AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿರುವದು ಸ್ವಾಗತಾರ್ಹ #avintvcom

1 min read
Featured Video Play Icon

22ಸಿಡಿಎನ್-01 ಚಡಚಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಚಡಚಣ ತಾಲ್ಲೂಕು ವೀರ ಶಿವಾಜಿ ಸೇನೆ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ವೀರ ಶಿವಾಜಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ನನ್ನೂರೆ ಉದ್ಘಾಟಿಸಿದರು
ವೀರ ಶಿವಾಜಿ ಸೇನೆ ತಾಲ್ಲೂಕು ಘಟಕ ಉದ್ಘಾಟನೆ:
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ವಿರೋಧ ಸಲ್ಲದು:ನಾಗರಾಜ ನನ್ನೂರೆ
ಚಡಚಣ:
ರಾಜ್ಯದಲ್ಲಿರುವ ಮರಾಠಿಗರ ಶೈಕ್ಷಣಿಕ,ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುತ್ತಿರುವದು ಸ್ವಾಗತಾರ್ಹ ಹಾಗೂ ಕನ್ನಡಪರ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸುವದು ಸಲ್ಲದು ಎಂದು ವೀರ ಶಿವಾಜಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ನನ್ನೂರೆ ಹೇಳಿದರು.
ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಚಡಚಣ ತಾಲ್ಲೂಕು ವೀರ ಶಿವಾಜಿ ಸೇನೆ ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೀರ ಶಿವಾಜಿ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾರುತಿ ನಿಕ್ಕಂ,ಜಿಲ್ಲಾಧ್ಯಕ್ಷ ಸಂಗಮೇಶ ಜಾಧವ,,ರಾಜ್ಯ ಕಾರ್ಯದರ್ಶಿ ಸದಾಶಿವ ಚವ್ಹಾಣ ಮಾತನಾಡಿ,ರಾಜ್ಯದಲ್ಲಿರುವ ಮರಾಠಿಗರು ಮೂಲತ: ಕನ್ನಡಿಗರೇ ಆಗಿದ್ದಾರೆ.ಅವರ ಮಾತೃ ಭಾಷೆ ಕನ್ನಡವೇ ಆಗಿದೆ.ಅವರ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ ತಾಲೂಕು ಗೌರವಾಧ್ಯಕ್ಷ ಅಪ್ಪಾರಾವ ಶಿಂಧೆ ವಹಿಸಿದ್ದರು.ಸಾನಿಧ್ಯ ವಹಿಸಿದ ಬುರಣಾಪೂರದ ಮಾತೆ ಯೋಗೇಶ್ವರಿ ಆಶಿರ್ವಚನ ನೀಡಿದರು.
ಶಿವಾಜಿ ಸೇನೆ ರಾಜ್ಯಾಧ್ಯಕ್ಷ ಮಾರುತಿ ಮೋರೆ,ಚಡಚಣ ತಾಲ್ಲೂಕು ವೀರ ಶಿವಾಜಿ ಸೇನೆ ನೂತನ ಅಧ್ಯಕ್ಷ ಸುರೇಶ ಸಿಂಧೆ,ವೀರ ಶಿವಾಜಿ ಸೇನೆ ಜಿಲ್ಲಾ ಪ್ರಧಾನ ಸಂಚಾಲಕ ಅಂಬಾದಾಸ ಸಿಂದಗಿ,ಸದಸ್ಯರಾದ ಆನಂದ ಪವಾರ,ತುಕಾರಾಮ ಶಿಂಧೆ,ಸದಾಶಿವ ಭತಗುಣಕಿ,ಸುಭಾಸ್ ಮೋರೆ,ರಮೇಶ ಶಿಂದೆ, ಕುಮಾರ ಜಾಧವ, ವೀರ ಶಿವಾಜಿ ಸೇನೆಯ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅವಿನಾಶ ಪವಾರ,ಶ್ರೀಧರ ಜಾಧವ ಸೇರಿದಂತೆ ಮರಾಠಾ ಸಮೂದಾಯ ಬಾಂದವರು ಇದ್ದರು

 

About Author