लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಹಕಾರಿ ಕ್ಷೇತ್ರದಲ್ಲಿ ಅನ್ಯಾಯ, ಸ್ವಜನಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ : ಡಾ. ರವಿ.ಸಿ.ಟಿ….

1 min read

ಸಹಕಾರಿ ಕ್ಷೇತ್ರದಲ್ಲಿ ಅನ್ಯಾಯ, ಸ್ವಜನಪಕ್ಷಪಾತಕ್ಕೆ ಅವಕಾಶ ನೀಡುವುದಿಲ್ಲ : ಡಾ. ರವಿ.ಸಿ.ಟಿ
‎
‎ಮೂಡಿಗೆರೆ: ಸಹಕಾರಿ ಕ್ಷೇತ್ರವು ರೈತರ ಮತ್ತು ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿದ್ದು, ಈ ಕ್ಷೇತ್ರದಲ್ಲಿ ಯಾವುದೇ ರೀತಿಯ ಅನ್ಯಾಯ, ಸ್ವಜನಪಕ್ಷಪಾತ ಅಥವಾ ವೈಯಕ್ತಿಕ ಲಾಭಕ್ಕಾಗಿ ಸಂಸ್ಥೆಗಳ ದುರ್ಬಳಕೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ರವಿ ಸಿ.ಟಿ ಹೇಳಿದರು.
‎
‎ರೈತ ಭವನದಲ್ಲಿ ನಡೆದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. ಮೂಡಿಗೆರೆ, ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಬ್ಯಾಂಕುಗಳ ಸಹಯೋಗದೊಂದಿಗೆ ನಡೆದ ಎರಡೂ ತಾಲ್ಲೂಕುಗಳ ಸಹಕಾರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳೊಂದಿಗೆ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಕಾರ್ಯವೈಖರಿ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಸವಾಲುಗಳ ಕುರಿತು ವಿಸ್ತ್ರತವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
‎
‎ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗಿ ಸ್ವೀಕರಿಸಿಲ್ಲ. ಸಹಕಾರಿ ಕ್ಷೇತ್ರಕ್ಕೆ ನನ್ನ ಕಡೆಯಿಂದ ಯಾವುದೇ ಮೋಸ ಅಥವಾ ಅನ್ಯಾಯ ಆಗುವುದಿಲ್ಲ. ನಾನು ಎಲ್ಲಿಯವರೆಗೆ ಈ ಜವಾಬ್ದಾರಿಯಲ್ಲಿ ಇರುತ್ತೇನೋ, ಅಲ್ಲಿಯವರೆಗೆ ಕಾವಲು ನಾಯಿಯಂತೆ” ಕೆಲಸ ಮಾಡುತ್ತೇನೆ. ಇತರರು ಕೂಡ ಅನ್ಯಾಯ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
‎
‎ಡಿಸಿಸಿ ಬ್ಯಾಂಕ್‌ನಲ್ಲಿ 83 ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಕುರಿತು ಸ್ಪಷ್ಟನೆ ನೀಡಿದ ಅವರು, ಕೆಲವರು ನೇಮಕಾತಿಯನ್ನು ರಾಜಕೀಯ ಅಥವಾ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಪ್ರಯತ್ನವಾಗಬಹುದು ಎಂದು ಭಾವಿಸಿದ್ದರು. ಆದರೆ ಸಂಸ್ಥೆಯ ಹಿತದೃಷ್ಟಿಯಿಂದ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಅಗತ್ಯಕ್ಕೆ ಅನುಗುಣವಾಗಿ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
‎
“ಸಹಕಾರಿ ಕ್ಷೇತ್ರ ನಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಸಾಧನವಲ್ಲ, ಹಿರಿಯರು ಕಟ್ಟಿದ ಸಂಸ್ಥೆ ಉಳಿಯಬೇಕು, ಬೆಳೆಯಬೇಕು ಎಂಬ ಉದ್ದೇಶದಿಂದಲೇ ನಾವು ಈ ಜವಾಬ್ದಾರಿ ಹೊತ್ತಿದ್ದೇವೆ. ಬ್ಯಾಂಕ್‌ನ ವಾರ್ಷಿಕ ವಹಿವಾಟು ಸುಮಾರು 3,000 ಕೋಟಿ ರೂ ಆಗೆದ್ದು, 1,568 ಕೋಟಿ ರೂಪಾಯಿ ಠೇವಣಿ ಹೊಂದಿದೆ. ಇದು ಬ್ಯಾಂಕ್ ಇತಿಹಾಸದಲ್ಲೇ ಅತ್ಯಧಿಕ ಠೇವಣಿ ಮೊತ್ತವಾಗಿದೆ. ಬ್ಯಾಂಕ್  ಇದುವರೆಗೂ <span;>830  ಮಧ್ಯಮಾವಧಿ ಸಾಲ ಹಾಗೂ 450 ಕೋಟಿ ರೂ ಕೃಷಿಯೇತರ ಸಾಲ ವಿತರೆಸಿದೆ. ನಬಾರ್ಡ್ ಮಾರ್ಗಸೂಚಿಯ ಪ್ರಕಾರ ಶೇ.60 ಕೃಷಿ ಸಾಲ ಮತ್ತು ಶೇ.40 ಕೃಷಿಯೇತರ ಸಾಲ ವಿತರಣೆ ಇರಬೇಕು. ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿರಬೇಕಾದರೆ ಈ ಸಮತೋಲನ ಅತ್ಯಗತ್ಯ ಎಂದು ತಿಳಿಸಿದರು.
‎
‎ಕೇವಲ ಕೃಷಿ ಸಾಲಗಳ ಮೂಲಕ ಸಹಕಾರಿ ಬ್ಯಾಂಕ್ಗಳನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿಲ್ಲ. ಕೃಷಿಯೇತರ ಸಾಲಗಳೂ ಅಗತ್ಯ. ಇದೇ ಕಾರಣಕ್ಕಾಗಿ ನಬಾರ್ಡ್ ಈ ಮಾರ್ಗಸೂಚಿಗಳನ್ನು ರೂಪಿಸಿದೆ ಎಂದರು. ಸಹಕಾರಿ ಸಂಘಗಳ ಹೆಚ್ಚುವರಿ ಸಾಲ ಬೇಡಿಕೆ ಕುರಿತು ಮಾತನಾಡಿದ ಅವರು, ಪ್ರಸ್ತುತ ಬ್ಯಾಂಕ್‌ ನ ಆರ್ಥಿಕ ಮಿತಿಗಳು ಹಾಗೂ ನಬಾರ್ಡ್ ನಿಯಮಗಳ ಕಾರಣದಿಂದ ಎಲ್ಲ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿ ದರು.
‎
‎ಮೂಡಿಗೆರೆ ತಾಲೂಕಿನ ಸಹಕಾರಿ ಸಂಘಗಳು ಮಾತ್ರವೇ ಸುಮಾರು 78 ಕೋಟಿ ರೂಪಾಯಿ ಹೆಚ್ಚುವರಿ ಸಾಲವನ್ನು ಕೇಳಿವೆ. ಎಲ್ಲ ಬೇಡಿಕೆಗಳನ್ನು ಒಟ್ಟಿಗೆ ಮಂಜೂರು ಮಾಡಿದರೆ ನಬಾರ್ಡ್ ನಿಗದಿಪಡಿಸಿರುವ ಅನುಪಾತ ಮೀರಲಿದೆ. ಆದ್ದರಿಂದ ಆರ್ಥಿಕ ಶಿಸ್ತು ಮತ್ತು ಅಗತ್ಯ ಎರಡನ್ನೂ ಸಮತೋಲನಗೊಳಿಸಬೇಕಿದೆ ಎಂದು ಹೇಳಿದರು.
‎
‎ನಬಾರ್ಡ್ ಮರುಹಣಕಾಸು ನೆರವು ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ತಿಳಿಸಿದರು. 2021-22ರವರೆಗೆ 450 ಕೋಟಿ ರೂಪಾಯಿ ಮರುಹಣಕಾಸು ಸಿಗುತ್ತಿತ್ತು. ಈಗ ಅದು 150 ಕೋಟಿ ರೂಗೆ ಇಳಿದಿದೆ. ಇದರಿಂದ ಬ್ಯಾಂಕ್‌ಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ ಎಂದು ವಿವರಿಸಿದರು.
‎
‎ಸಹಕಾರಿ ಸಂಸ್ಥೆಗಳನ್ನು ರಾಜಕೀಯ ಹೊಂದಾಣಿಕೆ ಮತ್ತು ಅಧಿಕಾರ ಹಂಚಿಕೆಯ ಸಾಧನಗಳಾಗಿ ಬಳಸಬಾರದು ಎಂದು ಎಚ್ಚರಿಸಿದ ಅವರು, ಹಣಕಾಸು ಸಂಸ್ಥೆಗಳು ನಂಬಿಕೆಯ ಮೇಲೆ ನಿಂತಿರುತ್ತವೆ, ಮ್ಯೂಸಿಕಲ್ ಚೇರ್ ಮಾದರಿಯಲ್ಲಿ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೊಳ್ಳುವುದರಿಂದ ಸಂಸ್ಥೆಗಳ ಮೇಲೆ ಹಿಡಿತ ಕಡಿಮೆಯಾಗುತ್ತದೆ. ನಿರಂತರ ನಾಯಕತ್ವ ಮತ್ತು ಜವಾಬ್ದಾರಿಯುತ ಆಡಳಿತವೇ ಸಂಸ್ಥೆಗಳನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
‎
‎ಸಹಕಾರಿ ಸಂಘಗಳಿಗೆ ಈಗ ಸಾಕಷ್ಟು ಸ್ವಾಯತ್ತತೆ ನೀಡಲಾಗಿದೆ. ಆದ್ದರಿಂದ ಆಯಾ ಸಂಘಗಳ ಆಡಳಿತ ಮಂಡಳಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜವಾಬ್ದಾರಿಯಿಂದ ಮಾಡಬೇಕಿದೆ. ಜವಾಬ್ದಾರಿಯುತ ಆಡಳಿತ ಮಂಡಳಿ ಮತ್ತು ಸಮರ್ಥ ಸಿಇಒ ಇದ್ದರೆ ಸಂಸ್ಥೆ ನಷ್ಟಕ್ಕೆ ಹೋಗುವುದಿಲ್ಲ. ಇವರಲ್ಲಿ ಒಬ್ಬರು ವಿಫಲರಾದರೂ ಸಂಸ್ಥೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
‎
‎ಭವಿಷ್ಯದಲ್ಲಿ ಸಾವಯವ ಕೃಷಿಯತ್ತ ಕ್ರಮೇಣ ಸಾಗಬೇಕಾದ ಅಗತ್ಯವಿದೆ. ರಾಸಾಯನಿಕ ಗೊಬ್ಬರ ಬಳಕೆ ದೀರ್ಘಾವಧಿಯಲ್ಲಿ ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂಪೂರ್ಣ ಬದಲಾವಣೆ ತಕ್ಷಣ ಸಾಧ್ಯವಿಲ್ಲ. ಆದರೆ ಹಂತ ಹಂತವಾಗಿ ಸಾವಯವ ಕೃಷಿಯತ್ತ ಸಾಗುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
‎
‎ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯ ಸಾಲಮನ್ನಾ ಯೋಜನೆಯ ಬಾಕಿ ಪ್ರಕರಣಗಳ ಕುರಿತು ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಹಣ ತಲುಪದಿದ್ದಲ್ಲಿ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದರೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಶೂನ್ಯ ಬಡ್ಡಿ ದರದಲ್ಲಿ 2023ರ ಫೆಬ್ರವರಿಯ ಬಳಿಕ ಸಾಲ ಲ ಲಭಿಸಿಲ್ಲ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಇಡುವ ಠೇವಣಿಯ ಮೇಲೆ 0.5 ಬಡ್ಡಿಯನ್ನಾದರೂ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
‎
‎ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಉಪಸಭಾಪತಿಗಳಾದ ಎಂ.ಕೆ. ಪ್ರಾಕೇಶ್, ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹಳಸೆ ಶಿವಣ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಜಿ.ಕೆ. ದಿವಾಕರ್, ಟಿಎಪಿಸಿಎಂಎಸ್ ಲಿಮಿಟೆಡ್ ಅಧ್ಯಕ್ಷರಾದ ಎಂ.ಎಲ್. ಕಲ್ಲೇಶ್, ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರವೀಣ್ ಡಿ. ನಾಯಕ್ ಸೇರಿದಂತೆ ಸಹಕಾರಿ ಕ್ಷೇತ್ರದ ಪ್ರಮುಖ ಮುಖಂಡರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed