लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಜ಼ರತ್ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

1 min read
Featured Video Play Icon

ನಜ಼ರತ್ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ

ಮೂಡಿಗೆರೆ ನ. 14: ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ನಜ಼ರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ ವಿನೂತನವಾಗಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಕ್ಕಳಿಗೆ ದಿನವು ವಿಶೇಷತೆಯಿಂದ ಕೂಡಿತ್ತು. ಸಮವಸ್ತ್ರ ಹಾಗೂ ಯಾವುದೇ ರೀತಿಯ ಪುಸ್ತಕದ ಹೊರೆಯಿಲ್ಲದೇ ಖುಷಿಯಾಗಿ ಶಾಲೆ ಬರುವಂತೆ ಅವಕಾಶ ಕಲ್ಪಿಸಲಾಗಿತ್ತು.

ಶಿಕ್ಷಕರರಿಂದ ಬೆಳಗಿನ ಪ್ರಾರ್ಥನೆ ನಡೆಸಲಾಯಿತು ನಂತರ ಶಿಕ್ಷಕರಿಂದ ವಿವಿಧ ಬಗೆಯ ನೃತ್ಯ – ಸಂಗೀತ ನಾಟಕಗಳ ಮೂಲಕ ಮಕ್ಕಳಿಗೆ ರಂಜಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಹಿಲ್ಡಾ ಲೋಬೋ ಮಾತನಾಡಿ ಎಲ್ಲಾ ವೇದಿಕೆಯಲ್ಲಿ ನಾವು ಕುಳಿತುಕೊಳ್ಳುತ್ತಿದ್ದೇವು ಆದರೆ ಈ ದಿನ ಸಂಸತ್ತು ಪ್ರತಿನಿಧಿಸುವ ಮಕ್ಕಳಿಂದ ಜ್ಯೋತಿ ಬೆಳಗಿಸಿ ಅರ್ಥಪೂರ್ಣವಾದ ಮಕ್ಕಳ ದಿನಾಚರಣೆಗೆ ಚಾಲನೆ ನೀಡಲಾಗಿದೆ. ಅದೇ ರೀತಿ
ಸರ್ವ ಶಿಕ್ಷಕ ವರ್ಗದವರು ಸಂಪೂರ್ಣ ಸಹಕಾರ ನೀಡಿ ಮಕ್ಕಳ ಗುಣಾತ್ಮಕ ಕಲಿಕೆಗೆ ಉತ್ತಮ ವಾತಾವರಣ ಸಿಗುತ್ತಿದೆ ಮಕ್ಕಳಿಗಾಗಿ ಎಲ್ಲಾ ಶಿಕ್ಷಕರು ಪ್ರಮಾಣಿಕ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ನಂತರ ಸಿಸ್ಟರ್ ದೀಪ್ತಿ ಮಕ್ಕಳ ದಿನಾಚರಣೆ ಮಹತ್ವದ ಕುರಿತ ವಿವರವಾಗಿ ತಿಳಿಸುತ್ತಾ ಮಾತನಾಡಿದರು.
ಮಕ್ಕಳಿಗೆ ಸಿಹಿತಿಂಡಿ ಹಂಚುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ವರದಿ: ಮಗ್ಗಲಮಕ್ಕಿ ಗಣೇಶ್

Career | job

Assisted living facilities in Bangalore India

About Author