लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶಿಕ್ಷಣವೆಂಬುದು ಹುಲಿಯ ಹಾಕಿದ್ದಂತೆ ಕುಡಿದವರೆಲ್ಲರೂ ಫರ್ಜಸಲೇಬೇಕು”…..

1 min read

“ಶಿಕ್ಷಣವೆಂಬುದು ಹುಲಿಯ ಹಾಕಿದ್ದಂತೆ ಕುಡಿದವರೆಲ್ಲರೂ ಫರ್ಜಸಲೇಬೇಕು”

‎ಶಿಕ್ಷಣ ಹೋರಾಟ..

‎ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ, ಮೂಡಿಗೆರೆ.

‎135ನೇ ಡಾ. ಬಿ. ಆರ್. ಅಂಬೇಡ್ಕರ್‌ರವರ ಜನ್ಮ ದಿನಾಚರಣೆ

27-04-2026

‎ಸಮಯ ಬೆಳಗ್ಗೆ 10-30 ರಿಂದ

‎ಸ್ಥಳ : ಅಡ್ಯಂತಾಯ ರಂಗ ಮಂದಿರ, ಮೂಡಿಗೆರೆ

‎ಬಂಧುಗಳೇ,

‎ಭರತ ಖಂಡದಲ್ಲಿ ಹುಟ್ಟಿದವರೆಲ್ಲರೂ ಸಮಾನ ಹಕ್ಕುಗಳನ್ನುಳ್ಳವರಾಗಿರಬೇಕು ಪ್ರತಿಯೊಬ್ಬರು ವಿಕಾಸ ಹೊಂದಲು ಅನುಕೂಲವಾಗುವಂತೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕೆಂದು ಸ್ವಾತಂತ್ರ್ಯ, ಸಮಾನತೆ, ಸಮಾಜವಾದಿ, ಸಹೋದರತ್ವ ತತ್ವಗಳ ತಳಹದಿಯ ಮೇಲೆ ಆಧುನಿಕ ಭಾರತವನ್ನು ನಿರ್ಮಿಸಿದ ಆದರ್ಶ ವ್ಯಕ್ತಿತ್ವ ಡಾ.ಬಿ.ಆರ್. ಅಂಬೇಡ್ಕರ್ ರವರದು. ಡಾ. ಬಿ.ಆರ್. ಅಂಬೇಡ್ಕರ್ ಎಂದರೆ ಘನ ವಿದ್ವಾಂಸರು, ಮಹಾನ್ ವಿಚಾರವಂತರು, ಕಾನೂನು ಪಂಡಿತರು, ಲೇಖಕರು, ಚಿಂತಕರು, ಖ್ಯಾತ ಸಮಾಜಶಾಸ್ತ್ರಜ್ಞರು, ಸಂಶೋಧಕರು ಮತ್ತು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿ ಸ್ವಾವಲಂಬನೆಯ ಶಿಕ್ಷಣದ ಮೂಲಕ ಬೌದ್ಧಿಕ ವಿಕಾಸಕ್ಕೆ ದಾರಿಯಾಗುತ್ತದೆ ಎಂದು ಸಾರಿದವರು. ಶ್ರೀಮಂತರ ಸಿರಿತನ ದರಿದ್ರರ ಬಡತನದಲ್ಲಿದೆ. ಇದನ್ನು ನಿವಾರಿಸಬೇಕಾದರೆ ದುಡಿಯುವವರೆಲ್ಲರೂ ಜಾತಿ ಮತಗಳನ್ನು ಧಿಕ್ಕರಿಸಿ ಸಂಘಟಿತರಾಗಬೇಕೆಂದು ಕರೆ ನೀಡಿ, ಸಂಪತ್ತನ್ನು ಉತ್ಪಾದಿಸುವವರು ಹಸಿವಿನಿಂದ ಸಾಯಬೇಕಾಗಿಲ್ಲ ಎನ್ನುವ ಮೂಲಕ ಕಾರ್ಮಿಕ ವರ್ಗದ ಪರ ನಿಲುವು ಹೊಂದಿ 44 ಕಾರ್ಮಿಕ ಕಾಯ್ದೆಗಳ ಮೂಲಕ ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸಿದರು. ಶೋಷಿತ ಜನಾಂಗದ ಮುಖವಾಣಿಯಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಸಮಾನ ಅವಕಾಶಗಳು ಕಾನೂನು ಬದ್ಧವಾಗಿ ಲಭ್ಯವಾಗುವಂತೆ ಸತತ ಹೋರಾಟದ ಪ್ರತಿಫಲವಾಗಿ ಹೊಸ ಅರಿವು, ಜ್ಞಾನ, ಜಾಗೃತಿ, ಪ್ರಜ್ಞೆ ಮೂಡುವಂತಾಯಿತು ಆದರೆ ಇತ್ತೀಚಿನ ಬೆಳವಣಿಗೆಗಳು ಅಂಬೇಡ್ಕರ್ ಅವರ ಚಿಂತನೆ ಮತ್ತು ಆಲೋಚನೆಗೆ ವಿರುದ್ಧವಾಗಿ ಸಂಘಟಿತ ದಾಳಿಯ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಲುಗಾಡಿಸುವ ಪ್ರಯತ್ನ ನಡೆದಿದೆ. ಜಾತಿ-ಉಪಜಾತಿ, ಧರ್ಮ, ಕೋಮು, ಧಳ್ಳುರಿಯ ಮೀಸಲಾತಿಯ ಒಳ ಮೀಸಲಾತಿ ಸಂಘರ್ಷ ಮಿತಿಮೀರಿದೆ. ಐಕ್ಯತೆ ಬದಲು ವಿಭಜನೆ ಮೂಲಕ ಧೀನದಲಿತ ಬಡವ ಶೋಷಿತರಲ್ಲಿ ಆತ್ಮವಿಶ್ವಾಸವನ್ನೇ ಹತ್ತಿಕ್ಕುವ ಸಂಚು ನಡೆದಿದೆ. “ವಿಚಾರದ ಬದಲು ಪ್ರಚಾರ, ಬರವಣಿಗೆಯ ಬದಲು ಮೆರವಣಿಗೆ”, ಗೊತ್ತು ಗುರಿ ಇಲ್ಲದ ಕಾರ್ಯಕ್ರಮಗಳ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ರವರನ್ನು ಅವಮಾನಿಸುತ್ತಾ, ತನ್ನ ಸ್ವಾರ್ಥ ಸಾಧನೆಗೆ ಕೆಲವು ಶಕ್ತಿಗಳು ಮುಂದಾಗುತ್ತಿವೆ. ಹಲ್ಲೆ, ಅತ್ಯಾಚಾರ, ಅಸಮಾನತೆ, ಅವಮಾನ, ಹಸಿವು, ಬಡತನ, ನಿರುದ್ಯೋಗದ ವಿರುದ್ಧ ಬೀದಿಗಿಳಿಯಬೇಕಾದ ಜನರನ್ನು ಹಾದಿತಪ್ಪಿಸಲಾಗುತ್ತಿದೆ. ಡಾ. ಬಿ. ಆರ್. ಅಂಬೇಡ್ಕರ್ ರವರು ಮೂಡಿಸಿದ ಆತ್ಮವಿಶ್ವಾಸ, ಚೈತನ್ಯ ಮತ್ತು ಸ್ಪೂರ್ತಿಯಿಂದ ಪಡೆಯಬೇಕಾದ ಇವರ ವಿಚಾರಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಹಿನ್ನೆಲೆಯೊಂದಿಗೆ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಕೀಲರು, ಬರಹಗಾರರು, ಚಿಂತಕರು, ಮಹಿಳಾ ಮತ್ತು ದಲಿತ ಪರ ಶಕ್ತಿಗಳು, ವಿದ್ಯಾರ್ಥಿ ಯುವ ಜನರು ಒಂದಾಗಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ನೇತೃತ್ವದಲ್ಲಿ ಇದೇ ದಿನಾಂಕ : 27, 04. 2026 ನೇ |ಸೋಮವಾರದಂದು ನಗರದ ಅಡ್ಯಂತಾಯ ರಂಗಮಂದಿರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಚಿಂತಕರು ಮತ್ತು ಲೇಖಕರಾದ ಹಾಗೂ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರು ಮತ್ತು ಈ ವರ್ಷದ ದಸರಾ ಹಬ್ಬವನ್ನು ಉದ್ಘಾಟಿಸಿದ ಶ್ರೀಮತಿ ಬಾನು ಮುಸ್ತಾಕ್ ರವರು ಉದ್ಘಾಟಕರಾಗಿ ಹಾಗೂ ರಾಜ್ಯದ ಜನಪರ ಚಿಂತಕರು, ಬರಹಗಾರರಾಗಿರುವ ಶಿವಸುಂದರ್ ರವರು ಮುಖ್ಯ ಭಾಷಣಗಾರರಾಗಿ ಆಗಮಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೆಂಬಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯು ವಿನಂತಿಸಿಕೊಳ್ಳುತ್ತದೆ.

‎ಸಂಪರ್ಕಿಸಿ..
‎ಅಧ್ಯಕ್ಷರು

‎ಬಿ. ಬಿ. ನಿಂಗಯ್ಯ, ಮಾಜಿ ಸಚಿವರು..9448539813

‎ಅಭಿಜಿತ್, ಹೆಡದಾಳ್..96327 88503

‎ಸಿದ್ದೆಶ್ ಕೆಸವಳಲು…94809 65785

‎ಡಾ. ಹರೀಶ್, 9731493209

About Author

Leave a Reply

Your email address will not be published. Required fields are marked *

You may have missed