ಆರ್ ಎಸ್ ಶಾಲೆಯಲ್ಲಿ ಪರಿಸರ ದಿನಾಚರಣೆ….
1 min read
ಆರ್ ಎಸ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಆಲ್ದೂರು: ಪಟ್ಟಣದ ಸಮೀಪವಿರುವ ಆರ್ ಎಸ್, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದೊಂದಿಗೆ ಪರಿಸರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೀನಿಯರ್ ಜೆಸಿಐ ಕಾರ್ಯದರ್ಶಿ ರವಿಕುಮಾರ್ ಎಚ್ಎಲ್, ಪರಿಸರ ಕಾಳಜಿಯನ್ನು ವಿದ್ಯಾರ್ಥಿಗಳಿಗೆ ಪೋಷಕರು ಮನೆಯಿಂದಲೇ ಪ್ರಾರಂಭಿಸಿ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಪರಿಸರ ಹಾನಿ ಮಾಲಿನ್ಯದ ಕುರಿತು ಅರಿವನ್ನು ಮೂಡಿಸಬೇಕು ಎಂದು ತಿಳಿಸಿದರು.
ಗಸ್ತು ಅರಣ್ಯ ಪಾಲಕರಾದ ನಂದನ್ ಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆ ಜವಾಬ್ದಾರಿ ಅರಣ್ಯ ಇಲಾಖೆಯದ್ದು ಮಾತ್ರವಲ್ಲ ಅದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ ಮತ್ತು ಹೊಣೆಯಾಗಿದ್ದು,ಸ್ವಾರ್ಥ ಮತ್ತು ದುರಾಸೆಯಿಂದ ಒತ್ತುವರಿಗಳನ್ನು ಮಾಡಿರುವುದರಿಂದ ವನ್ಯಜೀವಿಗಳು ನಾಡಿಗೆ ಪ್ರವೇಶಿಸುತ್ತಿವೆ.
ಮಕ್ಕಳಲ್ಲಿನ ಬದಲಾವಣೆಗೆ ಮನೆಯಲಿನ ಪರಿಸರ ಬಹು ಮುಖ್ಯವಾಗಿದ್ದು, ಮುಂದಿನ ಪೀಳಿಗೆಗೆ ನಮ್ಮೆಲ್ಲರ ಕೊಡುಗೆ ಉತ್ತಮ ಪರಿಸರವಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಂಥ ಪಾಲಕಿ ರಾಗಿಣಿ, ಪ್ರತಿಯೊಂದು ಸಸಿಯ ಬೀಜಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಂದಲೇ ಬಿತ್ತನೆ ಬೀಜ ಮೂಲಕ ಮೊಳಕೆ ಬರಿಸಿ ಸಸಿಯನ್ನಾಗಿ ಪರಿವರ್ತಿಸಿ ನೆಡುವಂತೆ ಮಾಡಿ
ಜಾಗೃತಿ ಮೂಡಿಸಬೇಕು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಶಾಲೆಯ ಸಂಸ್ಥಾಪಕರಾದ ವೃಕ್ಷಿಂದಾಇರ್ಫಾನ್, ಪರಿಸರ ಜಾಗೃತಿಯ ಪ್ರತಿಜ್ಞಾ ವಿಧಿ ಭೋದಿಸಿದರು.
ಪೋಷಕರಾದ ರಾಗಿಣಿ ಮತ್ತು ಮಲ್ಲಿಕಾರ್ಜುನ್ ದಂಪತಿ ಶಾಲೆಗೆ ಜಮಖಾನಗಳನ್ನು ಕೊಡುಗೆಯಾಗಿ ನೀಡಿದರು. ಅರಣ್ಯ ಗಸ್ತು ಪಾಲಕ ಅರುಣ್,
ಸಾಹಸಿಕ್ಷಕರುಗಳು ಪೋಷಕರು ಭಾಗವಹಿಸಿದ್ದರು.

