लाइव कैलेंडर

October 2026
M T W T F S S
 1234
567891011
12131415161718
19202122232425
262728293031  
01/10/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೂಡಿಗೆರೆ ತಾಲ್ಲೂಕನ್ನು ಪ್ರವಾಹ ಪೀಡಿತ ಪ್ರದೇಶವನ್ನಾಗಿ ಮಾಡಲು ಸರ್ಕಾರಕ್ಕೆ ಒತ್ತಾಯ : ಭರವಸೆಯ ಶಾಸಕಿ ನಯನಾ ಮೋಟಮ್ಮರಿಂದ ಹೇಳಿಕೆ : ಎ.ಜೆ.ಸುಬ್ರಾಯಗೌಡ.”

1 min read

oplus_0

ಚಿಕ್ಕಮಗಳೂರು (Chikkamagaluru) ಜಿಲ್ಲೆಯ, ಮೂಡಿಗೆರೆ (Mudigere) ತಾಲ್ಲೂಕಿನಲ್ಲಿ ಹೆಚ್ಚಾಗಿ ಮಳೆ ಬೀಳುವ ಜತೆಗೆಅಧಿಕ ಹಾನಿ ಸಂಭವಿಸಿದೆ.ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರು ಸರಕಾರದ ಗಮನ ಸೆಳೆಯುವ ಮೂಲಕ ಉತ್ತಮ ಕಾರ್ಯನಡೆಸುತ್ತಿದ್ದಾರೆಂದು
ತಾ.ಪಂ.ಮಾಜಿ ಅಧ್ಯಕ್ಷ ಎ.ಜೆ.ಸುಬ್ರಾಯಗೌಡ ಹೇಳಿದರು.
ಅವರು ದಿನಾಂಕ 29/07/2024ರ ಸೋಮವಾರ ನಮ್ಮ ವಾಹಿನಿಯೊಂದಿಗೆ ಮಾತನಾಡಿ,ಕಸಬಾ,ಗೊಣಿಬೀಡು, ಬಾಳೂರು,ಬಣಕಲ್ ಹೋಬಳಿ ವ್ಯಾಪ್ತಿಯಲ್ಲಿ 75ಕ್ಕೂ ಅಧಿಕ ಮನೆಗಳು ಕುಸಿದಿದೆ.ರಸ್ತೆ,ಸೇತುವೆ ಹಾನಿಗೊಳಗಾಗಿವೆ. ಹಾಗಾಗಿ ಶಾಸಕಿನಯನಾ ಮೋಟಮ್ಮ ಅವರು ಸರಕಾರದ ಗಮನ ಸೆಳೆದು ಈಗಾಗಲೇ ಶೇ.100ರಷ್ಟು ಹಾನಿಗೊಳಗಾದ 30 ಮನೆಗೆ 1.2 ಲಕ್ಷ ರೂ ರೂ ಪರಿಹಾರದ ಹಣ ವಿತರಿಸಲಾಗಿದೆ.ಅಲ್ಲದೇ ಬಹುತೇಕ ಮನೆಗಳಿಗೆ ಹಕ್ಕು ಪತ್ರ ಇಲ್ಲದಿದ್ದರೂ ಪರಿಹಾರ ನೀಡಲಾಗಿದೆ.ಬೆಳೆಹಾನಿ ಪರಿಹಾರದ ಬಗ್ಗೆ ರೈತರ ಬೇಡಿಕೆಯಿದೆ.

ಉದುಸೆ,ಬೆಟ್ಟದಮನೆ,ಹಿರೇಶಿಗರ,ದೊಣಗೂಡು ಸೇರಿದಂತೆ ಹೇಮಾವತಿ ನದಿ ತೀರದ ಪಕ್ಕದಲ್ಲಿರುವ ಎಲ್ಲಾ ಕಾಫಿ ತೋಟಗಳಲ್ಲಿ ಕಾಫಿ ಕೊಳೆ ರೋಗದ ಜತೆಗೆ ಫಸಲಿಗೆ ಬಂದಿದ್ದ ಕಾಫಿ ಕಾಯಿ ಉದುರುತ್ತಿದೆ.ಈ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ನೀಡಿದ ಬಳಿಕ ಪರಿಹಾರ ದೊರಕಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಮಳೆಯಿಂದ ಜಿಲ್ಲಾಧ್ಯಂತ ಜನರು ವಿದ್ಯುತ್ ಸಮಸ್ಯೆ ಎದುರಿಸಬಾರದೆಂದು ಜಿಲ್ಲೆಗೆ 500 ಮಂದಿ ಮಾನ್ಸೂನ್ ಗ್ಯಾಂಗ್‌ಮೆನ್‌ಗಳನ್ನು ನೇಮಕ ಮಾಡಿದ್ದಾರೆ.ತಾಲ್ಲೂಕಿನಲ್ಲಿ ಆಗಿರುವ ಹಾನಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.ಅಲ್ಲದೇ ನಯನಾ ಮೋಟಮ್ಮ ಅವರು ಶಾಸಕರಾದ ಬಳಿಕ ತಾಲ್ಲೂಕಿನ ಅಂಗನಾಡಿ ಕಟ್ಟಡ,ಶಾಲೆ ದುರಸ್ತಿ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಕ್ಕೆ 40 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ.ಈಗ ತಾಲ್ಲೂಕನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಸರಕಾರಕ್ಕೆ ಒತ್ತಡ ಹಾಕುವ ಜೊತೆಗೆ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಹೆಚ್ಚಿನ ಅನುದಾನ ತಂದು ಹಾನಿ ಸಮಸ್ಯೆ ನಿಭಾಯಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.ಅವರ ಶ್ರಮಕ್ಕೆ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಹಂತೂರು ಗ್ರಾ.ಪಂ. ಸದಸ್ಯ ಡಿ.ಜಿ.ರಮೇಶ್ ಪಟೇಲ್,ಮುಖಂಡ ಡಿ.ಕೆ.ಶಂಕರೇಗೌಡ ಉಪಸ್ಥಿತರಿದ್ದರು.

✍️ಬರಹ ಕೃಪೆ.✍️

ಸಿದ್ದಿಕ್ ಚಕ್ಕಮಕ್ಕಿ.

7847891857.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

More Stories

Leave a Reply

Your email address will not be published. Required fields are marked *

You may have missed