*ರಾಷ್ಟ್ರ ಮಟ್ಟದಲ್ಲಿ ಕಿರೀಟ ಮುಡಿಗೆರಿಸಿಕೊಂಡ ಮೂಡಿಗೆರೆ ಯುವರಾಜ* #avintvcom
1 min read
*ರಾಷ್ಟ್ರ ಮಟ್ಟದಲ್ಲಿ ಕಿರೀಟ ಮುಡಿಗೆರಿಸಿಕೊಂಡ ಮೂಡಿಗೆರೆ ಯುವರಾಜ*
ಎಂ.ಡೆಸ್ ಪ್ರವೇಶ ಪರೀಕ್ಷೆ; ಉನ್ನತ ಶ್ರೇಣಿ ದಾಖಲಿಸಿದ ವರುಣ್
ಮೂಡಿಗೆರೆ :
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ನಲ್ಲಿ ಎಂ.ಡೆಸ್ ಪ್ರವೇಶ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಮೂಡಿಗೆರೆಯ ಬಿ.ಎಂ ವರುಣ್ ಶೆಟ್ಟಿ ಶೇ.95.65 ಅಂಕ ಗಳಿಸಿದ್ದಾರೆ.
ಟ್ರಾನ್ಸ್ಪೋರ್ಟೇಷನ್ ಅಂಡ್ ಆಟೋಮೊಬೈಲ್ ಡಿಸೈನ್ ಆಯ್ಕೆ ಮಾಡಿಕೊಂಡು, ಪ್ರವೇಶ ಪರೀಕ್ಷೆ ಬರೆದು ಆಲ್ ಇಂಡಿಯಾ ಶ್ರೇಣಿಯ ಓಪನ್ ಕೆಟಗರಿಯಲ್ಲಿ ಮೂರನೇ ಸ್ಥಾನ ಗಳಿಸಿ, ಒಬಿಸಿ ಕೆಟಗರಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವರುಣ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಡಿಸೈನಿಂಗ್ ವಿಭಾಗದಲ್ಲಿ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಡಿಗೆರೆಯ ಚಿತ್ತರಂಜನ್ ಎಸ್ಟೆಟ್. ಹಾಗು
ಶ್ರಿರಾಮ ಟ್ರೇಡರ್ಸ್ ಮಾಲಿಕರಾದ ಮನಮೋಹನ್ ಮತ್ತು ರಾಧಿಕಾ ದಂಪತಿಯ ಪುತ್ರ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.