लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಜೇಸಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ* #avintvcom

1 min read
Featured Video Play Icon

ಮೂಡಿಗೆರೆ ಜೇಸಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ*

ಮೂಡಿಗೆರೆ ಜೇಸಿ ವತಿಯಿಂದ 15 -08 -2021 ರಂದು ಭಾನುವಾರ ಬೆಳಗ್ಗೆ 8:00 ಗಂಟೆಗೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಮೂಡಿಗೆರೆ ಜೇಸಿ ಅಧ್ಯಕ್ಷರಾದ ಕುನ್ನಹಳ್ಳಿ ಚಂದ್ರಶೇಖರ್, ಧ್ವಜಾರೋಹಣ ನೆರವೇರಿಸಿದರು.
75ನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಮೂಡಿಗೆರೆ ಜೆಸಿ ವತಿಯಿಂದ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಸತ್ತಿಗನಹಳ್ಳಿ ಗ್ರಾಮದ ನಿವೃತ್ತ ಯೋಧರಾದ ಶ್ರೀಯುತ ಜಗನಾಥ್ ಗೌಡರನ್ನು ಸನ್ಮಾನಿಸಲಾಯಿತು.
75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೂಡಿಗೆರೆ ಜೆಸಿಐ ಸಂಸ್ಥೆ ಹಾಗೂ ಸಾಮಾಜಿಕ ಸೇವಾ ಸಂಸ್ಥೆ ಫೀಸ್ ಅಂಡ್ ಅವರ್ನೆಸ್ ಟ್ರಸ್ಟ್ ಮೂಡಿಗೆರೆ ಇವರ ಸಂಯುಕ್ತಾಶ್ರಯದಲ್ಲಿ
ಹೋಲಿಕ್ರಾಸ್ ರಕ್ತನಿಧಿ, ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.30 ಜನರು ರಕ್ತದಾನವನ್ನು ಮಾಡಿದರು.
ಈ ಕಾರ್ಯಕ್ರಮದಲ್ಲಿ ಜೇಸಿ ಅಧ್ಯಕ್ಷರಾದ ಕುನ್ನಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆಯನ್ನು ವಹಿಸಿದ್ದರು, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ರವಿಕುಮಾರ್ ಸ್ವಾಗತವನ್ನು ಬಯಸಿದರು, ಜೇಸಿ ಕಾರ್ಯದರ್ಶಿ ಶ್ರೇಷ್ಠಿ ಯವರುಯವರು ವಂದಿಸಿದರು, ಕಾರ್ಯಕ್ರಮದಲ್ಲಿ ಜೇಸಿರೆಟ್ಅಧ್ಯಕ್ಷರಾದ ಸುಧಾಚಂದ್ರಶೇಖರ , ಜೆಸಿರೆಟ್ ಕಾರ್ಯದರ್ಶಿ ಕೃತಿ ಪ್ರದೀಪ್ , ಜೆಜೆಸಿಅಧ್ಯಕ್ಷರಾದ ರಾಣಿ ಚಂದ್ರಶೇಖರ್, ಹಾಗೂ ಮೂಡಿಗೆರೆ ಜೇಸಿ, ಜೆಸಿರೇಟ್,ಪೂರ್ವಅಧ್ಯಕ್ಷರು ,ಜೇಸಿ ಜೇಸಿರೆಟ್ ಸದಸ್ಯರು ಪಾಲ್ಗೊಂಡಿದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author