लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕಾಲೇಜು ಶುಲ್ಕವ​ನ್ನೇ ದಂಡ ಕಟ್ಟಿ ಕಣ್ಣೀರು ಸುರಿಸಿದ ವಿದ್ಯಾರ್ಥಿ : ಹಣ ಕೊಟ್ಟು ಸಂತೈಸಿದ ಮಹಿಳಾ ಸಬ್ ಇನ್ಸ್ ಪೆಕ್ಟರ್.”

1 min read

ಪೊಲೀಸರ ಸಿಟ್ಟು – ಗತ್ತಿಗೆ ಅವರನ್ನು ಕಂಡಾಗ ಅಂಜುವವರಿದ್ದಾರೆ. ಮತ್ತೆ ಕೆಲವರು ಇವರಿಗೆ ಕರುಣೆ ಇಲ್ಲ, ಖಾಕಿ ತೊಟ್ಟ ಪೊಲೀಸರು ಕಟುವಾಗಿರುತ್ತಾರೆ ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆ ಮಹಿಳಾ ಪಿಎಸ್​ಐ ವಿದ್ಯಾರ್ಥಿ‌ ಮೇಲೆ ತೋರಿದ ಮಮತೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಪೊಲೀಸರಲ್ಲೂ ಕರುಣೆ, ಕನಿಕರ‌ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪಿಎಸ್​ಐ ಮಾಡಿದ ಕಾರ್ಯ ಇಡೀ ದೇಶಾದ್ಯಂತ ವೈರಲ್ ಆಗಿದೆ.

ಮೂವರು ಕಾಲೇಜು ವಿದ್ಯಾರ್ಥಿಗಳು ಬೈಕ್ ನಲ್ಲಿ ತ್ರಿಬಲ್‌ ರೈಡ್​ ಬರುತ್ತಿದ್ದರು. ಇದನ್ನು ನೋಡಿದ ಬಾಗಲಕೋಟೆ ಇಳಕಲ್‌ ನಗರಠಾಣೆ ಮಹಿಳಾ ಪಿಎಸ್​ಐ ಎಸ್.ಆರ್. ನಾಯಕ್‌ ಓಡಿ ಹೋಗಿ ವಿದ್ಯಾರ್ಥಿಗಳನ್ನು ಹಿಡಿದು ದಂಡ ಹಾಕಿದ್ದಾರೆ. .
ಆದರೆ ಅದರಲ್ಲಿ ಒಬ್ಬ ವಿದ್ಯಾರ್ಥಿ ಕಣ್ಣೀರು ಹಾಕಿದ್ದಾನೆ. ಆತನನ್ನು ಪಿಎಸ್ ಐ ಎಸ್ ಆರ್ ನಾಯಕ್ ಯಾಕೆ ಅಂತ‌ ಕೇಳಿದಾಗ ಕಾಲೇಜು ಫೀಸ್ ಕಟ್ಟೋದಕ್ಕೆ ಮನೆಯಲ್ಲಿ ಹಣ ಕೊಟ್ಟಿದ್ದರು. ಅದನ್ನೇ ಈಗ ದಂಡ‌ ಕಟ್ಟಿದ್ದೇನೆ. ಮನೆಯಲ್ಲಿ ಬೈತಾರೆ ಅಂತ ಗಳ ಗಳ ಅತ್ತಿದ್ದಾನೆ.

ಆತನನ್ನು ತಬ್ಬಿಕೊಂಡು ಸಾಂತ್ವನ ಹೇಳಿದ ಎಸ್​.ಆರ್ ನಾಯಕ್ ತಮ್ಮ ಪರ್ಸ್​ನಿಂದ ಹಣ ಕೊಟ್ಟು ಸಮಾಧಾನ ಮಾಡಿದ್ದಾರೆ. ಈ ವಿಡಿಯೋ ದೇಶದಾದ್ಯಂತ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿರುವ ಅವರು, ‘ನಾನು ಕಡುಬಡತನದಲ್ಲಿ ಓದಿದವಳು. ನಾನು ರೈತನ ಮಗಳು. ಆ ವಿದ್ಯಾರ್ಥಿ ಕೂಡ ರೈತನ ಮಗ. ಆತನ ಕಷ್ಟ ನೆನೆದು ನನ್ನ ‌ಮಗನೇ ಅಳುತ್ತಿರುವಂತೆ ಭಾಸವಾಯಿತು. ನನ್ನ ವಿದ್ಯಾರ್ಥಿ ದಿನ ನೆನಪಾಯ್ತು. ಅದಕ್ಕೆ ನಾನು ಭಾವುಕಳಾದೆ. ಪೊಲೀಸರೆಂದರೆ ಕೆಟ್ಟವರಲ್ಲ ಅವರಲ್ಲೂ‌ ಮಾನವೀಯತೆ ಇದೆ. ನಮ್ಮನ್ನು ಕೆಟ್ಟವರಂತೆ ನೋಡಬೇಡಿ’ ಎಂದು ಹೇಳಿದ್ದಾರೆ.

ಅಂದು ನಾನು ನನ್ನ ಪಾಡಿಗೆ‌ ಕೆಲಸ ಮಾಡುತ್ತಿದ್ದೆ. ಯಾರೋ ವಿಡಿಯೋ ‌ಮಾಡಿ ವೈರಲ್‌ ಮಾಡಿದ್ದಾರೆ. ನಾನು ಇದನ್ನು ಪ್ರಚಾರಕ್ಕೆ ಮಾಡಿಲ್ಲ. ಇದನ್ನು ವೈರಲ್ ಮಾಡಲಾಗಿದೆ. ರಾಜ್ಯ, ಪರರಾಜ್ಯದಿಂದಲೂ ಜನರು ಕರೆ‌ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಾನು ಎಂಟನೇ ತರಗತಿ ಓದುವಾಗ ತಂದೆ ತೀರಿಕೊಂಡರು. ನಾವು ಐದು ಜನ ಮಕ್ಕಳು‌. ನಾನೇ ಹಿರಿಮಗಳು. ಕುಟುಂಬದ ಜವಾಬ್ದಾರಿ ‌ನನ್ನ ಮೇಲಿತ್ತು’.

ನನ್ನ ತಾಯಿ ಕೂಲಿ‌ ಮಾಡಿ ಓದಿಸಿದ್ದಾರೆ. ಆ ವಿದ್ಯಾರ್ಥಿ ಕಣ್ಣೀರು ನೋಡಿ ನನಗೆ ತಡೆದುಕೊಳ್ಳಲಾಗಲಿಲ್ಲ. ಬಡ ರೈತರ‌ ಮಕ್ಕಳಿಗೆ ಒಂದು ನೂರು ರೂ. ಕೂಡ ಬಹಳ ಮುಖ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಟೇಲರಿಂಗ್ ಮಾಡಿ ಕಲಿತಿದ್ದೇನೆ. ಆ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಬಡತನ ಕಷ್ಟದ ಜೊತೆಗೆ ಓದಿ ಪೊಲೀಸ್ ಇಲಾಖೆ ಸೇರಿದ್ದೇನೆ. ಅಂದು ಆ ವಿದ್ಯಾರ್ಥಿ ಕಣ್ಣೀರು ಕಂಡು ನನ್ನ ಎಲ್ಲ ಕಷ್ಟ ಕಣ್ಮುಂದೆ ಬಂತು. ಅದಕ್ಕೆ ಆತನನ್ನು ತಬ್ಬಿಕೊಂಡು ಸಾಂತ್ವನ‌ ಹೇಳಿದೆ’ ಎಂದು ಕಣ್ಣೀರು ಹಾಕಿ ಭಾವುಕರಾದರು. ಅದು ಇಷ್ಟೊಂದು ವೈರಲ್ ಆಗಿ ಮೆಚ್ಚುಗೆ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಿದರು. ಪಿಎಸ್​ಐಎಸ್​ಆರ್​ ನಾಯಕ ಕಾರ್ಯಕ್ಕೆ ಸಹೋದ್ಯೋಗಿ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದರು.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990=

About Author

More Stories

Leave a Reply

Your email address will not be published. Required fields are marked *

You may have missed