“ಚಿಕ್ಕಮಗಳೂರು ಜಿಲ್ಲಾ ಇಂಟಕ್ ಯುವ ವಿಭಾಗದ ಅಧ್ಯಕ್ಷರಾಗಿ ವಸೀಮ್ ಅಹಮದ್ ನೇಮಕ.”
1 min read
ಆಲ್ದೂರು : ಕೆ.ಪಿ.ಸಿ.ಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಅನುಮೋದನೆ ಹಾಗೂ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (ಇಂಟಕ್) ರಾಜ್ಯಾಧ್ಯಕ್ಷ ನಾಗರಾಜ್ ಅವರ ನಿರ್ದೇಶನದ ಮೇರೆಗೆ,ಆಲ್ದೂರಿನ ಬಿ.ಹೆಚ್.ರಸ್ತೆಯ ನಿವಾಸಿ ವಸೀಮ್ ಅಹಮದ್ ಅವರನ್ನು ಭಾರತದ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟಕ್) ಚಿಕ್ಕಮಗಳೂರು ಜಿಲ್ಲಾ ಯುವ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಇಂಟಕ್ ರಾಜ್ಯಾಧ್ಯಕ್ಷ ಡಿ.ಲಕ್ಷ್ಮಿ ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸೀಮ್ ಅಹಮದ್ ಅವರ ನೇಮಕಕ್ಕೆ ಕಾಂಗ್ರೆಸ್ ಹಾಗೂ ಇಂಟಕ್ ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

