लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಬರಿ ಮಾತಿಗಿಂತ ಕೆಲಸದ ಮೂಲಕ ಸಾಬೀತು ಪಡಿಸುವುದು ನಮ್ಮ ಗುರಿ ‎ಶಾಸಕಿ ನಯನ ಮೋಟಮ್ಮ…

1 min read

‎ಬರಿ ಮಾತಿಗಿಂತ ಕೆಲಸದ ಮೂಲಕ ಸಾಬೀತು ಪಡಿಸುವುದು ನಮ್ಮ ಗುರಿ
‎ಶಾಸಕಿ ನಯನ ಮೋಟಮ್ಮ
‎
‎ಯಲಗುಡಿಗೆ ಇಂದ ಹಾಂದಿಯ ಹದಗೆಟ್ಟ ಸಂಪರ್ಕ ರಸ್ತೆ ನವ ನಿರ್ಮಾಣಕ್ಕೆ ಭೂಮಿ ಪೂಜೆ
‎
‎
‎ಆಲ್ದೂರು: ಯಲಗುಡಿಗೆ ಗ್ರಾಮದಿಂದ ಹಾಂದಿಯ ವರೆಗೆ ಹದಗೆಟ್ಟಿದ್ದ ಹೆದ್ದಾರಿ ಸಂಪರ್ಕ ರಸ್ತೆಗೆ ಶನಿವಾರ ಶಾಸಕಿ ನಯನ ಮೋಟಮ್ಮ ಭೂಮಿ ಪೂಜೆ ನೆರವೇರಿಸಿದರು.
‎
‎ಬಳಿಕ ಮಾತನಾಡಿದ ಅವರು ಟೀಕೆಗಳಿಗೆ ಪ್ರತಿಕ್ರಿಯೆ ಯನ್ನು ಬರಿ ಮಾತಿನಿಂದ ನೀಡುತ್ತಾ ಕಾಲಹರಣ ಮಾಡುವುದಕ್ಕಿಂತ
‎ಕೆಲಸದ ಮೂಲಕ ಸಾಬೀತುಪಡಿಸುವುದು ನಮ್ಮ ಗುರಿಯಾಗಿದೆ.
‎ಈಗಾಗಲೇ ಕ್ಷೇತ್ರದಲ್ಲಿ ಜನರಿಗೆ ಅನಿವಾರ್ಯ ಮತ್ತು ಅವಶ್ಯಕತೆ ಇರುವಂತಹ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಮಾಡುತ್ತಿದ್ದೇವೆ ಇರುವಂತಹ ಅವಕಾಶದಲ್ಲಿ ಇನ್ನೂ ಕೂಡ ಜನಪರ ಕಾರ್ಯಕ್ರಮಗಳನ್ನು ಅಭಿವೃದ್ಧಿ ಯೋಜನೆಗಳನ್ನು ಸಹಕಾರ ಮಾಡಲು ಸಂಪೂರ್ಣ ಪರಿಶ್ರಮದೊಂದಿಗೆ ಶ್ರಮಿಸುತ್ತೇವೆ ಎಂದರು.
‎ಎರಡು ಕೋಟಿ ಅನುದಾನದಲ್ಲಿ 1.5 ಕಿಮೀ ರಸ್ತೆಯನ್ನು ತೀವ್ರವಾಗಿ ಹಾದಗೆಟ್ಟಿರುವ ಆಯ್ದ ಭಾಗಗಳಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
‎
‎ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಉಪಾಧ್ಯಕ್ಷರಾದ ಅಮರ್ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಚ್ಎಸ್, ಹೋಬಳಿ ಘಟಕದ ಅಧ್ಯಕ್ಷ ಕೆಳಗೂರು ಪೂರ್ಣೇಶ್,ಉಪಾಧ್ಯಕ್ಷ ಕಿರಣ್, ಹೋಬಳಿ ಕಾರ್ಯದರ್ಶಿ ರವಿಚಂದ್ರ ಸಿ, ಬೂತ್ ಅಧ್ಯಕ್ಷ ಶೇಷಪ್ಪ, ಸತ್ತಿಹಳ್ಳಿ ಪಂಚಾಯಿತಿ ಪಿಡಿಒ ಸುರಯ್ಯ ಬಾನು, ಬ್ಯಾರಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಯು,ಇಬ್ರಾಹಿಂ, ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ತೇಜಸ್, ಅರ್ಚಕ ಚಂದ್ರನಾಥ ಭಟ್, ಮುಖಂಡರುಗಳಾದ ಅನುಪ್ ಗೌಡ,ಮುಳ್ಳುಂಡೆ ಮಂಜುನಾಥ್,ಹಾಂದಿ ರಮೇಶ್, ಹೇಮಂತ್, ವಿಜಯ್ ಕುಮಾರ್,ಅಶ್ವಥ್, ಪದ್ಮಶ್ರೀ,ಎಂಜಿನಿಯರ್ ಮಲ್ಲಿಕಾರ್ಜುನ್
‎ಶಾಸಕರ ಆಪ್ತಸಹಾಯಕರಾದ ಮಧು, ಸುನಿತಾ, ರವಿ, ಕಾರ್ಯಕರ್ತರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed