ಫಲ್ಗುಣಿ ಶ್ರೀ ಕಲಾನಾಥೇಶ್ವರ ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ.#avintvcom
1 min read
*ಫಲ್ಗುಣಿಯಲ್ಲಿ ರಥೋತ್ಸವ* ಮೂಡಿಗೆರೆ ತಾಲೂಕಿನ ಕೋಳೂರು ಸಾವಿರದ 14 ಗ್ರಾಮಕ್ಕೆ ಸಂಬಂದಿಸಿದ ಹೊಯ್ಸಳ ರಾಜರು ನಿರ್ಮಿಸಿದ ಸಾವಿರಾರು ವರ್ಷಗಳ ಇತಿಹಾಸವಿರುವ *ಫಲ್ಗುಣಿ ಶ್ರೀ ಕಲಾನಾಥೇಶ್ವರ* ರಥೋತ್ಸವವು ಅದ್ದೂರಿಯಾಗಿ ನಡೆಯಲಿದೆ. ಈ ತಿಂಗಳ 28 ನೇ ತಾರೀಖಿನಂದು ಭಾನುವಾರ ಸಂಜೆ ರಥರೋಹಣ ( ಶ್ರೀ ದೇವರು ರಥವೇರುವುದು ) 29 ನೇ ತಾರೀಖಿನಂದು ಸೋಮವಾರ ಸಂಜೆ 5 ಗಂಟೆಗೆ *ಬ್ರಹ್ಮ ರಥೋತ್ಸವ ನಡೆಯುತ್ತದೆ* ಮಂಗಳವಾರ *ನೀರೋಕುಳಿ* ಶ್ರೀ ದೇವರಿಗೆ ಮಡಿಸ್ನಾನವಿರುತ್ತದೆ ಇದೇ ಸಂಧರ್ಬದಲ್ಲಿ ಕಲಿಯುಗದಲ್ಲಿ ದಂಪತಿಗಳು ಹೇಗೆ ಇರಬೇಕು ದಂಪತಿಗಳಲ್ಲಿ ಸಂಶಯ ಸಲ್ಲದು. ದಂಪತಿಗಳು ಹೊಂದಾಣಿಕೆ ಯಿಂದ ಜೀವನ ನಡೆಸಬೇಕು . ಎಂಬುವುದರ ಬಗ್ಗೆ ಪ್ರಧಾನ ಅರ್ಚಕರು ವಿದ್ವನ್ಮಣಿ ಯವರಿಂದ ಉಪದೇಶ ವಿರುತ್ತದೆ . ಈ ಎಲ್ಲಾ ದೇವರ ಉತ್ಸವದ ಕಾರ್ಯ ಕ್ರಮದ ಮುಂದಾಳತ್ವ ವನ್ನು ತಾಲೂಕು ಆಡಳಿತ ಹಾಗು ಧರ್ಮದರ್ಶಿ ಸುದೀರ್ ಬಿ.ಅರ್ .ಹಾಗು ಕೋಳೂರು ಸಾವಿರದ ಸರ್ವ ಮುಖಂಡರು ಹಾಗು ಫಲ್ಗುಣಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ *ಫಲ್ಗುಣಿ* *ಕಲಾನಾಥೇಶ್ವರ ಯುವ ಪಡೆ* ನಡೆಸಿಕೊಡುವರು. ವಿಶೇಷ ಸೂಚನೆ: *ಮಾಸ್ಕ್ ಹಾಗು ಶಾರೀರಿಕ ಅಂತರ ಕಡ್ಡಾಯವಿರುತ್ತದೆ*