“!!ಬಾರ್ ಲೈನ್ ರಸ್ತೆಯಲ್ಲಿ ವಾಹಗಳ ಕಾರು-ಬಾರು : ಸರಿಯಾಗಿ ಬ್ರೇಕ್ ಹಾಕಿದ ಟ್ರಾಫಿಕ್ ಪೊಲೀಸರು.!!”
1 min read
ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ಬಾರ್ ಲೈನ್ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ರಸ್ತೆಯನ್ನೆಲ್ಲ ವಾಹನಗಳೇ ಆವರಿಸಿಕೊಂಡು ಬಿಟ್ಟಿದ್ದವು.
ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದು,ಶಿಸ್ತಿಲ್ಲದೆ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದು, ಇದರಿಂದಾಗಿ ಜನಸಾಮಾನ್ಯರಿಗೆ ಹಾಗೂ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೂ ಕೂಡ ಈ ರಸ್ತೆ ಒಂದು ರೀತಿ ಮಾನಸಿಕವಾಗಿ ತೊಂದರೆ ನೀಡುತ್ತಿತ್ತು.

ಈ ರಸ್ತೆಯಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದು ಒಂದು ಸಾಹಸವೇ ಸರಿ, ಈ ರಸ್ತೆಯಲ್ಲಿ ಬಂದ ತಪ್ಪಿಗೆ ಒಂದಿಷ್ಟು ಶಾಪ ಹಾಕಿಕೊಂಡು ಹೋಗಿದ್ದುಂಟು. ಇದೆಲ್ಲ ವನ್ನರಿತ ಟ್ರಾಫಿಕ್ ಪೊಲೀಸರು ತಮ್ಮ ಇಚ್ಛಾಶಕ್ತಿ ಹಾಗೂ ಕರ್ತವ್ಯನಿಷ್ಠೆ ಮೆರೆದಿದ್ದಾರೆ ಎಂಬುದಕ್ಕೆ ಇದೊಂದು ಸಣ್ಣ ಉದಾರಣೆ.

ನಿಮ್ಮ ಕರ್ತವ್ಯನಿಷ್ಠೆ ಇದೇ ರೀತಿ ಮುಂದುವರೆಯಲಿ ಎಂಬುದೇ ನಮ್ಮ ಆಶಯ..
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

