“ವಿಶ್ವ ಬೆಕ್ಕುಗಳ ದಿನ”
1 min read
ಅವಿನ್ ಟಿವಿ ಸುದ್ದಿಜಾಲ : ಆಗಸ್ಟ್ 8 ವಿಶ್ವ ಬೆಕ್ಕುಗಳ ದಿನ International cat’s Day :ಇದು ಕೇವಲ ಬೆಕ್ಕುಗಳನ್ನು ಪ್ರೀತಿಸುವ ದಿನವಲ್ಲ, ಅವುಗಳ ಆರೈಕೆ, ಕಲ್ಯಾಣ ಮತ್ತು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ದಿನವೂ ಆಗಿದೆ.

ಚಿಕ್ಕಮಗಳೂರು : ಬೆಕ್ಕು ಇಲ್ಲದ ಮನೆಯಲ್ಲಿ ಇಲಿ ಪಲ್ಟಿ ಹೊಡೆದಂಗೆ ಈ ರೀತಿ ಬೆಕ್ಕುಗಳ ಹೆಸರಲ್ಲಿ ನಮ್ಮ ಜನಪದರು ಕಟ್ಟಿದ ಗಾದೆಗಳು ಒಗಟುಗಳು ಅದೆಷ್ಟೋ, ಬೆಕ್ಕು ಮತ್ತು ಮನುಷ್ಯನ ಸಂಬಂಧವನ್ನು ಸರಿಯಾಗಿ ಅರಿಯದ ಈ ಮನುಷ್ಯ ಬೆಕ್ಕು ಅಡ್ಡ ಹೋದರೆ ಅದು ಒಂದು ಅಪಶಕುನ ಎಂಬ ಮೌಡ್ಯವನ್ನು ಸಮಾಜದಲ್ಲಿ ತುಂಬಿದ್ದಾನೆ, ಈ ರೀತಿಯ ಅಪಶಕುನಗಳ ಮಾತುಗಳ ಮಧ್ಯಯೂ ಮನುಷ್ಯ ಅನಾದಿಕಾಲದಿಂದಲೂ ಸಾಕುತ್ತಿರುವ ಸಾಕುಪ್ರಾಣಿಗಳಲ್ಲಿ ಈ ಬೆಕ್ಕು ಕೂಡ ಒಂದು, ಮನುಷ್ಯನೊಂದಿಗೆ ಮತ್ತು ಬೆಕ್ಕು ಅದರ ದೈಹಿಕ ಭಾಷೆಗಳ ಮೂಲಕ ನಮ್ಮ ಕಾಲಿನ ಸುತ್ತ ಸುತ್ತುವುದು, ಅದರ ಮೈಯನ್ನು ನಮ್ಮ ಕಾಲಿಗೆ ಉಜ್ಜುವುದು, ಕತ್ತೆತ್ತಿ ಮಿಯಾವ್ ಎಂದು ಶಬ್ದ ಮಾಡಿ ನಮ್ಮನ್ನು ಪ್ರೀತಿಯ ಭಾವದಿಂದ ನೋಡುವುದು, ಕಣ್ಮುಚ್ಚಿ ನಮ್ಮ ತೊಡೆಯ ಮೇಲೆ ಯಾವುದೇ ಭಯವಿಲ್ಲದೆ ಮಲಗುವುದು,ಈ ರೀತಿಯ ಹತ್ತು ಹಲವು ಬೆಕ್ಕಿನ ನಡುವಳಿಕೆಗಳನ್ನು ನಾವು ಸೂಕ್ಷ್ಮವಾಗಿ ಅರಿತಾಗ ಆ ಬೆಕ್ಕು ಮನುಷ್ಯರೊಟ್ಟಿಗೆ ಇಟ್ಟಿರುವ ವಿಶ್ವಾಸ ಪ್ರೀತಿ ನಂಬಿಕೆ ಸ್ವಭಾವ ಹಾಗೂ ಅದರ ನಡವಳಿಕೆಗಳು ಅರ್ಥವಾಗುತ್ತವೆ, ಏನೆಲ್ಲಾ ಅರಿತಿರುವ ಮನುಷ್ಯ ಬೆಕ್ಕಿನ ದೈಹಿಕ ಭಾಷೆ ಮತ್ತು ಅದರ ನಡವಳಿಕೆಯನ್ನು ಸೂಕ್ಷ್ಮವಾಗಿ ಅರಿಯಬೇಕಾಗಿದೆ.

ದಿನದ 24 ಘಂಟೆಗಳಲ್ಲಿ ಅತೀ ಹೆಚ್ಚು ಕಾಲ ವಿಶ್ರಾಂತಿ ಮತ್ತು ನಿದ್ದೆಯಲ್ಲಿ ಕಾಲ ಕಳೆಯುವ ಈ ಬೆಕ್ಕು ಮನುಷ್ಯರಿಗಿಂತ ಹೆಚ್ಚು ಸ್ವಚ್ಛವಾಗಿ ಇರಲು ಬಯಸುತ್ತದೆ, ಮಾನವ ಸ್ನೇಹಿ ಆಗಿ ಅನಾದಿಕಾಲದಿಂದಲೂ ಸಾಕುಪ್ರಾಣಿಯಾಗಿ ಈ ಬೆಕ್ಕು ಮನುಷ್ಯನೊಂದಿಗೆ ಅನನ್ಯವಾದ ಸಂಬಂಧವನ್ನು ಹೊಂದಿದೆ.
ವಿಶೇಷವಾಗಿ ರೈತಾಪಿ ಕುಟುಂಬದ ಆಪ್ತ ಬಂಧುವಾದ ಈ ಬೆಕ್ಕಗಳನ್ನು ಸಾಕುವುದರಿಂದ ಮನುಷ್ಯರ ಮಾನಸಿಕ ಆರೋಗ್ಯ ವೃದ್ಧಿಸಿ ಏಕಾಂತವನ್ನು ದೂರ ಮಾಡಿ ಒಂಟಿತನದ ಶಮನವನ್ನು ನಿವಾರಿಸುತ್ತದೆ ಎಂದು ಹೇಳುತ್ತದೆ ಸಂಶೋಧನೆಗಳು.
ಮನುಷ್ಯ ಮತ್ತು ಬೆಕ್ಕಿನ ಸಹಜೀವನ ಕುರಿತಂತೆ ಸಮಗ್ರ ಸಂಶೋಧನೆಯ ಆಧಾರದ ಮೇಲೆ
ವಿಶ್ವ ಬೆಕ್ಕು ದಿನದ ಆಚರಣೆಯು
2002ರಲ್ಲಿ International Fund for Animal Welfare (IFAW) ಸಂಸ್ಥೆಯು ಆಗಸ್ಟ್ 8ನ್ನು International Cat Day ಆಗಿ ಆಚರಿಸುವ ಪರಂಪರೆಯನ್ನು ಆರಂಭಿಸಿತು.

ಈ ಆಚರಣೆಯ ಉದ್ದೇಶ ಬೆಕ್ಕುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಅವುಗಳನ್ನು ಹೇಗೆ ರಕ್ಷಿಸಿ ಆರೈಕೆ ಮಾಡಬೇಕು ಎಂಬುದನ್ನು ತಿಳಿಸುವುದಾಗಿತ್ತು.
ನಂತರ 2020ರಲ್ಲಿ, ಈ ದಿನದ ನಿರ್ವಹಣೆಯ ಜವಾಬ್ದಾರಿ ಬ್ರಿಟನ್ನ International Cat Care ಸಂಸ್ಥೆಗೆ ವರ್ಗಾಯಿಸಲಾಯಿತು. ಈ ಸಂಸ್ಥೆ 1958ರಿಂದ ಸಾಕು ಬೆಕ್ಕುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ.
ಈ ಆಚರಣೆಯ ಮಹತ್ವವ
ಪ್ರಾಣಿದಯೆಯ ಸಂದೇಶ
ಬೆಕ್ಕು ಸೇರಿದಂತೆ ಎಲ್ಲ ಪ್ರಾಣಿಗಳನ್ನೂ ಕರುಣೆ ಮತ್ತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಮನೆಯಲ್ಲಿರುವ ಸಾಕು ಬೆಕ್ಕುಗಳಷ್ಟೇ ಅಲ್ಲದೆ, ಬೀದಿಗಳಲ್ಲಿ ಬದುಕುವ ಬೆಕ್ಕುಗಳಿಗೂ ಆಹಾರ, ಸುರಕ್ಷಿತ ಆಶ್ರಯ ಮತ್ತು ಅಗತ್ಯ ಆರೈಕೆ ದೊರೆಯಬೇಕು ಎಂಬ ಅರಿವನ್ನು ಈ ಸಂಸ್ಥೆ ಮೂಡಿಸುತ್ತಾ ಬರುತ್ತಿದೆ.
ಬೆಕ್ಕನ್ನು ಸಾಕುವುದು ಕೇವಲ ಮನರಂಜನೆಗಾಗಿ ಅಲ್ಲ, ಅದರ ಆಹಾರ, ಆರೋಗ್ಯ, ಸುರಕ್ಷತೆ ಮತ್ತು ದೈನಂದಿನ ಆರೈಕೆಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿಸುತ್ತದೆ.
ದತ್ತು ಸ್ವೀಕಾರಕ್ಕೆ ಪ್ರೋತ್ಸಾಹ
ಸಾಧ್ಯವಿರುವವರು ಪ್ರಾಣಿಗಳ ಆಶ್ರಯ ಕೇಂದ್ರಗಳಿಂದ ಬೆಕ್ಕುಗಳನ್ನು ದತ್ತು ಪಡೆಯುವುದು ಮತ್ತು ಅವುಗಳ ಕಲ್ಯಾಣಕ್ಕೆ ಸಹಕರಿಸುವ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಮನುಷ್ಯ–ಪ್ರಾಣಿ ಸಂಬಂಧದ ಮಹತ್ವ
ಸಾವಿರಾರು ವರ್ಷಗಳಿಂದ ಬೆಕ್ಕುಗಳು ಮನುಷ್ಯರೊಂದಿಗೆ ಸಹಬಾಳ್ವೆ ನಡೆಸುತ್ತಿವೆ.
ಬೆಕ್ಕಿಗೆ ಈ ಒಂದು ದಿನ ಮಾತ್ರ ಪ್ರೀತಿ ತೋರಿಸುವುದಲ್ಲ, ಪ್ರತಿದಿನವೂ ಅದರ ಜೀವಕ್ಕೆ ಬೆಲೆ ಕೊಡುವುದೇ ವಿಶ್ವ ಬೆಕ್ಕು ದಿನದ ನಿಜವಾದ ಆಶಯವಾಗಿದೆ.
ಒಟ್ಟಿನಲ್ಲಿ, ಆಗಸ್ಟ್ 8ರ ವಿಶ್ವ ಬೆಕ್ಕು ದಿನವು ಬೆಕ್ಕುಗಳನ್ನು ಆರಾಧಿಸುವುದಕ್ಕಿಂತ ಅವುಗಳ ಬಗ್ಗೆ ಜವಾಬ್ದಾರಿ, ಪ್ರೀತಿ ಮತ್ತು ಪ್ರಾಣಿದಯೆಯನ್ನು ಬೆಳೆಸುವ ದಿನವಾಗಿದೆ.
••••••••••••••
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.




