ಮೂಡಿಗೆರೆ ಕ್ಷೇತ್ರದ ಭರವಸೆಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿದರೆ ಪಕ್ಷಕ್ಕೆ ಬಲಬಂದಂತೆ….
1 min read
ಮೂಡಿಗೆರೆ ಕ್ಷೇತ್ರದ ಭರವಸೆಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿದರೆ ಪಕ್ಷಕ್ಕೆ ಬಲಬಂದಂತೆ. ಎಕೆಂದರೆ ಒಬ್ಬ ಸಾಮಾನ್ಯ ಕಾರ್ಯಕರ್ತೆಯಾಗಿ ಇಡಿ ಕ್ಷೇತ್ರದಾದ್ಯಂತ ತಿರುಗಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬಲವರ್ಧನೆ ಮಾಡಿ ಹಿರಿಯ ಕಿರಿಯ ನಾಯಕರುಗಳನ್ನ ಜೊತೆ ಸೇರಿಸಿಕೊಂಡು ಒಂದು ಟೀಮನ್ನು ಕಟ್ಟಿ ಕೊರೋನಾ, ಅತಿವೃಷ್ಠಿ, ಅನಾರೋಗ್ಯ, ವಸತಿ ರಹಿತರು, ನಿವೇಶನ ರಹಿತರು,ಕೂಲಿಕಾರ್ಮಿಕರು, ನಿರ್ಗತಿಕರು, ಹೀಗೆ ಕಂಡುಬಂದ ಹಲವರ ಕಣ್ಣೀರ ಒರೆಸಿ ಧೈರ್ಯ ತುಂಬಿ ಆಹಾರ, ಔಷಧಿ ಕಿಟ್ಟು ವಿತರಿಸಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಕ್ಷ ಬೆಂಬಲಿತರ ಜೊತೆ ನಿಂತು ಗೆಲ್ಲಿಸಿ ಒಬ್ಬ ನಾಯಕಿಯಾಗಿ ಎಲ್ಲರ ಮನೆ ಮಗಳಾಗಿ 15-20 ವರ್ಷಗಳಿಂದ ಕಾಂಗ್ರೇಸ್ ಮೂಲೆಗುಂಪಾಗಿದೆ ಎಂಬ ಹೇಳಿಕೆಗಳಿಗೆ ಎಳ್ಳು ನೀರು ಬಿಟ್ಟು ನಯನ ಮೋಟಮ್ಮ ರವರಿಗೆ ಎಂಎಲ್ಎ ಟಿಕೆಟ್ ಕೊಟ್ರೆ ಕಾಂಗ್ರೇಸ್ ಪಕ್ಷ ಧೂಳಿಪಟ ಆಗುತ್ತೆ ಎಂದವರ ಮನವೊಲಿಸಿ ಎಂಎಲ್ಎ ಟಿಕೇಟ್ ತಂದು ಇವರನ್ನು ಸೋಲಿಸುವವರೇ ಇಲ್ಲ ಅಂತಿದ್ದವರನ್ನು ಸೋಲಿಸಿ ಕಾಕತಾಳೀಯ ಎಂಬಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಅವರ ಸಂಘಟನೆ ಜೊತೆ ನಯನ ಮೋಟಮ್ಮ ಅವರ ಅದೃಷ್ಟವೂ ಸೇರಿದೆ. ಗೆದ್ದನಂತರ ಇಡೀ ಕ್ಷೇತ್ರದಾದ್ಯಂತ ಇದ್ದ ಜ್ವಲಂತ ಸಮಸ್ಯೆಗಳಲ್ಲಿ ಅತೀ ಮುಖ್ಯವಾದ ರಸ್ತೆ, ಸೇತುವೆ, ಹಕ್ಕುಪತ್ರ, ನೀರು, ಚೆಕ್ ಡ್ಯಾಂ, ಹೀಗೆ ಕೋಟ್ಯಾಂತರ ರೂಪಾಯಿಯ ಕಾಮಗಾರಿಗಳನ್ನು ಕೇವಲ ಮೂರು ವರ್ಷದಲ್ಲಿಯೇ ಮಾಡಿ ಯುವ ಜನತೆಯ ಆಶಾಕಿರಣವಾಗಿರುವ ನಯನ ಮೋಟಮ್ಮ ರವರಿಗೆ ಸಚಿವಸ್ಥಾನ ನೀಡಬೇಕೆಂದು ಭಾವಿ ಮುಖ್ಯಮಂತ್ರಿಗಳಾದ ಶ್ರೀಯುತ ಡಿ.ಕೆ.ಶಿವಕುಮಾರ್ ಅವರನ್ನು ಮೂಡಿಗೆರೆ ಕ್ಷೇತ್ರದ ಕಾರ್ಯಕರ್ತರ ಪರವಾಗಿ ಕೇಳಿಕೊಳ್ಳುತ್ತೇನೆ.
ದೇವರಾಜು ಸಬ್ಲಿ ಮಾಜಿ ತಾಲೂಕು ಪಂಚಾಯತಿ ಸದಸ್ಯರು

