ಆಲ್ದೂರು: ಸಮೀಪದ ಹಂಗರವಳ್ಳಿ ಗ್ರಾಮದಲ್ಲಿರುವ ಶ್ರೀ ಉದ್ದಂಡೇಶ್ವರ ಶಿಕ್ಷಣ ಸಂಸ್ಥೆಯ ಸರ್ಕಾರಿ ಶಾಲೆಗೆ ಭೈರವೇಶ್ವರ ಶಾಮಿಯಾನ ಮಾಲೀಕರಾದ ಉಮೇಶ್ ದೇವರಹಳ್ಳಿ, 15 ಸಾವಿರ ಮೌಲ್ಯದ ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ, ಸ್ಮಿತಾ ಉಮೇಶ್, ಉದ್ದಂಡೇಶ್ವರ ಟ್ರಸ್ಟ್ ಖಜಾಂಚಿ ರಾಜು ಉಪಸ್ಥಿತರಿದ್ದರು.