
*2ನೇ ದಿನಕ್ಕೆ ಮುಂದುವರೆದ ಅನಿರ್ದಿಷ್ಟವಾದಿ ಧರಣಿ*
ವಸತಿ ರಹಿತ ಹೋರಾಟ ವೇದಿಕೆ ಹಳೆ ಮೂಡಿಗೆರೆ ಇವರುಗಳು ಕಳೆದ 24ಗಂಟೆಗಳಿಂದ ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಮುಂಭಾಗ ತಮ್ಮ ಮೂಲ ಭೂತ ಸೌಕರ್ಯಗಳಿಗಾಗಿ ನಡೆಸುತ್ತಿರುವ ಧರಣಿ 2ನೇ ದಿನದಲ್ಲೂ ಮುಂದುವರೆದಿದೆ ಹೋರಾಟಗಾರರ ವೇದಿಕೆಯ ಮುಂಚೂಣಿ ನಾಯಕ ಹಳೆಮೂಡಿಗೆರೆ ರುದ್ರಯ್ಯ ಮಾತನಾಡಿ-ಈಗಾಗಲೇ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಗಮನಕ್ಕೆ ನಮ್ಮ ಹೋರಾಟದ ಕೆಲವು 6 ಬಹುಮುಖ್ಯ ಹಕ್ಕೊತ್ತಾಯಗಳನ್ನು ಮಂಡಿಸಿದ್ದೇವೆ ಇಂದು ಅವರು ಲಿಖಿತವಾಗಿ ಬಗೆಹರಿಸುವ ಭರವಸೆ ನೀಡಿದರೆ ಸ್ವಲ್ಪ ಕಾಲದ ಮಟ್ಟಿಗೆ ಹೋರಾಟವನ್ನು ಹಿಂಪಡೆಯುತ್ತೇವೆ ಇಲ್ಲವಾದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದರು..
ಆದಷ್ಟು ಬೇಗ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ತಿಳಿಸುತ್ತಿದ್ದೇವೆ..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.