ಮಾರ್ಚ್ 27 ರಂದು ಅಭಿಮತ ಸಂಭ್ರಮ ನಡೆಯಲಿದೆ.#avintvcom
1 min read
ನಾಳೆ ಬೆಳಗಾದರೆ ಅಭಿಮತ ಸಂಭ್ರಮ… ಈ ಹಗಲು ಮುಳುಗಿ, ಇರುಳ ತೆರೆ ಸರಿದರೆ ಮಾರ್ಚ್ 27, ಶನಿವಾರ: ಅಭಿಮತ ಸಂಭ್ರಮ. Fine tuning ಹೊರತಾಗಿ ಎಲ್ಲ ತಯಾರಿಗಳೂ ಮುಗಿದಿವೆ! ಆ ಎಲ್ಲ ಕಾತರ, ಕನವರಿಕೆ, ನಿರೀಕ್ಷೆ ನಿಜವಾಗುವ ಆ ಅಮೃತ ಘಳಿಗೆಗಾಗಿ ನಾವು ಕಾದಿದ್ದೇವೆ. ಗೊತ್ತು ನಮಗೆ, ಈ ವಾರಾಂತ್ಯದ ನಿಮ್ಮ plan ಅಭಿಮತ ಸಂಭ್ರಮ ಎನ್ನುವುದಾಗಿ! ನಿಮ್ಮನ್ನು ಇದಿರುಗೊಂಡು ನಮ್ಮ ಸಂಭ್ರಮವನ್ನು ನಿಮ್ಮ ಕಣ್ಣಲ್ಲೂ ಕಾಣುವ ಚಿಕ್ಕ ಆಸೆ ನಮ್ಮದು. ಒಬ್ಬರೇ ಬರಬೇಡಿ:ಮನೆ ಮಂದಿ, ಗೆಳೆಯರ ದಂಡಿನೊಂದಿಗೆ ದೌಡಾಯಿಸಿ ಗಿಳಿಯಾರಿಗೆ, ತೀರ ನಿಮ್ಮದೆನಿಸುವ ಊರಿಗೆ.