.,ಶೂಟೌಟ್…ಮಗನನ್ನು ಶೂಟೌಟ್ ಮಾಡಿ ಹತ್ಯೆ ಮಾಡಿರುವ ಘಟನೆ #avintvcom
1 min read
..,ಶೂಟೌಟ್…
ಮೂಡಿಗೆರೆ ತಾಲೂಕಿನ.
ಗೊಣಿಬೀಡು ಗ್ರಾಮಪಂಚಾಯಿತಿ ವ್ಯಾಪ್ತಿ.
ತಂದೆಯೇ ಮಗನನ್ನು ಶೂಟೌಟ್ ಮಾಡಿ ಹತ್ಯೆ ಮಾಡಿರುವ ಘಟನೆ ಗೋಣಿಬೀಡು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮಣ ಎಂಬುವವರು ತಮ್ಮ ಮಗ ಕಿರಣ್ (32 ) ಅವರಿಗೆ ಶೂಟೌಟ್ ಮಾಡಿ ಹತ್ಯೆ ಮಾಡಿದ್ದು ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎನ್ನಲಾಗಿದೆ. ಲಕ್ಷ್ಮಣ ಅವರ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಲಕ್ಷ್ಮಣ ಹಾಗೂ ಕಿರಣ್ ಅವರ ನಡುವೆ ಮಾತಿನ ಚಕಮಕಿಯಾಗಿದ್ದು ಈ ಸಂದರ್ಭದಲ್ಲಿ ಲಕ್ಷ್ಮಣ ಅವರು ತಮ್ಮ ಮನೆಯಲ್ಲಿದ್ದ ಲೈಸನ್ಸ್ ಹೊಂದಿದ ಕೋವಿಯಿಂದ ಮಗನ ಮೇಲೆ ಶೂಟೌಟ್ ನಡೆಸಿದ್ದಾರೆ. ಸ್ಥಳಕ್ಕೆ ಪೋಲಿಸರು ಬೇಟಿ ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಮೂಡಿಗೆರೆ.