लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.

1 min read

‎ದಿನಾಂಕ 22/05/2026 ರಂದು ಶ್ರೀ ಬಿ.ಎಸ್‌ ಜಯರಾಮ್‌ ಮಾನ್ಯ ಅಧ್ಯಕ್ಷರು ತಾಲ್ಲೂಕು ಗ್ಯಾರಂಟಿ  ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ  ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
‎ಉಪಸ್ಥಿತಿ:
‎1. ಶ್ರೀ ಬಿ.ಎಸ್.‌ ಜಯರಾಮ್‌ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎2. ಶ್ರೀಮತಿ ಮೀನಾಕ್ಷಿ, ಸಹಾಯಕ ಲೆಕ್ಕಾಧಿಕಾರಿ ತಾಲ್ಲೂಕು ಪಂಚಾಯಿತಿ ಮೂಡಿಗೆರೆ
‎3. ಶ್ರೀ ಹರ್ಷ ಮೆಲ್ವಿನ್‌ ಲಾಸ್ರಾದೋ, ಮಾನ್ಯ ಸದಸ್ಯರು, ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎4. ಶ್ರೀ ಅರುಣ್ ‌ ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎5. ಶ್ರೀ ನಾರಾಯಣ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎6. ಶ್ರೀ ಗುರುವಪ್ಪ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎7. ಶ್ರೀ ಶ್ರೀನಿವಾಸ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎8. ಶ್ರೀ ನವೀನ್‌, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎9. ಶ್ರೀ‌ ಭರತ್  ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎10. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎11. ಶ್ರೀಮತಿ ಲೀಲಾವತಿ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ
‎12. ಶ್ರೀಮತಿ ಜಯಶ್ರೀ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಚಿಕ್ಕಮಗಳೂರು
‎13. ಶ್ರೀ ಸುದೀಪ್‌, ಐ.ಟಿ.ಐ. ಕಾಲೇಜು ಮೂಡಿಗೆರೆ
‎14. ಶ್ರೀಮತಿ ಶೋಭ ಬಿ ಮ್ಯಾಳಿ, ಸೂಪರ್‌ ವೈಸರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
‎15. ಶ್ರೀ ಇಂದ್ರೇಶ್‌ ಶಿರಸ್ತೇದಾರ್‌ ಆಹಾರ ಇಲಾಖೆ
‎16. ಶ್ರೀ ಜಾವಿದ್‌ ಮೆಸ್ಕಾಂ ಇಲಾಖೆ
‎17. ಶ್ರೀ ಮಲ್ಲಿಕಾರ್ಜುನ್‌, ಸಂಚಾರ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ. ಮೂಡಿಗೆರೆ
‎
‎ಸ್ವಾಗತ: ಶ್ರೀಮತಿ ಮೀನಾಕ್ಷಿ, ಸಹಾಯಕ ಲೆಕ್ಕಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ  ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರುತ್ತಾ, ಸಭೆಯನ್ನು ನಡೆಸಿಕೊಡುವಂತೆ ಮಾನ್ಯ ಅಧ್ಯಕ್ಷರನ್ನು ಕೋರಿದರು.
‎ಗೃಹಲಕ್ಷ್ಮಿ ಯೋಜನೆ:
‎ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು.  ತಾಲ್ಲೂಕಿನಲ್ಲಿ ಒಟ್ಟು 29032 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28654 ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿರುತ್ತದೆ.  ಹಾಗೂ  ವಿವಿಧ ಕಾರಣಗಳಿಂದ ಗೃಹಲಕ್ಷ್ಮೀ ಯೋಜನೆಯಿಂದ ಹೊರಗೆ ಉಳಿದ NPCI-76, IT/GST-132, ತಿದ್ದುಪಡಿ/ಮರಣ-170  ಒಟ್ಟು 378  ಇರುತ್ತದೆ. NPCI ಮತ್ತು IT/GST ಪಟ್ಟಿಯನ್ನು ನೀಡುವಂತೆ ಮಾನ್ಯ ಅಧ್ಯಕ್ಷರು ಇಲಾಖಾಧಿಕಾರಿಯವರಿಗೆ ಸೂಚಿಸಿದರು.
‎
‎ಅನ್ನಭಾಗ್ಯ ಯೋಜನೆ:
‎ ಆಹಾರ ಶಿರಸ್ತೇದಾರರು ಸಭೆಗೆ ಅನ್ನ ಭಾಗ್ಯ ಯೋಜನೆಯ ಪ್ರಗತಿ ವರದಿ ಮಂಡಿಸಿದರು.  ಅನ್ನಭಾಗ್ಯ ಯೋಜನೆಯ ಪಡಿತರ ಬಂದಿದ್ದು, ಬಯೋಮೆಟ್ರಿಕ್‌ ಒಂದು ಅಥವಾ ಎರಡು ಬಾರಿ ಮಾಡಿರುತ್ತಾರೆ. ಇಂದಿರಾ ಕಿಟ್‌ ವಿತರಣೆಗೆ ಕುಟುಂಬದಲ್ಲಿ ಇರುವ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನೀಡಲು ತೀರ್ಮಾನಿಸಿದ್ದು, ವಿಳಂಭವಾಗಿರುವುದಾಗಿ ತಿಳಿಸಿದರು. ಧರ್ಮಸ್ಥಳ ಸಂಘದ ಸದಸ್ಯರು ಬಿ.ಪಿ.ಎಲ್‌  ಕಾರ್ಡ್‌ನಿಂದ  ವಂಚಿತರಾಗಿದ್ದು, ಇವರಿಗೆ ವಿನಾಯಿತಿ ನೀಡಲಾಗಿದೆ.
‎
‎ಗೃಹಜ್ಯೋತಿ ಯೋಜನೆ:
‎ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 25994 ಗೃಹಜ್ಯೋತಿ ಫಲಾನುಭವಿಗಳು ಇದ್ದು, 22660 ಫಲಾನುಭವಿಗಳಿಗೆ ಸರ್ಕಾರದಿಂದ ರೂ. 9459588/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 127 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡಲಾದ ಮೊತ್ತ ರೂ.62192/- ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್‌ ಬಳಸಿರುವ ಫಲಾನುಭವಿಗಳ ಸಂಖ್ಯೆ 3207 ಇದ್ದು, ರೂ.1376715/- ಬಿಲ್‌ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
‎ಮಳೆಗಾಲ ಪ್ರಾರಂಭವಾಗುತ್ತಿದ್ದು, ವಿದ್ಯುತ್‌ ಸಮಸ್ಯೆ ತಲೆದೋರದಂತೆ ಅಗತ್ಯ ಪೂರ್ವಸಿದ್ದತೆ ಮಾಡಿಕೊಳ್ಳಲು ಮಾನ್ಯ ಅಧ್ಯಕ್ಷರು ಇಲಾಖಾಧಿಕಾರಿಯವರಿಗೆ ಸೂಚನೆ ನೀಡಿದರು.
‎
‎
‎
‎
‎ಯುವನಿಧಿ ಯೋಜನೆ:
‎ಯುವನಿಧಿ ಯೋಜನೆಯಡಿ 495 ವಿಧ್ಯಾರ್ಥಿಗಳು ನೊಂದಣಿಯಾಗಿದ್ದು, ಈವರೆಗೂ ಪದವಿ ವಿಭಾಗದಲ್ಲಿ 4203 ಹಾಗೂ ಡಿಪ್ಲೊಮೋ ವಿಭಾಗದಲ್ಲಿ 49 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಜನವರಿ-2026 ರ ಮಾಹೆಯವರೆಗೆ ಸರ್ಕಾರದಿಂದ ಒಟ್ಟು ರೂ.12682500/- ಅನುದಾನ ಬಿಡುಗಡೆಯಾಗಿರುತ್ತದೆ. ಯುವನಿಧಿ ಯೋಜನೆಯಡಿ ತರಭೇತಿಗಳು ನಡೆಯುತ್ತಿದ್ದು, ಮೇ-2026 ರ ಮಾಹೆಯಲ್ಲಿ ಎಲ್ಲಾ ತರಭೇತಿಗಳು ಮುಗಿಯುವುದಾಗಿ ಸಭೆಗೆ ಮಾಹಿತಿ ನೀಡಿದರು.
‎
‎ಶಕ್ತಿ ಯೋಜನೆ:
‎ ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಏಪ್ರಿಲ್-2026 ರ ಮಾಹೆಯಲ್ಲಿ ಪ್ರಸ್ತುತ 358719 ಫಲಾನುಭವಿಗಳು ಬಸ್‌ ನಲ್ಲಿ ಪ್ರಯಾಣಿಸಿದ್ದು, ರೂ.19759257/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು. ಹಾಗೂ ಯೋಜನೆ ಪ್ರಾರಂಭದಿಂದ ಇಲ್ಲಿಯವರೆಗೆ ಶಕ್ತಿ ಯೋಜನೆಯಡಿ ಒಟ್ಟು 11760610 ಪ್ರಯಾಣಿಕರು ಪ್ರಯಾಣಿಸಿದ್ದು, ಪ್ರಯಾಣ ದರ ರೂ. 589903085/- ಆಗಿರುತ್ತದೆ.
‎ ಮೂಡಿಗೆರೆಯಿಂದ ಬೆಂಗಳೂರಿಗೆ ಬೆಳಿಗ್ಗೆ 5-45 ಗಂಟೆಗೆ ಬಸ್‌ ವ್ಯವಸ್ಥೆ ಇದ್ದು, ಇದು ಬೆಂಗಳೂರಿಗೆ ತಲುಪುವುದು ತಡವಾಗುವುದರಿಂದ ಸರ್ಕಾರಿ ಕೆಲಸಗಳ ನಿಮಿತ್ತ ಬೆಂಗಳೂರಿಗೆ ಹೋಗುವವರಿಗೆ ಕಛೇರಿ ಸಮಯಕ್ಕೆ ತಲುಪಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಸ್‌ ಸಮಯವನ್ನು ಬೆಳಿಗ್ಗೆ 5-00 ಗಂಟೆಗೆ ಬದಲಾವಣೆ ಮಾಡಲು  ಹಾಗೂ ಮೂಡಿಗೆರೆಯಿಂದ ಮಂಗಳೂರಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲು ಶ್ರೀ ಹರ್ಷ ಮೆಲ್ವಿನ್‌ ಲಾಸ್ರಾದೋ, ಮಾನ್ಯ ಸದಸ್ಯರು ಕೋರಿದರು.
‎ ಮಾನ್ಯ ಅಧ್ಯಕ್ಷರು ಮಾತನಾಡುತ್ತಾ, ಮೂಡಿಗೆರೆ ಬಸ್‌ ನಿಲ್ದಾಣದ ಶೌಚಾಲಯದ ಸ್ವಚ್ಚತೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಶೌಚಾಲಯದ ಸ್ವಚ್ಚತೆ ಕಾಪಾಡಲು ಸೂಕ್ತ ಕ್ರಮವಹಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
‎
‎ಇತರೆ ವಿಷಯಗಳು:
‎ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳು ಹಳ್ಳಿಗಳಿಗೆ ಹೋಗಿ ಪಂಚಗ್ಯಾರಂಟಿ ಯೋಜನೆಗಳ ಸಾಧಕ-ಭಾದಕ ಕುರಿತು ಸಮೀಕ್ಷೆ ನಡೆಸಿ ನಮೂನೆಯಲ್ಲಿ ವರದಿ ನೀಡುವಂತೆ ಮಾನ್ಯ ಅಧ್ಯಕ್ಷರು ತಿಳಿಸಿದರು.
‎ತಾಲ್ಲೂಕು ಗ್ಯಾರಂಟಿ ಯೋಜನೆಗಳ ಹೋಬಳಿ ಮಟ್ಟದ ಫಲಾನುಭವಿಗಳ ಸಮಾವೇಶವನ್ನು ಮುಂದಿನ ದಿನಗಳಲ್ಲಿ  ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.
‎ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯುತ್ತಿದ್ದು, ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸಲು ಮಾನ್ಯ ಅಧ್ಯಕ್ಷರು ಗ್ಯಾರಂಟಿ ಯೋಜನೆಯ ಸದಸ್ಯರುಗಳಿಗೆ ಸೂಚನೆ ನೀಡಿದರು.
‎ ಜೆ.ಜೆ.ಎಂ. ಯೋಜನೆಯಡಿ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ನೀರಿನ ಸಂಪರ್ಕ ಕಲ್ಪಿಸಿರುವುದಿಲ್ಲ ಹಾಗೂ  ಕುಡಿಯುವ ನೀರಿನ ಬಾವಿಗಳಲ್ಲಿ ಸಿಲ್ಟ್‌ ತುಂಬಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸರಿಪಡಿಸಲು ಕ್ರಮವಹಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
‎
‎
‎
‎                                ಸಹಿ/-      ಸಹಿ/-
‎                          ಅಧ್ಯಕ್ಷರು                                                                ಸದಸ್ಯ ಕಾರ್ಯದರ್ಶಿ ಹಾಗೂ                          ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ                                   ಕಾರ್ಯನಿರ್ವಾಹಕ ಅಧಿಕಾರಿ
‎                 ಮೂಡಿಗೆರೆ ತಾಲ್ಲೂಕು                                       ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

About Author

Leave a Reply

Your email address will not be published. Required fields are marked *

You may have missed