लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಗೆ ಡಿ. ಎಂ ಮಂಜುನಾಥಸ್ವಾಮಿ ಸಂಚಾಲಕರಾಗಿ ಆಯ್ಕೆ…

1 min read

ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಗೆ ಡಿ. ಎಂ ಮಂಜುನಾಥಸ್ವಾಮಿ ಸಂಚಾಲಕರಾಗಿ ಆಯ್ಕೆ.

ಚಿಕ್ಕಮಗಳೂರು, ಮೇ ೧೯:
ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಮನೆಗೊಂದು ಗ್ರಂಥಾಲಯ ಯೋಜನೆಯ ಅಡಿಯಲ್ಲಿ ರಚಿಸಲಾದ ಜಿಲ್ಲಾ ಜಾಗೃತಿ ಸಮಿತಿಗೆ ಬರಹಗಾರ ಡಿ. ಎಂ ಮಂಜುನಾಥಸ್ವಾಮಿ ಅವರನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ, ಪುಸ್ತಕ ಸಂಸ್ಕೃತಿ ಹಾಗೂ ಓದುಗರ ವಲಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಾಧಿಕಾರ ಕೈಗೊಂಡಿರುವ ಮನೆಗೊಂದು ಗ್ರಂಥಾಲಯ ಅನುಷ್ಠಾನದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ಹತ್ತು ಜನ ಸದಸ್ಯರನ್ನು ಒಳಗೊಂಡ ಜಿಲ್ಲಾ ಸಮಿತಿಯೊಂದನ್ನು ರಚನೆ ಮಾಡಿ ಈ ನೇಮಕ ಮಾಡಲಾಗಿದೆ.

ಡಿ.ಎಂ.ಮಂಜುನಾಥಸ್ವಾಮಿ ಸಂಚಾಲಕರಾಗಿ,
ಕೆ ಚಂದ್ರಯ್ಯ.
ಡಾ. ಲಕ್ಷ್ಮಿಕಾಂತ್ ಕೆ ಎನ್.
ಮಾವಿನಕೆರೆ ದಯಾನಂದ್.
ಎಂ ಆರ್ ಪ್ರಕಾಶ್. ದಾದಾಪೀರ್ ತರೀಕೆರೆ. ಸೌಭಾಗ್ಯ ಮಹಾಂತೇಶ್. ಸುಜಾತ ಎಚ್ಎಲ್. ನಂದೀಶ್ ಬಂಕೇನಹಳ್ಳಿ. ಸತೀಶ್ ಜೆ ಇವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಚಾಲಕ ಮಂಜುನಾಥಸ್ವಾಮಿ ಅವರು ಕನ್ನಡ ಭಾಷೆ, ಸಾಹಿತ್ಯ ಮತ್ತು ಪುಸ್ತಕ ಓದುವ ಅಭಿರುಚಿಯನ್ನು ಯುವಜನರಲ್ಲಿ ಬೆಳೆಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾಹಿತ್ಯಾಸಕ್ತರು, ಕನ್ನಡ ಪರ ಸಂಘಟನೆಗಳು ಹಾಗೂ ಸ್ನೇಹಿತರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

 

ವರದಿ…ಮಗ.

About Author

Leave a Reply

Your email address will not be published. Required fields are marked *

You may have missed