ಏ.೨೭ ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೫ ನೇ ಜನ್ಮ ದಿನಾಚರಣೆ….
1 min read
ಏ.೨೭ ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೫ ನೇ ಜನ್ಮ ದಿನಾಚರಣೆ
: ಬಿ.ಬಿ.ನಿಂಗಯ್ಯ
ಮೂಡಿಗೆರೆ : ಈ ದೇಶಕ್ಕೆ ಕೊಟ್ಟ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರ ಧಾರೆಗಳನ್ನು ತಿಳಿಸಿ ಹೇಳುವಲ್ಲಿ ಈ ಸರ್ಕಾರಿ ಕಾರ್ಯಕ್ರಮಗಳು ಸರಿಯಾದ ಕೆಲಸ ಮಾಡಿಲ್ಲ. ಆ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ ವತಿಯಿಂದ ಏ.೨೭ ರಂದು ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೫ ನೇ ಜನ್ಮ ದಿನಾಚರಣೆ ಹಮ್ಮಿಕೋಂಡಿರುವುದಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಾಜಿ ಸಚಿವರು, ಅಧ್ಯಕ್ಷರಾಗಿರುವ ಬಿ.ಬಿ.ನಿಂಗಯ್ಯ ತಿಳಿಸಿದರು.
ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು. ಡಾ.ಅಂಬೇಡ್ಕರ್ ಎಂದರೆ ಘನ ವಿದ್ವಾಂಸರು, ಮಹಾನ್ ವಿಚಾರವಂತರು, ಕಾನೂನು ಪಂಡಿತರು, ಲೇಖಕರು,ಚಿಂತಕರು ಖ್ಯಾತ ಸಮಾಜ ಶಾಸ್ತ್ರeರು ಸಂಶೋಧಕರು ಮತ್ತು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿದ ಅಂಬೇಡ್ಕರ್ ಅವರ ವಿಚಾರಗಳು ಕಾರ್ಯರೂಪಕ್ಕೆ ಬರಬೇಕಾಗಿದೆ. ಈ ಹಿನ್ನಲೆಯಲ್ಲಿ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಕೀಲರು, ಬರಹಗಾರರು,ಚಿಂತಕರು, ಮಹಿಳಾ ಮತ್ತು ದಲಿತ ಪರ ಶಕ್ತಿಗಳು ವಿಧ್ಯಾರ್ಥಿ ಯುವಜನರು ಒಂದಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರಿಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಶ್ರಿಮತಿ ಬಾನುಮುಷ್ತಾಕ್ ಉದ್ಘಾಟಕರಾಗಿ ಆಗಮಿಸಲಿದ್ದು ರಾಜ್ಯದ ಜನಪರ ಚಿಂತಕ ಹಾಗೂ ಬರಹಗಾರರಾದ ಶಿವ ಸುಂದರ್ ಮುಖ್ಯ ಭಾಷಣಗಾರರಾಗಿ ಆಗಮಿಸಲಿದ್ದಾರೆ ಎಂದರು.
ಮುಖಂಡ ಉಪಾಧ್ಯಕ್ಷರಾದ ಬಿ.ರುದ್ರಯ್ಯ ಮಾತನಾಡಿ ಅಂಬೆಡ್ಕರ್ ಅವರ ಚಿಂತನೆ ಆಲೋಚನೆ ಗೆ ವಿರುದ್ದವಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದು ವಿಚಾರದ ಬದಲು ಪ್ರಚಾರ, ಬರವಣಿಗೆಯ ಬದಲು ಮೆರವಣಿಗೆ ಗೊತ್ತು ಗುರಿ ಇಲ್ಲದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಅಮಾನಿಸುವ ಕೆಲಸ ಮಾಡುತ್ತಿದೆ. ೨೭ ರ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರ ಧಾರೆ ಮತ್ತು ಅವರ ತತ್ವಗಳ ಬಗ್ಗೆ ಹಾಗೂ ಅವರ ಉದ್ದೇಶಗಳನ್ನು ಸಾರ್ವಜನಿಕವಾಗಿ ಮುಂಡಿದಿಡುವ ಕೆಲಸವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಚರಣಾ ಸಮಿತಿ ಮೂಡಿಗೆರೆ ಹಮ್ಮಿಕೊಂಡಿದೆ ಎಂದರು.
ಈ ಘೋಷ್ಠಿಯಲ್ಲಿ ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್ಕುಮಾರ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಎಸ್.ಜೈರಾಂ, ಎಂ.ಎಸ್.ಅನಂತು, ಬೆಟ್ಟಗೆರೆ ಶಂಕರ್, ಕಾರ್ಯದರ್ಶಿ ಅಭಿಜಿತ್ ಹೆಡದಾಳ್,ಖಜಾಂಚಿ ಸಿದ್ದೇಶ್ ಕೆಸವಳಲು, ಕೋ ಆರ್ಡಿನೆಟರ್ ಡಾ.ಹರೀಶ್ ನಲ್ಕೆ, ಗೌರವಾಧ್ಯಕ್ಷ ದೇಜಪ್ಪ ಹೊಯ್ಸಳಲು, ಮರ್ಕಲ್ ಸತೀಶ್, ಹರೀಶ್ ಕೆಲ್ಲೂರು, ಶಿವಪ್ರಸಾದ್ ಬಾರತಿಬೈಲ್, ಸಂತೋಷ್ ಮೂಡಿಗೆರೆ ಉಪಸ್ಥಿತರಿದ್ದರು.

