ಕುವೆಂಪು, ಮೌಡ್ಯಗಳ ಬದಿಗೊತ್ತಿ ಸಾಹಿತ್ಯದಲ್ಲಿ ವೈಚಾರಿಕ ದೀವಿಗೆಯನ್ನು ಬೆಳಗಿಸಿದರು…..
1 min read
ಕುವೆಂಪು ಮೌಡ್ಯಗಳ ಬದಿಗೊತ್ತಿ ಸಾಹಿತ್ಯದಲ್ಲಿ ವೈಚಾರಿಕ ದೀವಿಗೆಯನ್ನು ಬೆಳಗಿಸಿದರು
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಸ್ ಎಸ್, ವೆಂಕಟೇಶ್
ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕ ಸಾ ಪ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಆಲ್ದೂರು: ಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಪ್ರಾಸ್ತಾವಿಕವಾಗಿ ಮಾತನಾಡಿದ ನೂರ್ ಮಹಮ್ಮದ್,ಕನ್ನಡ ಶಾಲೆ ಉಳಿಸಿ ಕನ್ನಡ ಬೆಳೆಸಿ, ಮೊಬೈಲ್ ಬಿಡಿರಿ ಪುಸ್ತಕ ಹಿಡಿಯಿರಿ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಸಾವಿರ ಮಂದಿ ಆಜೀವ ಸದಸ್ಯತ್ವ ನೇಮಕ ಅಭಿಯಾನವನ್ನು ರೂಪಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡ ಭಾಷೆ ಹೃದಯ ವೈಶಾಲ್ಯತೆ ಉಳ್ಳ ವಾತ್ಸಲ್ಯಮಯಿ ಬಹು ಸರಳ ಇಂತಹ ಭಾಷೆಯನ್ನು ಜಗತ್ತಿನಲ್ಲಿ ಕಾಣುವುದು ವಿರಳ
ಆಂಗ್ಲ ಭಾಷೆಯ ಕಲಿಕೆಯಿಂದಲೇ ಎಂಬ ಭ್ರಮೆಯಿಂದ ಹೊರಬನ್ನಿ, ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿ ಪ್ರೀತಿಸಿ ಪರಭಾಷೆಯನ್ನು ಗೌರವಿಸಿ ಎಂದು ಅಭಿಪ್ರಾಯ ಹಂಚಿಕೊಂಡರು.
ಆಶಯ ನುಡಿಗಳನ್ನು ಆಡಿದಂತಹ ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ಎಸ್ಎಂ, ಲೋಕೇಶಪ್ಪ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.
ಮಹಾಕವಿ ಕುವೆಂಪು ಶೀರ್ಷಿಕೆಯಲ್ಲಿ
ದತ್ತಿ ಉಪನ್ಯಾಸವನ್ನು ನೀಡಿದ ಜಿಲ್ಲಾ ಕಸಾಪ ಘಟಕದ ಗೌರವ ಕಾರ್ಯದರ್ಶಿ ಎಸ್ ಎಸ್ ವೆಂಕಟೇಶ್, ಕುವೆಂಪು ಕನ್ನಡ ಸಾಹಿತ್ಯದ ಮಣಿ ಮುಕುಟ ವಾಗಿದ್ದು, ಮಲೆನಾಡಿಗರ ಸಂಸ್ಕೃತಿಯನ್ನು ಮೌಡ್ಯಗಳನ್ನು ವೈಚಾರಿಕತೆಯ ದೃಷ್ಟಿಕೋನದ ಮೂಲಕ ಜಗತ್ತಿಗೆ ಪರಿಚಯಿಸಿದವರು. ನಮ್ಮಲ್ಲಿದ್ದ ಮೌಡ್ಯಗಳನ್ನು ಬದಿಗೊತ್ತಿ ಸಾಹಿತ್ಯದ ಮೂಲಕ ವೈಚಾರಿಕತೆಯ ಜ್ಞಾನ ದೀವಿಗೆಯನ್ನು ಬೆಳಗಿಸಿದರು.ಪ್ರಾಕೃತಿಕ ಸೌಂದರ್ಯದಿಂದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸಿ ಕಂದಾಚಾರ ಅನಿಷ್ಟ ಪದ್ದತಿಗಳನ್ನು ವಿಮರ್ಶಿಸಿ ಸಮಾನತೆಯ ಘನತೆಯನ್ನು ಸಾರಿ ಮನುಜ ಮತ ವಿಶ್ವಪಥ ವೆಂದು ಸಂದೇಶ ನೀಡಿದರು ಎಂದು ಉಪನ್ಯಾಸದಲ್ಲಿ ತಿಳಿಸಿದರು.
ಕಸಾಪ ಸದಸ್ಯ ನವರಾಜು ಹೆಚ್, ಕುವೆಂಪುರವರ ಕಾರ್ಮಿಕರ ಕುರಿತ ಕಾಳಜಿಯುಳ್ಳ ಚಿಂತನೆ ಗಳುಳ್ಳ ಪುಸ್ತಕಗಳು ಮತ್ತು ಶೈಕ್ಷಣಿಕ ಮಹತ್ವದ ಕುರಿತು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಯು ಇಬ್ರಾಹಿಂ, ದತ್ತಿ ಉಪನ್ಯಾಸದ ದಹನಿಗಳಾದ ಎಂಕೆ ಶ್ರೀನಿವಾಸ ಶೆಟ್ಟಿ,ಪ್ರೇಮ ಕೋದಂಡರಾಮ ಶೆಟ್ಟಿ, ಬೈರಮ್ಮ ಎಂ ಆರ್ ಸಣ್ಣ ಸಿದ್ದೇಗೌಡ ರವರಿಗೆ ಅಭಿನಂದಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕಾರ್ಯಕ್ರಮ ಆಯೋಜಿಸಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಹಾಂದಿಯ ನಾಗೇಶ್ ಆಜೀವ ಸದಸ್ಯತ್ವದ ಪ್ರತಿಯನ್ನು ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ರವರಿಂದ ಪಡೆದುಕೊಂಡರು. ತಾಲ್ಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ವಿಶ್ವನಾಥ್, ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲ ಲಕ್ಷ್ಮಣ್, ಪದಾಧಿಕಾರಿಗಳಾದ ಜಯ ಹೂವೆಗೌಡ, ಗೀತಾ, ಹರೀಶ್ ಯಲಗುಡಿಗೆ, ಸದಾಶಿವ, ಗೀತಾ,ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಸಿ ಎಸ್, ಸಹ ಶಿಕ್ಷಕರಾದ ಜ್ಯೋತಿ ಸಿಎಂ, ನಯನಕುಮಾರಿ, ಮುಜಾಮಿಲ್ ಅಹಮದ್, ವಿಶಾಲಾಕ್ಷಿ, ಈರಯ್ಯ ಸಂಗಯ್ಯ ಹಿರೇಮಠ, ಭಾಗವಹಿಸಿದ್ದರು.

