लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾರ್ಮಕ್ಕಿ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ವಿಜೃಂಬಣೆಯ ದೀಪೋತ್ಸವ.

1 min read
Featured Video Play Icon

ಕಾರ್ಮಕ್ಕಿ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ವಿಜೃಂಬಣೆಯ ದೀಪೋತ್ಸವ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಾರ್ಮಕ್ಕಿಯ ಶ್ರೀ ಮಾರಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಬಹಳ ವಿಜೃಂಬಣೆಯಿಂದ ನಡೆಯಿತು.
ತಳಿರುತೋರಣ. ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡ ದೇವಾಲಯದಲ್ಲಿ ಪ್ರತೀ ವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವವು ದಿನಾಂಕ:03:12:2021ರ ಶುಕ್ರವಾರದಂದು ಬಹಳ ವಿಜೃಂಬಣೆಯಿಂದ ನಡೆಯಿತು.
ದೀಪೋತ್ಸವ ಕಾರ್ಯಕ್ರಮದಲ್ಲಿ ದೇವಿಗೆ ಮಹಾಮಂಗಳಾರತಿ. ವಾದ್ಯಗೋಷ್ಠಿಯೊಂದಿಗೆ ದೇವಿಯ ಕೆಂಡೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಕಾರ್ಮಕ್ಕಿ ಹಾಗೂ ಸುತ್ತಲಿನ ಗ್ರಾಮಗಳಿಂದ ಬಂದ ನೂರಾರು ಭಕ್ತಾದಿಗಳು ದೀಪಗಳನ್ನು ಬೆಳಗಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾದರು.
ನಂತರದಲ್ಲಿ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಕಾರ್ಯಕ್ರಮದಲ್ಲಿ ಊರಿನ ಮುಖಂಡರು. ಬಿದರಹಳ್ಳಿ ಗ್ರಾಮಪಂಚಾಯಿತಿ ಸದಸ್ಯರು. ಗ್ರಾಮದ ಹಾಗೂ ಸುತ್ತಲಿನ ಗ್ರಾಮಗಳಿಂದ ಬಂದ ಭಕ್ತಾದಿಗಳು ವಿಜೃಂಬಣೆಯ ದೀಪೋತ್ಸವಕ್ಕೆ ಸಾಕ್ಷಿಯಾದರು.

 

ವರದಿ.
ಮಗ್ಗಲಮಕ್ಕಿ ಗಣೇಶ್.
ನ್ಯೂಸ್ ಬ್ಯೂರೊ
ಅವಿನ್ ಟಿ.ವಿ

Navachaitanya Old Age Home

Career | job

About Author