लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಜಾತಂತ್ರದ ಮೌಲ್ಯ ಮತ್ತು ಸೌಂದರ್ಯ ಅರಳುವುದು ಅಷ್ಟು ಸುಲಭವಲ್ಲ. ಶಿಷ್ಟಾಚಾರವನ್ನು ಪಾಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ~ ಕರುನಾಡಿಗೆ ಪ್ರಧಾನಿ ಮೋದಿ ಆಗಮನ…..

1 min read

ಅವಿನ್ ಟಿವಿ ಸುದ್ದಿಜಾಲ ✍️: ಪ್ರಜಾತಂತ್ರದ ಮೌಲ್ಯ ಮತ್ತು ಸೌಂದರ್ಯ ಅರಳುವುದು ಅಷ್ಟು ಸುಲಭವಲ್ಲ. ಶಿಷ್ಟಾಚಾರವನ್ನು ಪಾಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ~ ಕರುನಾಡಿಗೆ ಪ್ರಧಾನಿ ಮೋದಿ ಆಗಮನ.

ಬೆಂಗಳೂರು ಏ ೧೫: ಆದಿಚುಂಚನಗಿರಿ ಮಠದ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಇಂದು ದೆಹಲಿಯಿಂದ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಷ್ಟಾಚಾರವನ್ನು ಪಾಲನೆ ಮಾಡುವ ಮೂಲಕ ಇಂದು ಮುಂಜಾನೆ ನಾಡಿಗೆ ಬರಮಾಡಿಕೊಂಡು ಶುಭ ಕೋರಿದರು.

ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಅಧಿನಾಯಕರಿಗೆ ಸಿದ್ದಾಂತ,ಪಕ್ಷ, ವೈಚಾರಿಕ ಭಿನ್ನಾಭಿಪ್ರಾಯಗಳು ಏನೇ ಇರಲಿ ಅವನ್ನೆಲ್ಲ ಬದಿಗೊತ್ತಿ ಶಿಷ್ಟಾಚಾರದ ಪರಿಧಿಯಲ್ಲಿ ಬರಮಾಡಿಕೊಂಡು ಗೌರವಿಸುವುದು ಪ್ರಜಾತಂತ್ರದ ಮೌಲ್ಯವನ್ನು ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ.

ಇಂದು ಇಂತಹ ಘನ ಕರ್ತವ್ಯವನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಗೌರವದೊಂದಿಗೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡಿದ್ದು ಮುತ್ಸದ್ದಿ ರಾಜಕಾರಣಕ್ಕೆ ಸಾಕ್ಷಿಯಾಯ್ತು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 18 ಪ್ರಮುಖ ಬೇಡಿಕೆ ಸಲ್ಲಿಸಿದರು.

ಇದೇ ವೇಳೆ ಕೃಷಿ ಸಚಿವರಾದ ಕೃಷ್ಣಬೈರೇಗೌಡ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ‌ ರಜನೀಶ್ ಅವರು ಹಾಜರಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಸ್ಪರ ಕೈಮುಗಿದು ಶುಭಕೋರಿ ಕಿವಿಯ ಹತ್ತಿರ ಹೋಗಿ ಪಿಸುಮಾತು ಆಡಿದ್ದನ್ನು ನೋಡಿ ಅಚ್ಚೆ ದಿನ್ ಎದುರಾಗಿ ಮನದ ಮಾತುಗಳು (ಮನ್ ಕಿ ಬಾತ್) ಹೊರಹೊಮ್ಮಿ, ರಾಜಕೀಯದಲ್ಲಿ ಯಾರು ಒಬ್ಬರಿಗೊಬ್ಬರು ಶತ್ರುವೂ ಅಲ್ಲ ಮಿತ್ರನೂ ಅಲ್ಲ ಎಂಬು ಸತ್ಯ ಸಂಗತಿಯನ್ನು ಎಲ್ಲ ಪಕ್ಷಗಳ ಕೆಳಹಂತದ ಕಾರ್ಯಕರ್ತರು ಕಡ್ಡಾಯವಾಗಿ ಅರಿಯಬೇಕು ಎಂದೆನಿಸಿತು.

*ಲಾಸ್ಟ್ ಸಿಪ್ :* ಸಂವಿಧಾನದ ಕವರ್ ಪೇಜ್ ಓದುವುದಕ್ಕೂ, ಪೂರ್ಣ ಸಂವಿಧಾನವನ್ನು ಓದಿ ಅರ್ಥೈಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ, ಕವರ್ ಪೇಜ್ ಓದಿ ತಿಳಿದವರು ಕೇವಲ ಆರ್ಡಿನರಿ ರಾಜಕಾರಣಿ ಆಗಬಹುದಷ್ಟೇ, ಆದರೆ ಸಂವಿಧಾನವನ್ನು ಪರಿಪೂರ್ಣವಾಗಿ ತಿಳಿದವರು ಮಾತ್ರ ಮುತ್ಸದ್ದಿ (ಸ್ಟೇಟ್ಸ್ ಮೆನ್ ) ರಾಜಕಾರಣಿಗಳಾಗಲು ಸಾಧ್ಯ!
••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed