लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಸ್ವರ ಸಂಗಮಕೆ ಸಾಂಸ್ಕೃತಿಕ ರಾಯಭಾರಿಯ ಚಾಲನೆ | Avin Swara Sangama Facebook Live page Opening on16th Saturday 3.PM

1 min read
Featured Video Play Icon

ಅವಿನ್ ಸ್ವರ ಸಂಗಮಕೆ ಸಾಂಸ್ಕೃತಿಕ ರಾಯಭಾರಿಯ ಚಾಲನೆ
ಸಿರಿವಂತ ಸಂಸ್ಕೃತಿಯ ಅಭಿವ್ಯಕ್ತಿಯನ್ನು ಅನಾವರಣವನ್ನು ಗೊಳಿಸುವ ಮನೋರಂಜನೆಯ ಮಾಧ್ಯಮಗಳಾದ ಕಲೆ, ಸಾಹಿತ್ಯ, ಜಾನಪದ ಸಾಹಿತ್ಯ ಸಂಗೀತದ ಮೂಲಕ ಜನಮಾನಸವನ್ನು ರಂಜಿಸಲು ಅವಿನ್ ಟಿವಿಯು ಮತ್ತೊಂದು ವಿಶೇಷವಾದ ಮನರಂಜನೆಯ ಸಂಗೀತ ಕಾರ್ಯಕ್ರಮದ ಪ್ರಯೋಗವನ್ನು ಮಾಡಲು ಮುಂದಾಗಿದೆ.

ಅದೇ ನಮ್ಮ “ಅವಿನ್ ಸ್ವರ ಸಂಗಮ “ಎಂಬ ಮುಖ್ಯ ಶೀರ್ಷಿಕೆ ಮತ್ತು “ಬಾಳಯಾನಕ್ಕೆ ಗಾನ ಹಿಮ್ಮೇಳ “ಎಂಬ ಉಪ ಶೀರ್ಷಿಕೆಯ ಮೂಲಕ ನೂತನ ಫೇಸ್ಬುಕ್ ಪೇಜ್ ಲೈವ್ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮವು ಶನಿವಾರ ದಿನಾಂಕ 16:10:2021ರ ಸಂಜೆ 3:ಗಂಟೆಗೆ ಪ್ರಾರಂಭವಾಗಲಿದ್ದು ಈ ಪೇಜ್ ಗೆ ಮಾಜಿ ಸಚಿವರು ಮತ್ತು ಜಾನಪದ ಕಲಾವಿದರಾದ ಸಾಂಸ್ಕೃತಿಕ ರಾಯಭಾರಿ ಶ್ರೀಮತಿ ಡಾ. ಮೋಟಮ್ಮರವರು ಚಾಲನೆಯನ್ನು ನೀಡಲಿದ್ದಾರೆ.

ಈ ಸಮಾಜದಲ್ಲಿರುವ ಎಲೆಮರಿಕಾಯಿಯಂತಿರುವ ಎಲ್ಲಾ ಕಲಾವಿದರನ್ನು ಹಾಡುಗಾರರನ್ನು ಬಾಲಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವೆ ಅವಿನ್ ಸ್ವರ ಸಂಗಮ. ಬಾಳಯಾನಕ್ಕೆ ಗಾನ ಹಿಮ್ಮೇಳ ಎಂಬ ಫೇಸ್ಬುಕ್ ಲೈವ್ ಪೇಜ್ ನ ಸಂಗೀತ ಕಾರ್ಯಕ್ರಮದ ಉದ್ದೇಶವಾಗಿದೆ.

ಇಂದಿನ ತಾಂತ್ರಿಕ ಯುಗದಲ್ಲಿ ಜಾಗತಿಕ ವೇದಿಕೆಗಳಾಗಿ ಲಭ್ಯವಿರುವ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಫೇಸ್ಬುಕ್ ಬುಕ್ ಬಹು ಮುಖ್ಯವಾದ ಮಾಧ್ಯಮವೆಂದರೆ ತಪ್ಪಾಗಲಾರದು.
ಮನೆಯಲ್ಲಿ ಕೂತು ತಮ್ಮ ತಮ್ಮ ಮೊಬೈಲ್ ನಲ್ಲಿಯೇ ವೀಕ್ಷಣೆ ಮಾಡುವ ಅನುಕೂಲವನ್ನು ಜಗತ್ತಿನ ಉದ್ದಗಲಕ್ಕೂ ವ್ಯಾಪಿಸಿಕೊಂಡಿರುವ ಫೇಸ್ಬುಕ್ ಬುಕ್ ಆಪ್ ಒದಗಿಸಿ ಕೊಟ್ಟಿರುವುದು ಮನರಂಜನೆಗೆ ಕೊರತೆಯೇ ಇಲ್ಲವೇನೋ ಅನ್ನುವಷ್ಟು ಅಚ್ಚರಿಯನ್ನು ಮೂಡಿಸುತ್ತದೆ.

ಇದರ ಉಪಯೋಗದ ಫಲವಾಗಿಯೇ ಅವಿನ್ ಟಿವಿಯ ಒಂದು ಭಾಗವಾಗಿ ಮೂಡಿ ಬರಲಿರುವ “ಅವಿನ್ ಸ್ವರ ಸಂಗಮ”ಫೇಸ್ಬುಕ್ ಲೈವ್ ಸಂಗೀತ ಕಾರ್ಯಕ್ರಮವನ್ನು ಶೋತೃಗಳು ವೀಕ್ಷಿಸಿ ಹಾರೈಸಬೇಕೆಂಬುದೇ ಅವಿನ್ ಟಿವಿ ಯ ಕಳಕಳಿಯ ಕೋರಿಕೆಯಾಗಿದೆ.

ಬರಹ ಕೃಪೆ :
ಹೆಸಗಲ್ ವೆಂಕಟೇಶ್.

ವರದಿ: ಮಗ್ಗಲಮಕ್ಕಿ ಗಣೇಶ್ ಬ್ಯುರೋ ನ್ಯೂಸ್.

Career | job

Assisted living facilities in Bangalore India

About Author