लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಯಲಗುಡಿಗೆ ಶಾಲೆಯಲ್ಲಿ ಸಂಭ್ರಮದ ಯೋಗ ದಿನಾಚರಣೆ*

ಚಿಕ್ಕಮಗಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಗುಡಿಗೆಯಲ್ಲಿ 12 ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳು ಓಂಕಾರ, ಶಾಂತಿ ಮಂತ್ರದೊಂದಿಗೆ ಯೋಗಾಭ್ಯಾಸವನ್ನು ಪ್ರಾರಂಭಿಸಿ, ಪದ್ಮಾಸನ, ವಕ್ರಾಸನ, ಧನುರಾಸನ, ಉತ್ತಿತ ಪಾದಾಸನ, ಚಕ್ರಾಸನ ತ್ರಿಕೋನಾಸನ, ಗೋಮುಖಾಸನ, ಸರ್ವಂಗಾಸನ, ಶಿರ್ಶಾಸನ, ಮಕರಾಸನ, ಶವಾಸನ ಹೀಗೆ ವಿವಿಧ ಆಸನಗಳನ್ನು ಮಾಡಿಸಲಾಯಿತು.

ಜೊತೆಗೆ ಪ್ರಾಣಾಯಾಮದಲ್ಲಿ ನಾಡಿಶುದ್ದಿ ಪ್ರಾಣಾಯಾಮ, ಸೂರ್ಯಭೇದನ ಪ್ರಾಣಾಯಾಮ, ಚಂದ್ರಭೇದನ ಪ್ರಾಣಾಯಾಮ ಮತ್ತು ಭ್ರಾಮರಿ ಪ್ರಾಣಾಯಾಮವನ್ನು ಮಾಡಿಸಲಾಯಿತು.

ಮನಸ್ಸಿನ ಏಕಾಗ್ರತೆಗೆ ಮಕ್ಕಳಿಗೆ ಧ್ಯಾನವನ್ನು ಮಾಡಿಸಲಾಯಿತು.
ಯೋಗ ದಿನಾಚರಣೆಯ ಸಂದರ್ಭದಲ್ಲಿ ಶಾಲಾ ಮಕ್ಕಳ ಜೊತೆ ಶಿಕ್ಷಕರು ಯೋಗಾಭ್ಯಾಸ ಮಾಡಿದರು.

ನಮ್ಮ ಶಾಲೆಯ ಮಕ್ಕಳಿಗೆ ಪ್ರತಿ ಶನಿವಾರ ಯೋಗಾಭ್ಯಾಸ ಮಾಡಿಸಲಾಗುತ್ತದೆ. ಮಕ್ಕಳು ವಿವಿಧ ಆಸನಗಳ ಜೊತೆಗೆ ಪ್ರಾಣಾಯಾಮ, ಧಾನ್ಯವನ್ನು ಅಭ್ಯಾಸ ಮಾಡಿಸಲಾಗುತ್ತದೆ. ನಮ್ಮ ಶಾಲೆಯಲ್ಲಿ ಪ್ರತಿವರ್ಷವೂ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಶಾಲಾ ಶಿಕ್ಷಕಿ ಗೀತಾ. ಕೆ. ಹೆಚ್ ಅವರು ಹಂಚಿಕೊಂಡರು.

ಯೋಗ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜಪ್ಪ. ಪಿ ರವರು ಅತಿಥಿ ಶಿಕ್ಷಕರಾದ ದಿವ್ಯ ಅವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed