ಸಿಲಾರ್ ಕೋಟ್ 5 ಕಾಂಗ್ರೆಸ್ ನಾಯಕರು ಮತ್ತು 2 ಬಿಜೆಪಿ ನಾಯಕರು ಗ್ರಾ. ಪಂ .ಚು .ಗೆಲುವು ಸಾಧಿಸಿದ್ದಾರೆ.#avintvcom
1 min read
ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕು ಮೆದಕ್ ಗ್ರಾಮಪಂಚಾಯತ್ ಗೆ ಸಿಲಾರ್ ಕೋಟ್ ಗ್ರಾಮ ವತಿಯಿಂದ ಐದು ಜನ ಕಾಂಗ್ರೆಸ್ ನಾಯಕರು ಮತ್ತು ಎರಡು ಜನ ಬಿಜೆಪಿ ನಾಯಕರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ವತಿಯಿಂದ ಭೀಮರೆಡ್ಡಿ ದೇವಡಿ ಸೇರಿ ನಾಲ್ಕು ಜನ ವಿಜಯ ಸಾಧಿಸಿದ್ದಾರೆ.
ಮತ್ತು ಬಿಜೆಪಿ ವತಿಯಿಂದ ಡಾಕ್ಟರ್ ಮಧುಸೂದನ್ ರೆಡ್ಡಿ ಪಾಟೀಲ್ ಮತ್ತು ಶ್ರೀಲತಾ ಪೊಟ್ಟಿ ಇವರು ಆಯ್ಕೆಯಾಗಿದ್ದಾರೆ ಈ ಸಂಭ್ರಮದಲ್ಲಿ. ಕಾಂಗ್ರೆಸ್ ನಾಯಕರು ಗನ ವಿಜಯ ಸಾಧಿಸಿದ್ದೇವೆ ಎಂದು ಊರಿನ ಮೆರವಣಿಗೆ ಸಾಗಿಸಿದ್ದಾರೆ.
ಮಧುಸೂದನ್ ರೆಡ್ಡಿ ಪಾಟೀಲ್ ಮತ್ತು ನಾಗೇಂದ್ರಪ್ಪ ಸಾಹುಕಾರ್ ಗೆಲುವಿನಲ್ಲಿ ಕಡಿಮೆ ಅವಕಾಶ ಸಿಕ್ಕಿದೆ ಎಂದು ನಿರಾಶೆ ಪಡದೇ ಬಂದ ಎರಡು ಸೀಟುಗಳು ಸಾಕು ನಮಗೆ ಮುಂದಿನ ಜಿಲ್ಲಾ ಪಂಚಾಯತ್ ಎಲೆಕ್ಷನ್ ನಲ್ಲಿ ಗಣ ವಿಜಯ ಸಾಧಿಸುವ ಆಸಕ್ತಿ ನಮಗೆ ಇದೆ ಎಂದು ಡಾಕ್ಟರ್ ಮಧುಸೂದನ ರೆಡ್ಡಿ ಪಾಟೀಲ್ ತಿಳಿಸಿದ್ದಾರೆ ಈ ವಿಷಯವಾಗಿ ನಮಗೆ ಯಾವುದೇ ತೊಂದರೆ ಇಲ್ಲ ದಯವಿಟ್ಟು ಮುಂದಿನ ಎಲೆಕ್ಷನ್ಗೆ ನಮ್ಮನ್ನು ಸಹಕರಿಸಬೇಕಾಗಿ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಡಾಕ್ಟರ್ ಪಾಟೀಲ್.
ನಾವು ಮಾಡುವ ಕೆಲಸ ಯಾವತ್ತು ಮರೆಯಲಾರೆವು ಎಂದು ತಿಳಿಸಿದ್ದಾರೆ ಗೆಲುವು-ಸೋಲು ಸಹಜ ಇದರಲ್ಲಿ ಯಾರಿಗೂ ಕೂಡ ಅಸಂತೃಪ್ತಿ ಅನ್ನೋದು ಇಲ್ಲ.
ಗೆಲುವು ಯಾರದೇ ಇದ್ದರೂ ನಮಗೆ ಜನರ ಸೇವೆ ಮುಖ್ಯ ಎಂದು ಡಾಕ್ಟರ್ ಮಧುಸೂದನ್ ರೆಡ್ಡಿ ಪಾಟೀಲ್ ವ್ಯಕ್ತಪಡಿಸಿದ್ದಾರೆ ಅಕ್ರಮವಾಗಿ ಯಾರಾದರೂ ತಪ್ಪು ಮಾಡಿದರೆ ನಾವು ಅದನ್ನು ಸಹಿಸಲಾರವು ಖಂಡಿತ ಜನಗಳ ಹಿಂದೆ ನಾವು ಇದ್ದೇವೆ ಎಂದು ಮರೆಯಬೇಡಿ ಅಂತ ಡಾಕ್ಟರ್ ಮಧುಸೂದನ್ ರೆಡ್ಡಿ ಪಾಟೀಲ್ ತಿಳಿಸಿದ್ದಾರೆ ಇದಕ್ಕೆ ಮೀಡಿಯ ಮಿತ್ರರು ಕೂಡ ಸಹಕಾರ ಮಾಡಬೇಕಾಗಿ ವಿನಂತಿ ಅಂತ ಹೇಳಿದ್ದಾರೆ.
ವರದಿಗಾರ ವೆಂಕಟಪ್ಪ ಕೆ ಸುಗ್ಗಲ್