದವಿಗಳನ್ನು ಡಾ. ಬಿ. ಆರ್ ಅರ್ ಅಂಬೇಡ್ಕರ್ ರವರು ತಿರಸ್ಕಾರ ಮಾಡಿದ್ದರು. ಶೈಕ್ಷಣಿಕ ಪದವಿಗಳನ್ನು ಮಾತ್ರ ಅವರು ಒಪ್ಪಿಕೊಂಡಿದ್ದರು.

ಈಗ ಡಾ!! ಮತ್ತು ಡಾ. ಎಂಬ ಪದ ಬಳಕೆ ಹೇಳುವುದಾದರೆ,

ಡಾ!! ಎಂಬ ಪದ ಬಳಕೆಯನ್ನು
ಎಂಬಿಬಿಎಸ್ ಪದವಿಯನ್ನು ಮುಗಿಸಿದವರಿಗೆ ನೀಡುವ ಪದವಿಯಾಗಿದೆ.

ಡಾ! ಎಂದರೆ ಪ್ರಭುತ್ವ ಕೊಡುವ ಗೌರವ ಡಾಕ್ಟರೇಟ್ ಪದವಿ ಅದು ಕೂಡ ಇತ್ತೀಚಿಗೆ ರಾಜ್ಯ ಸರ್ಕಾರ ತನ್ನ ಹೆಸರಿನ ಮುಂದೆ ನಮೂದಿಸಬಾರದೆಂದು ಹೇಳಿದೆ.

ಅತಿ ಪ್ರಮುಖವಾಗಿ ಇಲ್ಲಿ ಚರ್ಚೆಗೆ ಒಳಪಟ್ಟಿರುವ ವಿಷಯ ಡಾಕ್ಟರೇಟ್ ಪದವಿ….

ಡಾಕ್ಟರೇಟ್ ಪದವಿಯು ಒಂದು ವಿಷಯದ ಬಗ್ಗೆ ದೀರ್ಘಕಾಲ ಸಂಶೋಧನೆ ನಡೆಸಿ ವಿಶ್ವವಿದ್ಯಾಲಯದಿಂದ ಅನುಮೋದನೆಗೊಂಡು ಶೈಕ್ಷಣಿಕ ನೀತಿ ನಿಯಮಗಳಿಗೆ ಒಳಪಟ್ಟು ವಿಶ್ವವಿದ್ಯಾಲಯವು ಕೊಡ ಮಾಡುವ ಶೈಕ್ಷಣಿಕ ಪದವಿಯೇ

“ಡಾಕ್ಟರ್ ಆಫ್ ಫಿಲಾಸಫಿ ”

ಪದವಿ ಅಂದರೆ ತತ್ವಜ್ಞಾನಿ ಎಂಬ ಅರ್ಥ ಬರುತ್ತದೆ. ಶೈಕ್ಷಣಿಕವಾಗಿ ಸಿಕ್ಕುವ ಪದವಿಗಳನ್ನು ತಮ್ಮ ಹೆಸರಿನಲ್ಲಿ ಸೇರ್ಪಡೆ ಮಾಡಬಹುದೆಂದು ಸ್ವತಃ ಅಂಬೇಡ್ಕರ್ ಅವರೆ ಬರೆಯುತ್ತಾರೆ ಹಾಗೂ ಅವರು ಅನೇಕ ಸಂದರ್ಭಗಳಲ್ಲಿ ಬಳಸಿಕೊಂಡಿರುತ್ತಾರೆ. ಡಾಕ್ಟರ್ ಆಫ್ ಫಿಲಾಸಫಿಯನ್ನು ಸಹ ತನ್ನ ಹೆಸರಿನ ಮುಂದೆ

ಡಾ.

ಈ ಕ್ರಮದಲ್ಲಿ ಬರೆಯಬೇಕು. ಮತ್ತು ಬಳಸಬೇಕು.

ಅಂತಿಮವಾಗಿ ಹೇಳುವುದೇ ಇಷ್ಟೇ,

ಡಾ. ಬಿ.ಆರ್ ( ಭೀಮ್ ರಾವ್ ರಾಮ್ ಜೀ ಸಕ್ಬಾಲ್) ಅಂಬೇಡ್ಕರ್ ಎಂದು ಬರೆಯಬೇಕಷ್ಟೇ.

ಅವರ ಹೆಸರನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಬರೆಯುವುದು ತಪ್ಪು ಬದುಕಿದಾಗಂತೂ ಅವರನ್ನು ಸರಿಯಾಗಿ ಈ ದೇಶ ವಾಸಿಗಳು ಅರ್ಥ ಮಾಡಿಕೊಳಲಿಲ್ಲ. ಈಗಲಾದರೂ ಅವರ ಹೆಸರನ್ನು ಸರಿಯಾದ ಕ್ರಮದಲ್ಲಿ ಬರೆದು ಬಳಸಿ ಅವರ ವಿಚಾರಧಾರೆಗಳನ್ನು ಸಮಕಾಲೀನ ಕಾಲಘಟ್ಟಕ್ಕೆ ಮರು ಚಿಂತನೆ ಮಾಡಿ ಜಾತಿ ಧರ್ಮ ಭಾಷೆ ಲಿಂಗ ತಾರತಮ್ಯ ಇಲ್ಲದೆ

“ಮೌಢ್ಯದಿಂದ ಜ್ಞಾನದೆಡೆಗೆ”

ಎಂಬಾ ದ್ಯeಯ ವಾಕ್ಯದೊಂದಿಗೆ 135 ನೇ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯನ್ನು ಎಲ್ಲರನ್ನೂ ಒಳಗೊಂಡಂತೆ ವೈಚಾರಿಕವಾಗಿ ಆಚರಿಸೋಣ…..

ಬರಹ:
ಡಾ. ಹರೀಶ್ ನಲ್ಕೆ
ಸಂಶೋಧನಾ ಬರಹಗಾರರು 9731493209.

12.04.2026

About Author

Leave a Reply

Your email address will not be published. Required fields are marked *

You may have missed