लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಹೃದಯ ಚಿಕಿತ್ಸೆಗೆ 25 ಮಕ್ಕಳು ಬೆಂಗಳೂರಿಗೆ ರವಾನೆ ‎* ಕಸಾಪ ತಾಲ್ಲೂಕು ಮಹಿಳಾ ಘಟಕದ ಸಾರ್ಥಕ ಸೇವೆ *..

1 min read

‎ಹೃದಯ ಚಿಕಿತ್ಸೆಗೆ 25 ಮಕ್ಕಳು ಬೆಂಗಳೂರಿಗೆ ರವಾನೆ
‎* ಕಸಾಪ ತಾಲ್ಲೂಕು ಮಹಿಳಾ ಘಟಕದ ಸಾರ್ಥಕ ಸೇವೆ * ಚಿಕಿತ್ಸೆಗೆ 9 ತಿಂಗಳ ಹಸುಗೂಸು * ಪೋಷಕರ ಮೊಗದಲ್ಲಿ ಮಂದಹಾಸ
‎ಚಿಕ್ಕಮಗಳೂರು: ಕಸಾಪ ತಾಲ್ಲೂಕು ಮಹಿಳಾ ಘಟಕ ಹಾಗೂ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮೇ.16 ರಂದು ನಗರದಲ್ಲಿ ಅಯೋಜಿಸಿದ್ದ ಹೃದಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪತ್ತೆಯಾದ 25ಕ್ಕೂ ಹೆಚ್ಚು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಇಂದು ಸರ್ಕಾರಿ ಮಕ್ಕಳ ಆಸ್ಪತ್ರೆ ಆವರಣದಿಂದ ಬೆಂಗಳೂರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು.
ನಗರದ ಕೋಟೆ ಬಡಾವಣೆಯಲ್ಲಿರುವ ಕೀರ್ತಿ ಕೃಷ್ಣ ಕನ್ವೆಂಷನಲ್ ಹಾಲ್‌ನಲ್ಲಿ ಕಸಾಪ ಮಹಿಳಾ ಘಟಕದ ನೇತೃತ್ವದಲ್ಲಿ ಆಶ್ರಯ ಫೌಂಡೇಷನ್, ಮತ್ತು ಬೆಂಗಳೂರಿನ ವೈದೇಹಿ ಆಸ್ಪತ್ರೆ ಆಶಾಕಿರಣ ಅಂಧಮಕ್ಕಳ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೊನ್ನೆಯಿಂದ 14 ವರ್ಷದೊಳಗಿನ ಮಕ್ಕಳ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
‎
‎ಶಿಬಿರಕ್ಕೆ ಜಿಲ್ಲೆಯೂ ಸೇರಿದಂತೆ ವಿವಿದೆಡೆಯಿಂದ ನೂರಾರು ಮಕ್ಕಳನ್ನು  ಖ್ಯಾತ ಮಕ್ಕಳ ತಜ್ಞರು ಮತ್ತು ಹೃದ್ರೋಗ ತಜ್ಞರಾದ ಡಾ. ಗೋವಿಂದರಾಜ್ ನೇತೃತ್ವದ ತಂಡ ನಿರಂತರವಾಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸುಮಾರು 35ಕ್ಕೂ ಹೆಚ್ಚು ಹೃದ್ರೋಗವಿರುವ ರುವ ಮಕ್ಕಳು ಪತ್ತೆಯಾಗಿದ್ದರು.
‎
‎ಇಷ್ಟಕ್ಕೆ ಸುಮ್ಮನಾಗದ ಕಸಾಪ ಮಹಿಳಾ ತಂಡದವರು ಹೃದ್ರೋಗದಿಂದ ಬಳಲುತ್ತಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸಿ ಅವರ ಚಿಕಿತ್ಸೆಯ ಮಾಹಿತಿ ನೀಡಿದರು. ಇದರೊಂದಿಗೆ ತಪಾಸಣೆಯ ಜವಾಬ್ದಾರಿ ಹೊತ್ತಿದ್ದ ವೈದೇಹಿ ಆಸ್ಪತ್ರೆಯವರನ್ನು ಸಂಪರ್ಕಿಸಿ ಜಿಲ್ಲೆಯ ಅಷ್ಟೂ ಮಕ್ಕಳಿಗೆ ಹೃದ್ರೋಗಕ್ಕೆ ಉಚಿತ ಹೆಚ್ಚಿನ ಶಸ್ತ್ರ ಚಿಕಿತ್ಸೆಯೂ ಸೇರಿದಂತೆ ಹಲವು ಬಗೆಯ ಚಿಕಿತ್ಸೆ ಕೊಡಿಸಲು ಮನವೊಲಿಸಿದ್ದರು. ಆ ಹಿನ್ನೆಲೆಯಲ್ಲಿ ಇಂದು ನಗರದ ಮಲ್ಲೆಗೌಡ ಸರ್ಕಾರ ಆಸ್ಪತ್ರೆಯ ಮಕ್ಕಳ ವಿಭಾಗದ ಆವರಣದಲ್ಲಿ 9 ತಿಂಗಳ ಹಸುಗೂಸಿನಿಂದ ಹಿಡಿದು 14 ವರ್ಷ ವರೆಗಿನ ಸುಮಾರು 25 ಹೆಣ್ಣು- ಗಂಡು ಹೃದ್ರೋಗ ಇರುವ ಮಕ್ಕಳೊಂದಿಗೆ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಬೀಳ್ಕೊಡಲು ಈ ಶಿಬಿರದ ನೇತೃತ್ವ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ವಿಶ್ವನಾಥ್, ಪದಾಧಿಕಾ-ರಿಗಳಾದ ಶಕುಂತಲಾ. ಲೋಕೇಶಪ್ಪ, ವೀಣಾ ಮಲ್ಲಿಕಾರ್ಜುನ್, ಬಿಸಲೇಹಳ್ಳಿ ಸೋಮಶೇಖರ್,  ಜಿಲ್ಲಾ ಕುಟುಂಬ
‎ಕಲ್ಯಾಣಾಧಿಕಾರಿ ಅಶ್ವತ್ಥಬಾಬು, ಆರ್ ಸಿ ಹೆಚ್ ಓ ಮಂಜುನಾಥ್, ತಾಲ್ಲೂಕು ಆರೋಗ್ಯ ಕಲ್ಯಾಣಾಧಿಕಾರಿ ಡಾ. ಸೀಮಾ, ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ವಿನಯ್ ವಿ.. ಜಿಲ್ಲಾ ಶುತ್ತೂಷಣಾ ಅಧಿಕಾರಿ ಶ್ರೀಮತಿ ನಿಶ್ಚಿತ ಹಾಗೂ ಆರ್ ಬಿಎಸೈ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ವೈದೇಹಿ ಆಸ್ಪತ್ರೆಯ ಪಿಆರ್ ಓ ರಮೇಶ್, ಮತ್ತು ತಂಡದವರು ಮತ್ತು ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು
‎
‎ಚಿಕಿತ್ಸೆಗಾಗಿ ಹೊರಟಿರುವ ಮಕ್ಕಳ ಪ್ರಯಾಣ ಭತ್ಯೆ ಪೋಷಕರಿಗೆ ಊಟ ಉಪಹಾರ. ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು, ಸಂಘಟನೆಯ ಈ ಕಾರ್ಯ ಹೃದ್ರೋಗ ವಿರುವ ಮಕ್ಕಳ ಪೋಷಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಕಸಾಪ ಚಿಕ್ಕಮಗಳೂರು ತಾಲ್ಲೂಕು ಮಹಿಳಾ ಘಟಕವು ರಾಜ್ಯದಲ್ಲೇ ವಿನೂತನವಾದ ಹಮ್ಮಿಕೊಂಡಿರುವುದು ಹೆಮ್ಮೆತಂದಿದೆ.
‎
. ತಾಲ್ಲೂಕು ಮಹಿಳಾ ಅಧ್ಯಕ್ಷೆ ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್ ವಿಶ್ವನಾಥ್ ಮತ್ತು ತಂಡದವರು ಸಂಪೂರ್ಣ ಹೊಣೆ ಹೊತ್ತು ಚಿಕ್ಕ ಚಿಕ್ಕಮಗಳೂರಿನ ಚಿಕ್ಕ ಚಿಕ್ಕ ಹೃದ್ರೋಗವಿರುವ ಮಕ್ಕಳ  ಭವಿಷ್ಯವನ್ನು ರೂಪಿಸುವ ಮಹತ್ ಯೊಜನೆಗೆ ಅಭಿನಂದಿಸುವುದಾಗಿ ತಿಳಿಸಿದರು.

About Author

Leave a Reply

Your email address will not be published. Required fields are marked *

You may have missed