लाइव कैलेंडर

April 2026
M T W T F S S
 12345
6789101112
13141516171819
20212223242526
27282930  
19/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಮೀಸಲಾತಿ ಕೊಡುವ ಸರ್ಕಾರ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶೋಷಣೆಯ  ವಸ್ತುವಾಗಿ ಗುರುತಿಸುತ್ತಾರೆ…..

1 min read

‎ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಮೀಸಲಾತಿ ಕೊಡುವ ಸರ್ಕಾರ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶೋಷಣೆಯ  ವಸ್ತುವಾಗಿ ಗುರುತಿಸುತ್ತಾರೆ.

‎ಈಗಾಗಲೇ ಮಹಿಳಾ ಮೀಸಲಾತಿ ಕಾನೂನು 2023 ಜಾರಿಯಾಗಿ ಸಂಸತ್ತು ಒಪ್ಪಿಕೊಂಡಿದೆ. ಕ್ಷೇತ್ರ ಪುನರ್ ವಿಂಗಡನೆ ನೆಪದಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಈಗ ತೀವ್ರ ಮುಖಭಂಗವಾಗಿದೆ. ಒಟ್ಟಿರುವ 550 ಸಂಸದರಲ್ಲಿ 298 ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದರೆ, 230 ಸದಸ್ಯರು ವಿರುದ್ಧ ಮತ ಚಲಾಯಿಸಿದರು. ಆದ್ದರಿಂದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲುಂಟಾಯಿತು.

‎             ದೇಶದ ಬೇರೆ ಬೇರೆ ಶಕ್ತಿಗಳು ದೇಶದ ಏಕತೆಗೆ ಧಕ್ಕೆ ತಂದಾಗ  ದೇಶ ಆಳುವವರು ದೇಶ  ಕಾಪಾಡುವುದು ಜವಾಬ್ದಾರಿ. ಈಗ ದೇಶ ಆಳುವವರೇ ದೇಶಕ್ಕೆ ಧಕ್ಕೆ ತರಲು ಹೊರಟಿದ್ದಾರೆ. D. ಲಿಮಿಟೇಷನ್ ಮುಖಾಂತರ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಂದಾಗಿದ್ದರು. ಡಿ ಲಿಮಿಟೇಶನ್ ಎಂದರೆ ಕ್ಷೇತ್ರ ಪುನರ್ ವಿಂಗಡನೆ ಮಾಡಿ ಹಂಚಿಕೆ ಮಾಡುವುದು ಇದರಲ್ಲಿ ಕೆಲವೊಂದು ರಾಜ್ಯಕ್ಕೆ ಹೆಚ್ಚಿನ ಸೀಟು ಸಿಗಬಹುದು ಕೆಲವು ರಾಜ್ಯಕ್ಕೆ ಕಡಿಮೆ ಸೀಟು ಸಿಗಬಹುದು ಈ ದೇಶದ ಏಕತೆ ಅಡಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಮಪ್ರಮಾಣದ ಜನ ಇರಲ್ಲ . ಸಣ್ಣಪುಟ್ಟ ರಾಜ್ಯಗಳಲ್ಲಿ ಈ ಮಾನದಂಡ ಅನುಸರಿಸಿದರೆ ಕೆಲವೇ ಎಂಪಿಗಳು ಸಿಗಬಹುದು ಭಾರತ ದೇಶವು ಒಕ್ಕೂಟ ವ್ಯವಸ್ಥೆಯ ದೇಶ.ನಾವು ಯಾವುದೇ ಭಾಷೆ ಮಾತನಾಡುವ ಜನರ ರಾಜ್ಯವನ್ನು ಎರಡನೇ ದರ್ಜೆಯ ರಾಜ್ಯವನಾಗಿ ನೋಡುವುದಿಲ್ಲ ಆದರೂ ಕೂಡ ಪ್ರತಿ 10 ವರ್ಷಕ್ಕೊಂದು ಬಾರಿ ನಡೆಯುವ ಜನಗಣತಿ ಆಧರಿಸಿ 1971 ರ ತನಕ ಈ ದೇಶದಲ್ಲಿ ಒಂದು ಪದ್ಧತಿ ಇತ್ತು, ಕ್ಷೇತ್ರವನ್ನು ಪುನರ್ ವಿಂಗಡನೆ ಮಾಡುವುದು ಈ ರೀತಿ ಮಾಡುವುದರಿಂದ ಕೆಲವೊಂದು ರಾಜ್ಯಗಳಿಗೆ ಹೆಚ್ಚು ಕೆಲವೊಂದು ರಾಜ್ಯಗಳಿಗೆ ಕಡಿಮೆ ಕ್ಷೇತ್ರ  ಹಂಚಿಕೆಯಾಗುತ್ತಿತ್ತು. 1971 ಹೊತ್ತಿಗೆ  ಜನಸಂಖ್ಯಾ ಸ್ಪೋಟವಾಯಿತು.ಕಡಿಮೆ ಮಾಡಬೇಕೆಂದು ಸರ್ಕಾರ ಕಡ್ಡಾಯವಾಗಿ ಗಂಡಸರಿಗೆ ” ನಸ್ ಬಂದಿ “ಮಾಡಿ ಜನಸಂಖ್ಯೆ ನಿಯಂತ್ರಣ ಮಾಡಲು ಸರ್ಕಾರ ನಿರ್ಧರಿಸಿತು . ಜನಸಂಖ್ಯಾ ಸ್ಪೋಟ ಮತ್ತು ನಿಯಂತ್ರಣಗಳು ಸರ್ಕಾರದ ಚರ್ಚೆಯಲ್ಲಿತ್ತು , 1971ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗಬಾರದೆಂದು ಒಂದು ತಿದ್ದುಪಡಿ ತರಲಾಯಿತು. ಅಲ್ಲಿವರೆಗೆ ದೇಶದ ಬಡತನ ಒಂದೆ ಸಮಾನವಾಗಿತ್ತು. ಕ್ಷೇತ್ರ ವಿಂಗಡನೆ 25 ವರ್ಷ ಮುಂದೂಡಲಾಯಿತು.ನಂತರ ವಾಜಪಾಯಿ ಸರ್ಕಾರ ಕೂಡ ಇದೇ ತೀರ್ಮಾನವನ್ನು ಕೈಗೊಂಡಿತು.ಈ 50 ವರ್ಷದಲ್ಲಿ ಜನಸಂಖ್ಯೆ ಪ್ರಮಾಣವು ಏರುಪೇರ ಆಯ್ತು.

‎ಸ್ವತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ವಸಹಾತು ಶಾಹಿ ಹೋರಾಟ ಮಾಡುವಾಗ ಹಲವಾರು ಜಾತಿ, ಧರ್ಮ, ಭಾಷೆ ಜನ ಒಟ್ಟಾಗಿ ಹೋರಾಡಿ ಭಾರತ ಒಂದು ದೇಶ ಎಂದು ಮನೋಭಾವನೆ ಬೆಳೆಸಿತು ನಂತರ ಕೆಲವೊಂದು ಪ್ರದೇಶದಲ್ಲಿ ಜನರಿಗೆ ವಿಶೇಷ ಸ್ಥಾನಮಾನ ನೀಡಲಾಯಿತು ಉದಾಹರಣೆ ಆರ್ಟಿಕಲ್ 370 ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೇರೆ ಬೇರೆ ರಾಜ್ಯದಿಂದ ಹೋದವರು ಆಸ್ತಿ ಖರೀದಿಸುವ ಆಗಿರಲಿಲ್ಲ. ಹಾಗೆ ಕರಗಿಸಬೇಕಾದರೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕಾಯಿತು.ಆರ್ಟಿಕಲ್ 371( 1) ABCDEF ಎಂಬ ಕಾಲಂಗಳು ಇದ್ದವು ಇವು ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನಗಳನ್ನು ದೊರಕಿಸಿ ಕೊಡುತ್ತಿತ್ತು.ಅದೇ ರೀತಿ ದಲಿತರ ವಿಮೋಚನೆಗೆ ಮೀಸಲಾತಿ, ಅಲ್ಪಸಂಖ್ಯಾತರಿಗೆ ವಿಶೇಷ ಸ್ಥಾನಮಾನ,ಮಹಿಳೆಯರಿಗೆ ವೋಟಿನ ಹಕ್ಕು.ಹಲವಾರು ವಿಚಾರಗಳಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತಿತ್ತು.ಕೇಂದ್ರ ಸರ್ಕಾರ ನಿಭಾಯಿಸುತ್ತಿತ್ತು , ದೇಶದ ಹಿತಕ್ಕೋಸ್ಕರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು.ರಾಜ್ಯಗಳಿಗೆ ಹಕ್ಕುಗಳನ್ನು ಹೆಚ್ಚು ಮಾಡುತ್ತೇವೆ.ಇದು ದೇಶದ ಏಕತೆ ಎಂದ ಕೇಂದ್ರ ಸರ್ಕಾರ.1971ರ ನಂತರ ಕಾಂಗ್ರೆಸ್ಸು, ಜನತಾ ,ಸರ್ಕಾರ ಮಾಡದ ಕ್ಷೇತ್ರ ಪುನರ್ ವಿಂಗಡಣೆಯನ್ನು ಜಾರಿ ತರಲು ನಿರ್ಧರಿಸಿತು . ಇದರಲ್ಲಿ ಕೆಲವು ರಾಜ್ಯಗಳು ಹೆಚ್ಚು ಕ್ಷೇತ್ರಗಳಿವೆ ಲಭಿಸಿದರೆ ಕೆಲವು ರಾಜ್ಯಗಳಿಗೆ ಕಡಿಮೆ ಕ್ಷೇತ್ರ ಲಭ್ಯವಾಗುತ್ತಿತ್ತು. ಈ ಮೂಲಕ ಸಂಸತ್ತಿನಲ್ಲಿ ಹೆಚ್ಚು ಧ್ವನಿ ಯಾಗುತ್ತದೆ ಎನ್ನುವ ಸುಳ್ಳನ್ನು ಹೇಳಿ 850 ಲೋಕಸಭಾ ಸ್ಥಾನಗಳಿಗೆ ಏರಿಸುವ ವಿಶೇಷ ಅಧಿವೇಶನ ಕರೆದಿದ್ದು 2011ರ ಜಾತಿಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗುತ್ತದೆ. ಅದಕ್ಕೊಂದು ವಿಶೇಷ ಆಯೋಗವನ್ನು ರಚನೆ ಮಾಡಿ ಆಯೋಗ ತೀರ್ಮಾನವೇ ಅಂತಿಮ. ಈ ತೀರ್ಮಾನದ ವಿರುದ್ಧ ಯಾರು , ಪ್ರಶ್ನೆ ಮಾಡುವ ಹಾಗಿಲ್ಲ. ಆದರೆ ಕೆಲವು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ  ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದಾಗ ಇದರಲ್ಲಿ ಮಹಿಳೆಯರ 33 ಶೇಕಡ ಮೀಸಲಾತಿ ತರುವುದಾಗಿ ಘೋಷಿಸಿದ್ದಾರೆ. ಈಗಾಗಲೇ 2023 ರಲ್ಲಿ ಮಹಿಳೆಯರಿಗಾಗಿ ಮೋದಿ ಸರ್ಕಾರ ಮೀಸಲಾತಿಯನ್ನು ಜಾರಿಗೆ ತಂದು ಸಂಸತ್ತು ಒಪ್ಪಿಕೊಂಡಿದೆ ಇದು ಒಂದು ವೇಳೆ ಜಾರಿ ಆಗಿದ್ದರೆ ಬಿಜೆಪಿ ಇರುವ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳನ್ನು ಕೊಟ್ಟು ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು  ಅಧಿಕಾರ ನಡೆಸುವ ಉದ್ದೇಶವಾಗಿತ್ತು. ಆದರೆ 230 ಸಂಸದರ ಪ್ರಜ್ಞಾವಂತಿಕೆಯಿಂದ ಮಸೂದೆ ಅಂಗೀಕಾರ ಆಗುವುದನ್ನು ತಡೆಗಟ್ಟಿ ತಮ್ಮ ಸ್ಥಾನದ ಜವಾಬ್ದಾರಿಯನ್ನು ಸಾಬೀತುಪಡಿಸಿದ್ದಾರೆ. ಇಂಥ ವಿಚಾರಗಳಲ್ಲಿ ಪ್ರಜ್ಞಾವಂತ ಪ್ರಜೆಗಳು ಸಂವಿಧಾನವನ್ನು  ರಕ್ಷಿಸಲು ಹೋರಾಟ ರೂಪಿಸುವುದು ಅವಶ್ಯಕ.

‎             ಕೃಷ್ಣಪ್ಪ.ಕೆ.ಕೆ

‎             TUCI ಕಾರ್ಮಿಕ ಸಂಘ

About Author

More Stories

Leave a Reply

Your email address will not be published. Required fields are marked *

You may have missed