लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರವೇ ತಾಲೂಕು ಮಹಿಳಾ ಘಟಕ ಉದ್ಘಾಟನೆ ಮಾಡಲಾಯಿತು. #avintvcom

1 min read
Featured Video Play Icon

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹುಣಸಗಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರವೇ ತಾಲೂಕು ಮಹಿಳಾ ಘಟಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರ ಘಟಕದ ಗೌರವಧ್ಯಕ್ಷರು ನಂದನ್ ಗೌಡ ಬಿರಾದರ್ ಮಾತನಾಡಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇರುವಂತ ಆಗಬಾರದು ಅವರಿಗೂ ಕೂಡ ಪುರುಷರಿಗೆ ಇರುವಂತಹ ಹಕ್ಕು ಮಹಿಳೆಗೂ ಕೂಡ ಇದೆ ಹಾಗಾಗಿ ಕರವೇ ಮಹಿಳಾ ಘಟಕದ ಮುಖಾಂತರ ತಾವು ನಾಡು-ನುಡಿಗಾಗಿ ಸೇವೆ ಸಲ್ಲಿ ಸಲ್ಲಿ ಸಲು ಪಾಲ್ಗೊಂಡಿರುವುದು ತುಂಬಾ ಸಂತೋಷದ ವಿಷಯ ತಮಗೆ ತುಂಬು ಹೃದಯದ ಅಭಿನಂದನೆಗಳನ್ನು ಹೇಳುತ್ತೇನೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಕರವೇ ತಾಲೂಕು ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಶಿವಲಿಂಗ ಸಾಹು ಪಟ್ಟಣಶೆಟ್ಟಿ ನೂತನ ತಾಲೂಕ ಅಧ್ಯಕ್ಷರು ಹುಣಸಗಿ, ಮಹಿಳೆಯರು ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಅದೇ ರೀತಿಯಲ್ಲಿ ಪ್ರತಿಯೊಬ್ಬ ಮಹಿಳೆಯೂ ಕೂಡ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯತೆಯಿದೆ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಬೇಕೆಂದು ಹೇಳಿದರು.
ಕರವೇ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂತ ಶರಣಮ್ಮ ದೊಡ್ಡಮನಿ ಮಾತನಾಡಿ ಕರವೇ ದಲ್ಲಿ ಮಹಿಳೆಯರಿಗೆ ಸಮಾಜಕ್ಕಾಗಿ ನಾಡು-ನುಡಿಗಾಗಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಕರವೇ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸಿದರು, ಕರವೇ ಮಹಿಳಾ ತಾಲೂಕು ಘಟಕದ ಗೌರವಾಧ್ಯಕ್ಷ ರಾಗಿ ಶರಣಮ್ಮ ಸಗರ್,
ಅಧ್ಯಕ್ಷರಾಗಿ ಶರಣಮ್ಮ ದೊಡ್ಡಮನಿ ಉಪಾಧ್ಯಕ್ಷರಾಗಿ ಸವಿತಾ ನಡಿಗೆರ್ ಪ್ರಧಾನ ಕಾರ್ಯದರ್ಶಿಗಳಾಗಿ ಲಕ್ಷ್ಮಿ ಕಕ್ಕೇರ ಸಂಚಾಲಕರಾಗಿ ಬೋರಮ್ಮ ಹಂಗರಗಿ ಕಾರ್ಯದರ್ಶಿಗಳಾಗಿ ಜೈಶ್ರೀ ಬಡಿಗೇರ್ ಸಹ ಕಾರ್ಯದರ್ಶಿಗಳಾಗಿ ಸಂಗೀತ ಮೇಟಿ ಸಂಘಟನಾ ಕಾರ್ಯದರ್ಶಿಗಳಾಗಿ ಕಾತನ ಜಿನತ ಬೇಗಮ್, ಸಹ ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀದೇವಿ ಖಜಾಂಚಿಯಾಗಿ ಲಕ್ಷ್ಮಿ ಹೆಬ್ಬಾಳ ಬಿ ಉಪ ಖಜಾಂಚಿಯಾಗಿ ಲಕ್ಷ್ಮಿ ದೊಡ್ಡಮನಿ, ಈ ರೀತಿಯಾಗಿ ಮಹಿಳಾ ಘಟಕ ಆಯ್ಕೆಯಾಯಿತು ಬಸವರಾಜ ಕಟ್ಟಿಮನಿ ಕಾಮನಟಗಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕ ನಗರ ಘಟಕ ಆಟೋ ಚಾಲಕರ ಘಟಕ ಯುವ ಘಟಕ ರೈತ ಘಟಕ ವಿದ್ಯಾರ್ಥಿ ಘಟಕ ಗ್ರಾಮ ಘಟಕದ ಎಲ್ಲ ಕರವೇ ಮುಖಂಡರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author

More Stories

You may have missed