ಶೃಂಗೇರಿ ಸರಕಾರಿ ಶಾಲೆ ದತ್ತು ಪಡೆದ ಶೃಂಗೇರಿ ಶಾರದಾಪೀಠ….
1 min read
ಶೃಂಗೇರಿ ಸರಕಾರಿ ಶಾಲೆ ದತ್ತು ಪಡೆದ ಶೃಂಗೇರಿ ಶಾರದಾಪೀಠ
ಶೃಂಗೇರಿ: ಶೃಂಗೇರಿ ಶಾರದಾಪೀಠದ 34ನೇ ಜಗದ್ಗುರು ಶ್ರೀಚಂದ್ರಶೇಖರಭಾರತೀ ಸ್ವಾಮೀಜಿ ಅವರು ಕಲಿತ ಶಾಲೆಯನ್ನು ಉಳಿಸಿಕೊಳ್ಳಲು ಮುಂದಾಗಿರುವ ಶೃಂಗೇರಿ ಶ್ರೀಮಠ ಶಾಲೆಯನ್ನು ದತ್ತು ಪಡೆದಿದೆ.
ಶೃಂಗೇರಿ ಮಲ್ಲಿಕಾರ್ಜುನಬೀದಿಯಲ್ಲಿರುವ ಈ ಸರಕಾರಿ ಶಾಲೆ ತಾಲ್ಲೂಕಿನ ಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಸುಮಾರು 173 ವರುಷಗಳ ಇತಿಹಾಸವಿರುವ ಈ ಶಾಲೆ ಬ್ರಿಟಿಷರ ಅಳ್ವಿಕೆಯಲ್ಲಿ 1853ರಲ್ಲಿ ಪ್ರಾರಂಭಗೊಂಡಿತ್ತು. ಮೊದಲು ಈ ಶಾಲೆಯ ಹೆಸರು ಎ.ವಿ.ಸ್ಕೂಲ್ ಎಂದಿದ್ದು ಎಂಬ ಉಲ್ಲೇಖವಿದೆ.1980ರಿಂದ 90ರ ದಶಕದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಪಡೆದಿದ್ದರು.
ಖಾಸಾಗಿ ಶಾಲೆ ಪ್ರಾರಂಭಗೊಂಡ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಕುಸಿತಗೊಂಡು ಹತ್ತು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಅಂದಿನ ಕಾಲದ ಮುಖ್ಯಶಿಕ್ಷಕರು ಪದವೀಧರರಾಗಿದ್ದರು. ಕನ್ನಡ, ಸಂಸ್ಕೃತ,ಆಂಗ್ಲಭಾಷೆ ಉನ್ನತ ಶಿಕ್ಷಣ ಪಡೆದವರು ವಿದ್ಯಾರ್ಥಿಗಳಿಗೆ ಪಾಠವ ಪಾಠವನ್ನು ಕಲಿಸುತ್ತಿದ್ದರು.ಜಗದ್ಗುರು ಶ್ರೀಚಂದ್ರಶೇಖರಭಾರತೀ ಸ್ವಾಮೀಜಿ ಅವರು ಶಿಕ್ಷಣ ಪಡೆದ ಶಾಲೆ ಮುಚ್ಚುವ ಹಂತದಲ್ಲಿದ್ದಾಗ ಶಾಲೆ ಉಳಿಸಲು ಶ್ರೀಮಠ ನಿರ್ಧಾರ ಮಾಡಿತ್ತು.
ಶ್ರೀಮಠದ ಆಡಳಿತಾಧಿಕಾರಿ ಶ್ರೀ ಪಿ.ಎ.ಮುರಳಿ ಹಾಗೂ ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಕಲ ಸೌಲಭ್ಯ ನೀಡಲು ಮುಂದಾಗಿದ್ದಾರೆ.ಸರಕಾರದಿಂದ ನೇಮಕಗೊಂಡ ಶಿಕ್ಷಕರೊಂದಿಗೆ ಅಗತ್ಯವಿದ್ದ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಲಾಗಿದೆ.
ಅಧುನೀಕರಣಕ್ಕೆ ಹೆಚ್ಚಿನ ಒತ್ತು;-ಈಗಾಗಲೇ ಶ್ರೀಮಠವು ಶಾಲೆಗೆ, ಕಾಂಪೌಂಡ್ ಸಹಿತ ಎಲ್ಲ ಕಡೆ ಸುಣ್ಣಬಣ್ಣ ಮಾಡಿಸಲಾಗಿದೆ. ಕಿಟಕಿ ಬಾಗಿಲುಗಳನ್ನು ದುರಸ್ಥಿಗೊಳಿಸಲಾಗಿದೆ. ಶಿಕ್ಷಕರು ಹಾಗೂ ಸಮಿತಿ ಸದಸ್ಯರಿಂದ ಪ್ರಸ್ತಕ ಸಾಲಿನಲ್ಲಿ 40 ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ.ಅಂಗ್ಲಮಾಧ್ಯಮ ಎಲ್.ಕೆ.ಜಿ.ಯು.ಕೆ.ಜಿ ಸಹಿತ ಅಧುನಿಕ ಶಿಕ್ಷಣ ಪದ್ಧತಿ ಆರಂಭಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮಕ್ಕಳನ್ನು ಕರೆ ತರಲು ವಾಹನ ವ್ಯವಸ್ಥೆ ಆಗಿದ್ದು ಸಂಪೂರ್ಣ ಉಚಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ.
ಕ್ಷೇತ್ರಶಿಕ್ಷಣಾಧಿಕಾರಿ ವರಲಕ್ಷ್ಮೀ ಮಾತನಾಡಿ 34ನೇ ಜಗದ್ಗುರು ಶ್ರೀಚಂದ್ರಶೇಖರಭಾರತೀ ವ್ಯಾಸಂಗ ಮಾಡಿದ ಶಾಲೆಯನ್ನು ಶ್ರೀಮಠ ದತ್ತು ಪಡೆಯುವುದರೊಂದಿಗೆ ಮಕ್ಕಳನ್ನು ಕರೆತರಲು ಉಚಿತ ವಾಹನವ್ಯವಸ್ಥೆ ಕಲ್ಪಿಸಿದೆ.ಜಗದ್ಗುರುಗಳ ಮಾರ್ಗದರ್ಶನದಂತೆ ಶ್ರೀಮಠದ ಆಡಳಿತಾಧಿಕಾರಿಗಳು ಈಗಾಗಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅಗತ್ಯ ಸೌಲಭ್ಯ, ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ ನೀಡಿದ್ದಾರೆ ಎಂದರು
ಶಾಲಾಭಿವೃದ್ಧಿ ಸಮಿತಿ ಸದಸ್ಯ ಡಾ.ನಿರಂಜನ್ ಕುಮಾರ್ ಜೈನ್ ಮಾತನಾಡಿ ತಾಲೂಕಿನ ಪ್ರಥಮಶಾಲೆ ಹಾಗೂ 34ನೇ ಜಗದ್ಗುರುಗಳು ಶಿಕ್ಷಣ ಪಡೆದ ಶಾಲೆ ಮುಚ್ಚಬಾರದು ಎಂಬ ನಿರ್ಧಾರದಿಂದ ಸಂತಸವಾಗಿದೆ. ಮಾಜಿ ಸಚಿವ ಬೇಗಾನೆ ರಾಮಯ್ಯ ಸಹಿತ ಬಹುತೇಕ ಜನರು ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.ಸಮಿತಿ ಶಾಲೆಯ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು
ಅಭಿವೃದ್ಧಿ ಸಮಿತಿ ರಚನೆ;-ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು ಶ್ರೀಮಠದ ಆಡಳಿತಾಧಿಕಾರಿ ಶ್ರೀ.ಪಿ.ಎ.ಮುರಳಿ ಅವರು ಅಧ್ಯಕ್ಷರಾಗಿದ್ದು ಕಾರ್ಯದರ್ಶಿ ಟಿ.ನಾಗೇಶ್ ಅವರು ಕಾರ್ಯದರ್ಶಿಯಾಗಿದ್ದಾರೆ.ಡಾ.ನಿರಂಜನ್ ಕುಮಾರ್ ಜೈನ್,ಲಕ್ಷ್ಮೀವೆಂಕಟರಮಣ,ಶ್ರೀ ವೇನುಮಾಧವನಾ ಯಕ್,ಜಿ.ಜಿ.ಮಂಜುನಾಥ್, ಸುವರ್ಣವಿಜಯಕುಮಾರ್, ಬೇಗಾನೆ ಮಂಜುನಾಥ್,ವೇಣುಮಾಧವ ಸದಸ್ಯರಾಗಿದ್ದಾರೆ.

