लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
23/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪಿಂಜಾರ ಯುವಕರಿಂದ ಗ್ರಾ.ಪಂ ಸದಸ್ಯ ಬಸವರಾಜ ಕಟ್ಟಿಮನಿ ಅವರಿಗೆ ಸನ್ಮಾನ #avintvcom

1 min read
Featured Video Play Icon

ಪಿಂಜಾರ ಯುವಕರಿಂದ ಗ್ರಾ.ಪಂ ಸದಸ್ಯ ಬಸವರಾಜ ಕಟ್ಟಿಮನಿ ಅವರಿಗೆ ಸನ್ಮಾನ  ಯಾದಗಿರಿ ಜಿಲ್ಲೆಯ

ಹುಣಸಗಿ: ತಾಲೂಕಿನ ಕಾಮನಟಗಿ ಗ್ರಾಮ ಪಂಚಾಯಿತಿಯಲ್ಲಿ ಬರುವ ಒಂದನೇ ವಾರ್ಡಿನಲ್ಲಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಭ್ಯರ್ಥಿ ಬಸವರಾಜ ಕಟ್ಟಿಮನಿ ಅವರಿಗೆ ಹುಣಸಗಿ ಪಟ್ಟಣದಲ್ಲಿ ಪಿಂಜಾರ ಯುವಕರಿಂದ ಸನ್ಮಾನಿಸಲಾಯಿತು.

ನೂತನ ಸದಸ್ಯ ಬಸವರಾಜ ಮಾತನಾಡಿ ನಿವು ನನಗೆ ಸನ್ಮಾನ ಮಾಡಿದ್ದು ಯಾವ ಕಾಲಕ್ಕೂ ಮರೆಯುವಂತಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಮಾತನಾಡುತ್ತಾ ಗ್ರಾಮಸ್ಥರ ನೆರವಿನಿಂದ ಗ್ರಾಮದ ಅಭಿವೃದ್ಧಿ  ನನ್ನ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಮದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ಸ್ಪಂದಿಸುತ್ತೆನೆ ಕುಡಿಯುವ ನೀರು, ಚರಂಡಿಯ ವ್ಯವಸ್ಥೆ, ಹೊಸದಾಗಿ ಶೌಚಾಲಯಗಳ ನಿರ್ಮಾಣ, ಗ್ರಾಮದಲ್ಲಿನ ಸಿಸಿ ರಸ್ತೆಗಳ ನಿರ್ಮಾಣ, ಗ್ರಾಮೀಣ ಅಡಿಯಲ್ಲಿ ಬರುವ ನರೇಗ ದಿಂದ ( ಉದ್ಯೋಗ ಖಾತ್ರಿ ) ಅನುದಾನ ಪಡೆದು, ಬೀದಿದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೆನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ನಾಯಕ ಸೋಪಿಸಾಬ ಡಿ ಸುರಪುರ, ಯುವ ಮುಖಂಡ ಹುಸೇನಸಾಬ ಗಾದಿ, ಸೈಯದ್ ದಾವಲಸಾಬ ಡಿ ಬೆಣ್ಣೂರ, ನಾಗಪ್ಪ ಬೋವಿ, ಸಾಬಣ್ಣ ಮಲಗಲದಿನ್ನಿ, ಇತರರು ಉಪಸ್ಥಿತರಿದ್ದರು.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author