AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಜಲಯೋಗ ಸಾಧನೆಯಲ್ಲಿ ವಕೀಲ ವಿ.ಕೆ.ರಘು ವಿಶ್ವ ದಾಖಲೆ
‎ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ನೀರಿನ ಮೇಲೆ 960 ಬಾರಿ ಶ್ರೀರಾಮನ ಮಂತ್ರಗಳನ್ನು ಪಠಿಸುತ್ತ ನಿರಂತರ 23 ನಿಮಿಷ 48 ಸೆಂಕೆಂಡ್ ವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದರು.
‎ಇದನ್ನು ಪರಿಗಣಿಸಿದ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ರಘು ಅವರಿಗೆ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಘೋಷಿಸಿದೆ. ಜಲಯೋಗ ಪ್ರದರ್ಶನದ ಸಂದರ್ಭದಲ್ಲಿ ರಘು ಅವರು ಶವಾಸನ, ತಾಡಾಸನ, ಪದ್ಮಾಸನ ಮತ್ತು ಧನುರಾಸನವನ್ನು ಪ್ರಸ್ತುತ ಪಡಿಸಿದ್ದರು.
‎ಈ ನಾಲ್ಕೂ ಪ್ರಮುಖ ಆಸನಗಳು ಶ್ರೀರಾಮ ತಮ್ಮ ಜೀವನ ಶೈಲಿಯ ಭಾಗವಾಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಅವುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ರಘು ತಿಳಿಸಿದ್ದಾರೆ.
ಜಲಯೋಗ ಸಾಧನೆಯಲ್ಲಿ ವಿಶ್ವದಾಖಲೆ ಬರೆದಿರುವ ರಘು ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಸೇರಿದಂತೆ ಹಲವು ಗಣ್ಯರು, ಸಂಘ-ಸಂಸ್ಥೆಗಳು ಅಭಿನಂದಿಸಿವೆ.

‎ಇದೇ ವೇಳೆ ಕಾಫಿ ನಾಡು ಸ್ನೇಹಜೀವಿ ಕಲಾ ತಂಡವು ಆಗಸ್ಟ್ 9 ರಂದು ನಗರದ ಟಿಎಂಎಸ್‌ ಸಭಾಂಗಣದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ ಜೊತೆಗೆ ವಿಶ್ವದಾಖಲೆಗೆ ಪಾತ್ರರಾಗಿರುವ ವಿ.ಕೆ.ರಘು ಅವರಿಗೆ ಅಭಿನಂದಾನ ಸಮಾರಂಭ ಏರ್ಪಡಿಸಿದೆ.

About Author

Leave a Reply

Your email address will not be published. Required fields are marked *

You may have missed