AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಸರ್ಕಾರಿ ಕಟ್ಟಡ ಉಳಿಸಿ ಅಗ್ರಹ*#avintvcom

1 min read
Featured Video Play Icon

*ಸರ್ಕಾರಿ ಕಟ್ಟಡ ಉಳಿಸಿ ಅಗ್ರಹ*

ಮೂಡಿಗೆರೆ ತಾಲೂಕಿನ
ಕೂವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ,
ಕೂವೆ ಸರಕಾರಿ ಶಾಲೆಯು ಹಲವು ವರುಷಗಳಿಂದ ಮುಚ್ಚಿದ್ದು ಪ್ರಸ್ತುತ ಶಾಲಾ ಕೊಠಡಿಗಳಲ್ಲಿ ಸರಕಾರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ , ನ್ಯಾಯ ಬೆಲೆ ಅಂಗಡಿ ಹಾಗೂ ಚುನಾವಣಾ ಸಮಯದಲ್ಲಿ ಮತದಾನ ಕೊಠಡಿಗಳಾಗಿ ಕಾರ್ಯಚರಿಸುತ್ತಿದೆ. ಒಂದು ಕಡೆ ಶಾಲೆಯ ಗೋಡೆ ಜರಿದು ಬಿದ್ದು ಕೊಠಡಿಗೆ ಹಾನಿಯಾಗಿದೆ. ಇರುವ ಕೋಣೆಗಳು ಸೋರುತ್ತಿದೆ ಮತ್ತು ಶಾಲಾ ಆವರಣ ತುಂಬಾ ಕಸ ಕಡ್ಡಿಗಳಿಂದ ತುಂಬಿದೆ. ಸಾರ್ವಜನಿಕರಿಗೆ ತುಂಬಾ ಅನಾನುಕೂಲವಾಗಿದ್ದು ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಕೂವೆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳು , ಜನ ಪ್ರತಿನಿಧಿಗಳು ಆದಷ್ಟು ಬೇಗ ಶಾಲಾ ಕೊಠಡಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸರಿಪಡಿಸಿ ಕೊಡಬೇಕಾಗಿ ಪ್ರಮೋದ್, ಆಟೋ ಚಂದ್ರು, ರವಿ ಡಿ’ ಸೋಜಾ, ಸಂತೋಷ್, ಸುದೇಶ್, ಚಂದ್ರಶೇಖರ ಆಚಾರ್ಯ, ಲಕ್ಷ್ಮಣ್ , ಜೋಸೆಪ್ ತಾವ್ರೋ ಹಾಗೂ ಊರಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author