ಪ್ರಕೃತಿಯ ಅದ್ಬುತ ಅಲುಗಾಡುವ ಹುತ್ತ ” ಉಣ್ಣಕ್ಕಿ “
1 min read
ಮಕ್ಕಳ ಹುಣ್ಣಿಮೆ ಅಂದರೆ ದೀಪಾವಳಿ ಅಮಾವಾಸ್ಯೆಯ ನಂತರ ಬರುವ ಮಕ್ಕಳ ಹುಣ್ಣಿಮೆಯ ದಿನ ನಡೆಯುವ ಬಾನಹಳ್ಳಿಯ ಹುಣ್ಣಕ್ಕಿ ಉತ್ಸವ ಗುರುವಾರದಂದು ಬಹಳ ವಿಜ್ರಂಬಣೆಯಿಂದ ನಡೆಯಿತು.
ಮೂಡಿಗೆರೆ ತಾಲ್ಲೂಕು ಬಣಕಲ್ ಹೋಬಳಿಯ ಫಲ್ಗುಣಿ ಗ್ರಾಮಪಂಚಾಯಿತಿಯ ಬಾನಹಳ್ಳಿಯ ಹುಣ್ಣಕ್ಕಿ ಜಾತ್ರಾ ಮಹೋತ್ಸವ ಕಳೆದೆರಡು ವರ್ಷಗಳಿಂದ ಕೊರೋನ ಮಹಾಮಾರಿಯಿಂದ ಸ್ಥಗಿತಗೊಂಡಿತ್ತು.
ರಾತ್ರಿ 7 ರಿಂದ 9 ರ ವರೆಗೆ ಹುಣ್ಣಿಮೆ ಬೆಳದಿಂಗಳಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಹುತ್ತಕ್ಕೆ ಸುಣ್ಣವನ್ನು ಬಳಿದು ಚೆಂಡು ಹೂವು, ಮಲ್ಲಿಗೆ, ಹಸಿರು ಚಪ್ಪರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಮಹಾಮಂಗಳಾರತಿಯ ಸಮಯದಲ್ಲಿ ಹುತ್ತ ಅಲುಗಾಡುವ ವಿಸ್ಮಯವನ್ನು ಕಣ್ತುಂಬಿಕೊಂಡ ಭಕ್ತಾದಿಗಳು, ನಂತರ ಎರಡು ದನಗಳ ಕೊರಳಿಗೆ ಹೂವಿನ ಹಾರವನ್ನು ಹಾಕಿ ಅದಕ್ಕೆ ಮಡೆ ಅನ್ನವನ್ನು ಕೊಟ್ಟು ಹುತ್ತದ ಸುತ್ತ ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ಸೇರಿರುವ ಭಕ್ತಾದಿಗಳು ದನಗಳ ಮೇಲೆ ಮಂಡಕ್ಕಿಯನ್ನು ಎರಚಿ ತಮ್ಮ ಹರಕೆಯನ್ನು ತೀರಿಸಿದರು.
ಹೀಗೆ ಗುರುವಾರದಂದು ಬಹಳ ವಿಜೃಂಬಣೆಯಿಂದ ನಡೆದ ಉತ್ಸವಕ್ಕೆ ಊರಿನ ಹಾಗೂ ಸುತ್ತಮುತ್ತಲ ಊರಿನ ಸಾವಿರಾರು ಭಕ್ತರು ಸಾಕ್ಷಿಯಾದರು.
ಬರಹ ಕೃಪೆ.
ವಸಂತ್ ಹಾರಗೊಡ್.
ವರದಿ
ಮಗ್ಗಲಮಕ್ಕಿ ಗಣೇಶ್.
ನ್ಯೂಸ್ ಬ್ಯೂರೊ ಅವಿನ್ ಟಿ.