ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ
1 min read
ಮಗ್ಗಲಮಕ್ಕಿ ಸರ್ಕಾರಿ ಶಾಲೆ ಯಲ್ಲಿ ದಿನಾಂಕ 03/12/2021 ರಂದು ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರವನ್ನ ಹಮ್ಮಿಕೊಳ್ಳಲಾಗಿತ್ತು. 25 ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ಡಾ. ಪ್ರಿಯಾಂಕ ದಂತ ವೈದ್ಯರು ಎಂ ಜಿ ಎಂ ಆಸ್ಪತ್ರೆ ಮೂಡಿಗೆರೆ ರವರು ಶಿಬಿರವನ್ನು ನಡೆಸಿಕೊಟ್ಟರು. ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ಉಚಿತ ಟೂತ್ಪೇಸ್ಟ್, ಬ್ರಷ್ ಮತ್ತು ಸಿಹಿ ವಿತರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ಮೂಡಿಗೆರೆ ಅಧ್ಯಕ್ಷರಾದ ಶ್ರೀ ಬಿ.ಎಲ್.ರಂಗನಾಥಗೌಡ, ಕಾರ್ಯದರ್ಶಿ ಮಗ್ಗಲಮಕ್ಕಿಜಯಕುಮಾರ್, ಮತ್ತು ಲ.ಹಳೇಕೋಟೆ ರಮೇಶ ಭಾಗವಹಿಸಿದ್ದರು .ಶಿಕ್ಷಕರಾದ ಶಿಲ್ಪಾ,ಮೀನ ರವರು ಭಾಗವಹಿಸಿದ್ದರು…..ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್