लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಸುದ್ದಿಜಾಲ ✍️: ಪಶು ಸಂಗೋಪನಾ ಇಲಾಖೆಯ ನಿವೃತ್ತ ಪರಿವೀಕ್ಷಕ ತೋರಣಮಾವು ಶಂಕರೇಗೌಡ ನಿಧನ.

ಆಲ್ದೂರು ಮೇ ೧೮: ಸಮೀಪದ ತೋರಣಮಾವು ಗ್ರಾಮದ ವಾಸಿ ಶಂಕರೇಗೌಡರು ವಯೋಸಹಜ ಕಾಯಿಲೆಯಿಂದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದು ನೆನ್ನೆ ನಿಧನರಾಗಿದ್ದಾರೆ.

ಪಶು ಸಂಗೋಪನಾ ಇಲಾಖೆಯಲ್ಲಿ ಆಲ್ದೂರು, ವಸ್ತಾರೆ ಸೇರಿದಂತೆ ವಿವಿಧ ಕಡೆ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಈ ಭಾಗದ ಪ್ರತಿ ಹಳ್ಳಿಯ ಮನೆಮನೆಗೂ ಚಿರಪರಿಚಿತರಾಗಿ ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಜಾನುವಾರುಗಳಿಗೆ ಮಾತ್ರವಲ್ಲ ಹಳ್ಳಿಯ ಜನ ವರ್ಗಕ್ಕೂ ಆಪ್ತರಾಗಿದ್ದರು. ಜಾನುವಾರಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಉಪಚಾರ ನೀಡುತ್ತಿದ್ದರು.

84ರ ವಯೋಮಾನದ ಶಂಕರೇಗೌಡರು ವೃತ್ತಿಜೀವನದಿಂದ ನಿವೃತ್ತರಾಗಿ 24 ವರ್ಷ ಕಳೆದಿದ್ದುರೂ ಸಹ ಅವರು ಪಶು ಸಂಗೋಪನಾ ಇಲಾಖೆಯ ಪರಿವೀಕ್ಷಕರಾಗಿ ಪ್ರಾಮಾಣಿಕತೆ ಮತ್ತು ಮೂಕ ಪ್ರಾಣಿಗಳ ಮೇಲಿನ ಕಾಳಜಿಯೊಂದಿಗೆ ಅವರು ಕೊಡಮಾಡಿದ ಸೇವೆಯನ್ನು ಇಂದಿಗೂ ಇಲ್ಲಿನ ಸುತ್ತಮುತ್ತಲಿನ ಹಳ್ಳಿಯ ಜನರು ಮರೆತಿಲ್ಲ.

ವೃತ್ತಿ ಜೀವನದ ನಂತರವೂ ಸಹ ಜಾನುವಾರಗಳ ಉಪಚಾರದಲ್ಲಿ ಕೆಲಕಾಲ ತೊಡಗಿಕೊಂಡಿದ್ದರು ಮತ್ತು ತನ್ನ ಹುಟ್ಟೂರು ತೋರಣಮಾವಿನ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಸಮಿತಿಯೊಂದನ್ನು ರಚಿಸಿ, ಆ ಸಮಿತಿಯ ಮೂಲಕ ದೇವಾಲಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದರು.

ಮೃತ ಶಂಕರೇಗೌಡರು ಪತ್ನಿ ಮತ್ತು ಮಗ ರವಿಶಂಕರ್ , ಮಗಳು ರೇಖಾ ಸೇರಿದಂತೆ ಮೊಮ್ಮಕ್ಕಳಾದಿಯಾಗಿ ಒಂದು ದೊಡ್ಡ ಕುಟುಂಬ ಮತ್ತು ಅಪಾರ ಸಂಖ್ಯೆಯ ಸ್ನೇಹ ವಲಯವನ್ನು ಬಿಟ್ಟು ಅಗಲಿದ್ದಾರೆ.

ವೀರಶೈವ ಲಿಂಗಾಯಿತ ಸಮಾಜವೂ ಸೇರಿದಂತೆ ನಾಡಿನ ಹಲವು ಸಂಘ ಸಂಸ್ಥೆಗಳು, ವಿವಿಧ ಸಮುದಾಯದ ಮುಖಂಡರು, ಶಂಕರೇಗೌಡರ ಆಪ್ತ ವಲಯ ಅಗಲಿದ ಗೌಡರಿಗೆ ಸಂತಾಪವನ್ನು ಸಲ್ಲಿಸಿದೆ.

ಇಂದು ಮಧ್ಯಾಹ್ನ ಘಂಟೆ 12:00ರ ಸುಮಾರಿಗೆ
ಸ್ವಗ್ರಾಮ ತೋರಣಮಾವು ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ…. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed