ಗುಜರಾತ್ ರಾಜ್ಯಕ್ಕೆ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಬಿನ್ನಡಿ ನೇಮಕ;……
1 min read
ಗುಜರಾತ್ ರಾಜ್ಯಕ್ಕೆ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಬಿನ್ನಡಿ ನೇಮಕ; ಹುಟ್ಟೂರಿನಲ್ಲಿ ಆತ್ಮೀಯ ಅಭಿನಂದನೆ ಅರುಣ್ ಬಿನ್ನಡಿಯವರ ಸಂಘಟನಾ ಚತುರತೆ ಯುವಕರಿಗೆ ಮಾದರಿ ; ದೀಪಕ್ ದೊಡ್ಡಯ್ಯ..
ಗುಜರಾತ್ ರಾಜ್ಯಕ್ಕೆ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಭಿನ್ನಡಿ ಗ್ರಾಮದ ಅರುಣ್ ಭಿನ್ನಡಿ ಅವರನ್ನು ಅವರ ಮನೆಯಲ್ಲಿ ಬಿಜೆಪಿ ಮುಖಂಡರು, ಸ್ನೇಹಿತರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ ಮಾತನಾಡಿ ಅರುಣ್ ಬಿನ್ನಡಿಯವರು ಚಿಕ್ಕ ವಯಸ್ಸಿನಲ್ಲಿ ದೊಡ್ಡಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಶ್ಚಿಮಬಂಗಾಳ ಸೇರಿದಂತೆ ದೇಶದ ಅನೇಕ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ನಮ್ಮಮಲೆನಾಡಿನ ಯುವಕ ರಾಷ್ಟ್ರಮಟ್ಟದಲ್ಲಿಗುರುತಿಸಿಕೊಂಡು ದೇಶ ಸೇವೆ ಮಾಡುತ್ತಿರುವುದು ಹೆಮ್ಮೆಯ ವಿಷಯ, ಅವರಭವಿಷ್ಯ ಇನ್ನೂ ಉಜ್ವಲವಾಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬಣಕಲ್ ಹೋಬಳಿ ಬಿ.ಜೆ.ಪಿ. ಅಧ್ಯಕ್ಷ ಯತೀಶ್ ಕೂಡಹಳ್ಳಿ, ಪ್ರಧಾನ ಕಾರ್ಯದರ್ಶಿ ಶರತ್ ಫಲ್ಗುಣಿ, ಜಿಲ್ಲಾ ಸಮಿತಿ ಸದಸ್ಯರಾದ ವಿಕ್ರಂ ಬಣಕಲ್, ಹೋಬಳಿ ಉಪಾಧ್ಯಕ್ಷರುಗಳಾದ ಚಂದ್ರೇಗೌಡ ಬಣಕಲ್, ಪ್ರದೀಪ್ ಬಿನ್ನಡಿ ಮತ್ತು ಮೋಹನ್ ಬೆಟ್ಟಗೆರೆ, ಟಿ ಎ ಪಿ ಸಿ ಎಂ ಎಸ್ ನಿರ್ದೇಶಕರಾದ ಪ್ರಸನ್ನ ಮುಗ್ರಹಳ್ಳಿ, ತಾಲೂಕು ಉಪಾಧ್ಯಕ್ಷರಾದ ಸುಂದರೇಶ್ ಕೊಣಗೆರೆ, ಸಾಮಾಜಿಕ ಜಾಲತಾಣದ ಸಂಚಾಲಕ ಸುನಿಲ್ ಮಣ್ಣೀಕೆರೆ, ಅತ್ತಿಗೆರೆ ಬೂತ್ ಸಮಿತಿ ಅಧ್ಯಕ್ಷ ಸಾಗರ್ ತರುವೆ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾದ ಸಂತೋಷ ಅತ್ತಿಗೆರೆ, ಮುಖಂಡರುಗಳಾದ ದಿನೇಶ್ ಬೆಟ್ಟಗೆರೆ, ಅಭಿಲಾಶ್ ಅತ್ತಿಗೆರೆ, ಸಂಜಯ್ ಕೊಟ್ಟಿಗೆಹಾರ, ಯುಪಿ ಜಗದೀಶ್ ಉಗ್ಗೆಹಳ್ಳಿ, ಸಚಿನ್ ಹಳೆ ಮೂಡಿಗೆರೆ, ರಮೇಶ್ ಬಿನ್ನಡಿ, ಅಶ್ವಥ್ ಹಳೆ ಮೂಡಿಗೆರೆ, ಧರ್ಮ ಭಿನ್ನಡಿ, ಮತ್ತು ವಿನಯ್ ಕೊಟ್ಟಿಗೆಹಾರ, ರಾಘು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

