ಮಲ್ಲಿಕಾರ್ಜುನ ಖರ್ಗೆ ಪ್ರಚೋದನಕಾರಿ ಭಾಷಣ ಖಂಡಿಸಿ ದೂರು….
1 min read
ಮಲ್ಲಿಕಾರ್ಜುನ ಖರ್ಗೆ ಪ್ರಚೋದನಕಾರಿ ಭಾಷಣ ಖಂಡಿಸಿ ದೂರು
ಆಲ್ದೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡುವ ಸಂದರ್ಭ ಕುರಾನ್ನಲ್ಲಿ ಬರೆದಿದೆ ನಮಾಜ್ ಮಾಡುವ ಸಂದರ್ಭ ವಿಷ ಸರ್ಪ ಕಂಡರೆ ಅದನ್ನು ಕೊಲ್ಲಬೇಕು ಅದೇ ರೀತಿಯಲ್ಲಿ ಆರ್ ಎಸ್ ಎಸ್ ಬಿಜೆಪಿ ವಿಷ ಸರ್ಪವು ಕೂಡ ನೀವು ಅದನ್ನು ಕೊಲ್ಲದಿದ್ದರೆ ಅದು ನಿಮ್ಮನ್ನು ಕೊಲ್ಲುತ್ತದೆ ಆದ್ದರಿಂದ ಆರ್ ಎಸ್ ಎಸ್ ಬಿಜೆಪಿ ಸದಸ್ಯರನ್ನು ಕೊಲ್ಲಬೇಕು ಎಂದು ಪ್ರಚೋದಿಸಿದ್ದಾರೆ.
ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಮಲ್ಲಿಕಾರ್ಜುನ ಖರ್ಗೆ ತಮ್ಮ ಜವಾಬ್ದಾರಿಯನ್ನು ಮರೆತು ಅಲ್ಪಸಂಖ್ಯಾತರ ಹೋಲಿಕೆಯನ್ನು ಮಾಡುವ ಭರದಲ್ಲಿ ಬೇಜವಾಬ್ದಾರಿ ಪ್ರಚೋದನೆಯ ಭಾಷಣ ದೇಶದಲ್ಲಿರುವ ಲಕ್ಷಾಂತರ ಬಿಜೆಪಿ ಮತ್ತು ಆರ್ ಎಸ್ ಎಸ್ ಸದಸ್ಯರ ಜೀವಕ್ಕೆ ಅಪಾಯದ ಆತಂಕ ತಂದೊಡ್ಡುವಂತೆ ಮಾಡಿದ್ದಾರೆ.
ಇದು ಆರ್ ಎಸ್ ಎಸ್ ಮತ್ತು ಬಿಜೆಪಿ ಸಂಘಟನೆಯಲ್ಲಿ ದೇಶ ವ್ಯಾಪಿ ಇರುವಂತಹ ಸದಸ್ಯರ ಮೇಲಿನ ದಾಳಿಯ ಮುನ್ಸೂಚನೆಯಾಗಿದ್ದು ಇವರ ಹೇಳಿಕೆಯು ಮತಿಗೇಡಿಗಳಿಗೆ ಉತ್ತೇಜನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ, ವಿವಿಧ ಧರ್ಮ ಜನಾಂಗಭಾಷೆ ಪ್ರಾದೇಶಿಕ ಗುಂಪು ಸಮುದಾಯಗಳ ನಡುವೆ ದ್ವೇಷ ,ಹಗೆತನ, ಕೆಟ್ಟ ಭಾವನೆಯನ್ನು ಉತ್ತೇಜಿಸುವುದನ್ನು ಸೆಕ್ಷನ್ 196 ನಿಷೇಧಿಸುತ್ತದೆ ಈ ರೀತಿ ಸಮಾಜದ ಸಾಮರಸ್ಯ ಕೆಡಿಸಿ ಶಾಂತಿ ಭಂಗಕ್ಕೆ ಪ್ರಚೋದನೆ ನೀಡುವ ಭಾಷಣ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿ ಅವರ ಭಾಷಣದ ತುಣುಕನ್ನು ದೂರಿನೊಂದಿಗೆ ಲಗತ್ತಿಸಿ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡ ರವರಿಗೆ ಆಲ್ದುರು ಮಂಡಲ ಯುವ ಮೋರ್ಚಾ ವತಿಯಿಂದ ಶನಿವಾರ ದೂರನ್ನು ಸಲ್ಲಿಸಲಾಯಿತು.
ಮಂಡಲ ಯುವ ಮೋರ್ಚಾ ಅಧ್ಯಕ್ಷ ಸಿಂಧು ಕುಮಾರ್ ಐದಳ್ಳಿ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಶಿ, ಪ್ರಧಾನ ಕಾರ್ಯದರ್ಶಿ ಹರೀಶ್, ಕಾರ್ಯದರ್ಶಿ ಚೇತನ್ ಶೆಟ್ಟಿ, ಪದಾಧಿಕಾರಿಗಳಾದ ವಿನಯ್ ಕೆಳಗೂರು ,ಲಿಖಿತ್, ಯಶಸ್, ಪ್ರತಿನ್, ಲಕಿತ್, ನವೀನ್, ಇದ್ದರು.

