लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಕ್ರಿದ್ ಖುರಬಾನಿಗೆ ಪ್ರಾಣಿಗಳ ಬಲಿ ನೀಡಬೇಡಿ : ರಾಜ್ಯಾಧ್ಯಕ್ಷ ಅಬ್ದುಲ್ ರಝಾಕ್….

1 min read

ಬಕ್ರಿದ್ ಖುರಬಾನಿಗೆ ಪ್ರಾಣಿಗಳ ಬಲಿ ನೀಡಬೇಡಿ : ರಾಜ್ಯಾಧ್ಯಕ್ಷ ಅಬ್ದುಲ್ ರಝಾಕ್
‎
‎ನವಲಗುಂದ : ಬಕ್ರಿದ್ ಹಬ್ಬದ ಪ್ರಯುಕ್ತ ಹಲವರು
‎ಖುರಬಾನಿ ನೀಡುವುದಕ್ಕಾಗಿ ಸಿದ್ದರಾಗಿದ್ದೀರಿ, ಗೋವನ್ನು ಹೊರತುಪಡಿಸಿ ಬೇರೆ ಅನುಮತಿಸಿದ ಪ್ರಾಣಿಗಳ ಕುರಿತು ಗಮನ ಹರಿಸಿ ಹಾಗೂ ಪ್ರಾಣಿ ಬಲಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷರಾದ ಡಾ. ಅಬ್ದುಲ್ ರಝಾಕ ನದಾಫ್ ಅವರು ಮುಸ್ಲಿಂ ಬಾಂದವರಲ್ಲಿ ಮನವಿ ಮಾಡಿದ್ದಾರೆ.
‎
‎ರಾಜ್ಯದಲ್ಲಿ ನಮ್ಮ ಸೋದರ ಹಿಂದೂ ಸಮಾಜವು ಹಸುವನ್ನು ಗೋಮಾತೆಯಾಗಿ ಪೂಜಿಸುತ್ತದೆ ನಾವು ಅವರ ಭಾವನೆಗೆ ಧಕ್ಕೆ ಮಾಡುವುದು ಬೇಡ ಹಾಗಾಗಿ ಗುರುವಾರ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಯಾವುದೇ ಕಾರಣಕ್ಕೂ ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು.
ಮುಸ್ಲಿಮರು ಧಾರ್ಮಿಕ ನಿಯಮಗಳ ಪ್ರಕಾರ ಯಾರಿಗೆ ಪ್ರಾಣಿ ಬಲಿ ನೀಡುವುದು ಕಡ್ಡಾಯವಾಗಿದೆಯೋ ಅವರು ಈ ಕರ್ತವ್ಯವನ್ನು ನೆರವೇರಿಸಬೇಕು. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಮುಸ್ಲಿಮರು ಸ್ವಯಂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದೆ. ‘ಯಾರೂ ಕೂಡ ಪ್ರಾಣಿ ಬಲಿ ನೀಡುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬಾರದು. ಮುಖ್ಯವಾಗಿ ಪ್ರಾಣಿ ಬಲಿಯ ಚಿತ್ರ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು. ಹಬ್ಬದ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವಂತೆ ಒತ್ತಿ ಹೇಳಿರುವ ಅವರು ನಮ್ಮ ಯಾವುದೇ ನಡವಳಿಕೆಯಿಂದ ಇತರರಿಗೆ ತೊಂದರೆ ಅಥವಾ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿರುವ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಝಾಕ್ ನದಾಫ್‌ ಎಲ್ಲರಿಗೂ ಬಕ್ರಿದ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed