ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ #avintvcom
1 min read
ಆಡಿ
ಪ್ರಯಾಣಿಕರ ಅನುಕೂಲಕ್ಕಾಗಿ ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ
ಇಂದು ನಿಪ್ಪಾಣಿ ಮತಕ್ಷೇತ್ರದ ಆಡಿ ಕ್ರಾಸ್ ನಲ್ಲಿ, ಲೋಕೋಪಯೋಗಿ ಇಲಾಖೆ ಹಾಗೂ ಪಿ.ಆರ್.ಎ.ಎಮ್.ಸಿ. ಯೋಜನೆಯಡಿಯಲ್ಲಿ ಮಂಜೂರಾದ 2 ಕೋಟಿ ರೂ. ವೆಚ್ಚದಲ್ಲಿ, 100 ಅಡಿ ವೃತ್ತ ಸುಧಾರಣೆ, ರಸ್ತೆಯ 4 ಇಕ್ಕೆಲಗಳಲ್ಲಿ 10 ಮೀಟರ್ ಅಗಲೀಕರಣ ಹಾಗೂ ಹೈಮಾಸ್ಕ್ ಲೈಟ್ ಗಳ ಅಳವಡಿಕೆ ಕಾಮಗಾರಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಚಾಲನೆ ನೀಡಿದರು.
ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಮಾಡಿದಾಗ ಪ್ರಯಾಣಿಕರ ಸಂಚಾರಕ್ಕೆ ಸುಗಮವಾಗುವುದು. ಹೀಗಾಗಿ ಪ್ರಜೆಗಳ ಅನುಕೂಲಕ್ಕಾಗಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರದಾದ್ಯಂತ ಸುಗಮ ಸಂಚಾರ ವ್ಯವಸ್ಥೆ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಹಂತ-ಹಂತವಾಗಿ ಕ್ಷೇತ್ರದ ಸಾರಿಗೆ-ಸಂಪರ್ಕ ವ್ಯವಸ್ಥೆಗೆ ಪೂರಕವಾಗುವಂತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣ್ಯರು, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
प्रवाशांच्या सोयीसाठी रस्ता सुधारणा कामकाजाला सुरुवात.
आज निपाणी मतदारसंघातील आडी क्रॉस येथे पीडब्ल्यूडी विभाग आणि पी.आर.ए.एम.सी योजनेंतर्गत मंजूर झालेल्या 2 कोटी रुपये निधीतून 100 फूट वर्तुळ सुधारणा, रस्त्याच्या चारही बाजूंनी 10 मीटर रुंदीकरण आणि हायमास्क दिवे बसविणे कामकाजाला राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी चालना दिले.
वाहतुकीची सुविधा चांगली केल्यास प्रवाश्यांना मदत होऊ शकते. यासाठी नागरिकांच्या हितासाठी रस्ते विकासाचे काम सुरू केले आहे. संपूर्ण मतदारसंघात सुरळीत वाहतूक व्यवस्था निर्माण करण्यात येणार असून, टप्प्याटप्प्याने संपूर्ण मतदारसंघात वाहतूक संपर्क साधावा यासाठी विकास कामे केली जात आहेत असे सांगितले.
यावेळी मान्यवर, पक्षाचे स्थानिक नेते, कार्यकर्ते व ग्रामस्थ उपस्थित होते.