लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಡಿ ಕಲಿತು ನಲಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಭೇಟಿ*…

1 min read

*ಅಡಿ ಕಲಿತು ನಲಿದ ಶಾಲೆಗೆ ಹಳೆಯ ವಿದ್ಯಾರ್ಥಿಗಳಿಂದ ಆತ್ಮೀಯ ಭೇಟಿ*

ಕೊಟ್ಟಿಗೆಹಾರ : ಬಣಕಲ್ ಪ್ರೌಢಶಾಲೆಯ 2010-11ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಪುನರ್ಮಿಲನ ಕಾರ್ಯಕ್ರಮದ ಮುನ್ನೋಟವಾಗಿ ಸರಳ ಹಾಗೂ ಆತ್ಮೀಯವಾಗಿ ಒಂದಾಗಿ ಸೇರಿದರು.

ಈ ಸಂದರ್ಭದಲ್ಲಿ ಭಾಗವಹಿಸಿ, ತಮ್ಮ ಹಳೆಯ ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ಸಂತೋಷದಿಂದ ಭೇಟಿಯಾದರು. ಮುಂದಿನ ಪುನರ್ಮಿಲನ ಕಾರ್ಯಕ್ರಮದ ಬಗ್ಗೆ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಹಾಗೂ ಶಿಕ್ಷಕ ವೃಂದದವರೊಂದಿಗೆ ಚರ್ಚೆ ನಡೆಸಿ, ಎಲ್ಲರಿಗೂ ಅನುಕೂಲವಾಗುವ ಸಮಯದಲ್ಲಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ನಂತರ ತಮ್ಮ ಹಳೆಯ ತರಗತಿಯಲ್ಲಿ ಕೆಲಕಾಲ ಕಳೆಯುತ್ತಾ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ಬಳಿಕ ಉಪಹಾರ ಸೇವಿಸಿ, ಕೊನೆಯಲ್ಲಿ ಸ್ನೇಹಭಾವದಿಂದ ಕ್ರಿಕೆಟ್ ಆಟವಾಡಿ ಕಾರ್ಯಕ್ರಮವನ್ನು ಸಂತೋಷದಿಂದ ಮುಗಿಸಿದರು.

About Author

More Stories

Leave a Reply

Your email address will not be published. Required fields are marked *

You may have missed