ಜೆ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ….
1 min read
ದಿನಾಂಕ 21/06/2026 ಬಾನುವಾರದಂದು ಜೆ. ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಹಳ ಸಡಗರದಿಂದ
ಆಚರಿಸಲಾಯಿತು. ಜೆ. ಎಸ್ ಶಾಲೆಯ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಶಾಲೆಯ ಆವರಣದಲ್ಲಿ ಯೋಗಾ ಸನವನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವಲ್ಲಿ ಯಶಸ್ಸಿನ ಕಾರ್ಯಕ್ರಮವಾಗಿ ಪೂರ್ಣಗೊಂಡಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ಅಥಿತಿಗಳಾದ…. ಶ್ರೀಮಾನ್. ಪಿ. ಏನ್. ಜಗದೀಶ್ ಭಟ್ ಪಲ್ಗುಣಿ ಶ್ರೀಮತಿ. ಗೀತಾ ಅಜಿತ್ ಮಾಜಿ ಅಧ್ಯಕ್ಷರು ಪಟ್ಟಣ ಪಂಚಾಯತಿ ಮೂಡಿಗೆರೆ, ಶ್ರೀಮಾನ್ ಮನೋಜ್ ಕುಮಾರ್ ಮಾಜೀ ಸದಸ್ಯರು ಪಟ್ಟಣ ಪಂಚಾಯತಿ ಮೂಡಿಗೆರೆ ವಾರ್ಡ್ ಸಂಖ್ಯೆ 05, ಶ್ರೀಮಾನ್ ಹಂಝ ಎಂ. ಎ ಮಾಜೀ ಸದಸ್ಯರು ಪಟ್ಟಣ ಪಂಚಾಯತಿ ಮೂಡಿಗೆರೆ ವಾರ್ಡ್ ಸಂಖ್ಯೆ 09, ಶ್ರೀಮಾನ್ ಮೊಹಮ್ಮದ್ ಇಮ್ರಾನ್ ಅಧ್ಯಕ್ಷರು, ನಿರ್ದೇಶಕರು ಜೆ. ಎಸ್. ಶಿಕ್ಷಣ ಸಂಸ್ಥೆ ಹಾಗೂ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಬಣಕಲ್ ಹಾಗೂ ಪ್ರಾಂಶುಪಾಲರು ಮತ್ತು ಭೋದಕ ವೃ0ದದವರು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

