लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದೇವನಹಳ್ಳಿ ಪುರಸಭೆಯ ಸ್ಥಾಯಿಸಮಿತಿಗೆ ಅಧ್ಯಕ್ಷರಾಗಿ ಎಸ್.ನಾಗೇಶ್ ಅಧಿಕಾರ ಸ್ವೀಕಾರ avintvcom

1 min read
Featured Video Play Icon

ಆಂಕ್ಯರ್ :- ದೇವನಹಳ್ಳಿ ಪುರಸಭೆಯ ಸ್ಥಾಯಿಸಮಿತಿಗೆ ಅಧ್ಯಕ್ಷರಾಗಿ ಎಸ್.ನಾಗೇಶ್ ಅಧಿಕಾರ ಸ್ವೀಕಾರ
ದೇವನಹಳ್ಳಿ ಪುರಸಭೆಯ ಸ್ಥಾಯಿ ಸಮಿತಿಗೆ ನೂತನಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ನಾಗೇಶ್ ಉತ್ತಮ ಕೆಲಸಗಾರರಾಗಿದ್ದು, ಪಟ್ಟಣದ ಅಭಿವೃದ್ಧಿಗೆ ಒತ್ತುನೀಡಿ ಉತ್ತಮ ಕೆಲಸ ಮಾಡಿ ಎಂದು ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ವಾ. ಓ :- ಅವರು ಪಟ್ಟಣದ ಪುರಸಭಾ ಸ್ಥಾಯಿಸಮಿತಿ ಕಛೇರಿಯಲ್ಲಿ ನಡೆದ ಪೂಜಾ ಸಮಯದಲ್ಲಿ ಎಸ್.ನಾಗೇಶ್ರವರಿಗೆ ಶುಭ ಹಾರೈಸಿ ಮಾತನಾಡಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಂದಾಗಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿ, ಪ್ರತಿಯೊಂದು ವಾರ್ಡ್ಗಳಲ್ಲಿ ಸಂಚರಿಸಿ ಮೂಲಭೂತ ಸೌಲಭ್ಯಗಳನ್ನು ಪಕ್ಷ ಬೇಧ ಮರೆತು ಒದಗಿಸಿ ಎಂದರು,
ಮರಾಠ ಅಬಿವೃದ್ಧಿ ನಿಗಮದ ಬಗ್ಗೆ ಕೇಳಿದಾಗ, ರಾಜ್ಯದ ಆರುವರೆ ಕೋಟಿ ಜನತೆಯ ವಿರುದ್ದ ಯಾವುದೇ ಸರ್ಕಾರ ನಡೆಯಲು ಸಾಧ್ಯವಿಲ್ಲ ಮರುಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಇದರ ಬಗ್ಗೆ ನನಗೆ ಸಹಮತವಿಲ್ಲ ಎಂದರು
ಬೈಟ್ :- ನೂತನ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ನಾಗೇಶ್ ಮಾತನಾಡಿ ಪಟ್ಟಣದ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ, ಚರಂಡಿ, ರಸ್ತೆ ಇವುಗಳ ನಿರ್ವಹಣೆ ಹಾಗೂ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ ಇನ್ನೂ ಹೆಚ್ಚಿನ ರೀತಿ ನಿರ್ವಹಿಸಲು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯರ ಸಹಕಾರ ಹಾಗೂ ಎಲ್ಲಾ ಸದಸ್ಯರ ಸಹಕಾರ ಅವಶ್ಯ, ಮುಂದಿನ ದಿನಗಳಲ್ಲಿ ಶಾಸಕರ ಹಾಗೂ ಸರ್ಕಾರದ ಅನುದಾನದಿಂದ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಪಡಿಸಲಾಗುವುದು, ನನ್ನ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಹಾಗೂ ಜೆಡಿಎಸ್, ಕಾಂಗ್ರೆಸ್ ಮುಖಂಡರೆಲ್ಲರಿಗೂ ಧನ್ಯವಾದಗಳು ಎಂದರು.
ಈ ಸಮಯದಲ್ಲಿ ಜೆಡಿಎಸ್ ಮುಖಂಡರಾದ ಮುನಿನಂಜಪ್ಪ, ರವಿಕುಮಾರ್, ಸಾಯಿಕುಮಾರ್, ಭರತ್ಕುಮಾರ್, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಉಪಾಧ್ಯಕ್ಷೆ ಶ್ರೀಮತಿ ಕೆ.ಆರ್.ಪುಷ್ಪಲತಾ ಲಕ್ಷ್ಮೀನಾರಾಯಣ್ ಪುರಸಭಾ ಸದಸ್ಯರುಗಳಾದ ವಿ.ಕೋಮಲ, ಕೆ.ಗೀತಾ, ಲೀಲಾವತಿ, ಎಂ.ಸೋಮಶೇಖರ್ಬಾಬು, ಹು||ವೇಣುಗೋಪಾಲ್(ಗೋಪಿ) ನಾರಾಯಣಸ್ವಾಮಿ (ಬಾಂಬೆ), ಡಿ.ಆರ್.ಬಾಲರಾಜು, ಎನ್.ಕೆ.ಮಂಜುನಾಥ್, ಎಸ್.ಸಿ.ಚಂದ್ರಪ್ಪ, ಎಸ್.ಸುಮಿತ್ರ, ಡಿ.ಗೋಪಮ್ಮ, ಎನ್.ರಘು, ಮಂಜುಳಾ, ಜಿ.ಸುರೇಶ್, ಜಿ.ಎ.ರವೀಂದ್ರ, ವಿ.ಚೈತ್ರ, ಡಿ.ಎಂ.ಮುನಿಕೃಷ್ಣ, ಲಕ್ಷ್ಮೀ ಅಂಬರೀಶ್, ರತ್ನಮ್ಮರವಿಕುಮಾರ್, ಎಸ್.ನಾಗೇಶ್ ಭಾಗವಹಿಸಿದ್ದರು.
ಚಿತ್ರಸುದ್ದಿ : ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್ ಶಾಸಕ ನಿಸರ್ಗ ನಾರಾಯಣಸ್ವಾಮಿರವರನ್ನು ಅಭಿನಂದಿಸಿದರು.

About Author

More Stories

You may have missed