ಟೈಲರ್ ಅಸೋಸಿಯೇಷನ್ ಸಂಘದ ವತಿಯಿಂದ ಮಹಿಳೆಯರಿಗೆ ೧ ತಿಂಗಳ ಎಂಬ್ರಾಯಡರಿ ಉಚಿತ ತರಬೇತಿ
1 min read
ಮೂಡಿಗೆರೆ ತಾಲೂಕಿನ ನಗರ ಟೈಲರ್ ಅಸೋಸಿಯೇಷನ್ ಸಂಘದ ವತಿಯಿಂದ ಮಹಿಳೆಯರಿಗೆ ೧ ತಿಂಗಳ ಎಂಬ್ರಾಯಡರಿ ಉಚಿತ ತರಬೇತಿಯನ್ನು ತಾಲ್ಲೂಕು ಪಂಚಾಯಿತಿ ದೀನ್ ದಯಾಳ್ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು.
ಮೂಡಿಗೆರೆ ಶಾಸಕ ಎಂ. ಪಿ ಕುಮಾರಸ್ವಾಮಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಮಹಿಳೆಯರು ಇಂಥ ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸಬಲಗೊಳಿಸಿಕೊಳ್ಳಬಹುದು. ಮಹಿಳೆಯರು ಆದಾಯ ತಂದು ಕೊಡುವಂತಹ ಎಂಬ್ರಾಯಡರಿ ಹಾಗೂ ಟೈಲರಿಂಗ್ ನಂತಹ ಇತರ ನಾನಾ ಸ್ವಯಂ ಉದ್ಯೋಗದ ತರಬೇತಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ರಂಜನ್ ಅಜಿತ್ ಕುಮಾರ್ ಮಾತನಾಡಿ, ಮಹಿಳೆಯರ ಕೌಶಲ್ಯ ಹೆಚ್ಚಿಸಲು ಈ ಉಚಿತ ತರಬೇತಿ ಸಹಕಾರಿಯಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಅರ್ಥಿಕವಾಗಿ ಸಬಲರಾಗಲು ಸಹಕಾರ ನೀಡಲು ಸದಾ ಸಿದ್ಧ ಎಂದು ತಿಳಿಸಿದರು. ನಗರ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಪೂರ್ಣೇಶ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿಗಳಾದ ಮಂಚೇಗೌಡ,ಮೋಹನ್ ಲಾಲ್ ಜೈನ್,
ತರಬೇತಿ ಶಿಕ್ಷಕಿ ನಾಗಮಣಿ, ಸಂಘದ ಗೌರವಧ್ಯಕ್ಷರು ಹಾಗೂ ಪಧಾಧಿಕಾರಿಗಳು ಹಾಗೂ ನಾನಾ ಆಸಕ್ತರು ಭಾಗವಹಿಸಿದ್ದರು.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್