ಭರತಣ್ಣ… ನಿನ್ನ ಸಾವಿಗೆ ನ್ಯಾಯ ಕೇಳುವವರು ಯಾರು?..
1 min read
ಭರತಣ್ಣ… ನಿನ್ನ ಸಾವಿಗೆ ನ್ಯಾಯ ಕೇಳುವವರು ಯಾರು?
ಮೂಡಿಗೆರೆಯ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಭರತಣ್ಣನ ಅಗಲಿಕೆ ನಂಬಲಾರದ ನೋವಾಗಿದೆ.
ಹಲವಾರು ಸಂಘಟನೆಗಳಲ್ಲಿ ಜವಾಬ್ದಾರಿಗಳನ್ನು ಹೊತ್ತು, ರಾಜಕೀಯವಾಗಿ ಬೆಳೆಯುತ್ತಾ, ಯಾರಿಗೇ ಕಷ್ಟ ಬಂದರೂ “ನಾನಿದ್ದೇನೆ” ಎಂಬ ಧೈರ್ಯದ ಮಾತಿನಿಂದ ನೊಂದವರ ಪಾಲಿಗೆ ಆಶಾಕಿರಣವಾಗಿದ್ದ ನಿನ್ನಂತಹ ಉದಾರ ಮನಸ್ಸಿನ ವ್ಯಕ್ತಿಗೆ ಈ ರೀತಿಯ ವಿದಾಯ ನ್ಯಾಯವಲ್ಲ.
ಗಣಪತಿ ಉತ್ಸವದ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೆ ಪ್ರತಿಯೊಂದು ಕಾರ್ಯದಲ್ಲೂ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು, ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನಿನ್ನ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿತ್ತು. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಸಹಕಾರಿ ಕ್ಷೇತ್ರದಲ್ಲಿಯೂ ನೀನು ಸಲ್ಲಿಸಿದ ಸೇವೆ ಸದಾ ಸ್ಮರಣೀಯ.
ನೀನು ಕಟ್ಟಿಕೊಂಡ ಸ್ನೇಹ, ಸಂಪಾದಿಸಿಕೊಂಡ ಪ್ರೀತಿ, ಸಮಾಜಕ್ಕಾಗಿ ಮಾಡಿದ ಸೇವೆ ಇವೆಲ್ಲವೂ ನಿನ್ನ ವ್ಯಕ್ತಿತ್ವದ ಮಹತ್ವವನ್ನು ಸಾರುತ್ತವೆ. ನಿನ್ನಂತಹ ನಿಸ್ವಾರ್ಥ, ಸ್ನೇಹಪರ ಮತ್ತು ಸೇವಾಮನೋಭಾವದ ವ್ಯಕ್ತಿಯನ್ನು ಮತ್ತೆ ಪಡೆಯುವುದು ಬಹುಶಃ ಅಸಾಧ್ಯ.
ನೀನು ದೇಹತಃ ನಮ್ಮೊಂದಿಗಿಲ್ಲದಿದ್ದರೂ, ನಿನ್ನ ನೆನಪುಗಳು, ನಿನ್ನ ಸೇವಾ ಮನೋಭಾವ ಮತ್ತು ನೀನು ತೋರಿದ ದಾರಿ ಸದಾ ನಮ್ಮೊಂದಿಗೆ ಇರುತ್ತವೆ.
ಭರತಣ್ಣ, ನಿನ್ನ ಅಗಲಿಕೆಯ ನೋವು ಎಂದಿಗೂ ಮರೆಯಲಾಗದು. ನಿನ್ನ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿ. 🙏💐

ಪ್ರವೀಣಪೂಜಾರಿ..ಸಮಾಜಸೇವಕ..
ಬಿಳಗೊಳ..

