लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ತನಗೊಂದು ರೀತಿ, ಪರರಿಗೊಂದು ನೀತಿ”ಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ ಎಂದಲ್ಲ,….

1 min read

‎”ತನಗೊಂದು ರೀತಿ, ಪರರಿಗೊಂದು ನೀತಿ”ಯ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ ಎಂದಲ್ಲ,
‎• ಪರಾವಲಂಬನೆ
‎• ಜಾಗತಿಕ ತಾಪಮಾನ ಏರಿಕೆ
‎• ಆರೋಗ್ಯ
‎ಇವುಗಳ ದೃಷ್ಟಿಯಿಂದ ಅನಗತ್ಯ ಖರೀದಿ, ಪ್ರವಾಸ, ಮೋಜು-ಮಸ್ತಿ, ತಿಂಡಿಪೋತತನ ಮುಂತಾದ ದೌರ್ಬಲ್ಯಗಳನ್ನು ಮೀರಿ #ಸರಳಜೀವನ ನಡೆಸುವುದು ಎಲ್ಲಾ ಕಾಲಗಳಲ್ಲಿಯೂ ಕ್ಷೇಮ. ಬಡವರು, ದೈಹಿಕಶ್ರಮದ ಕೆಲಸ ಮಾಡುವ ಶ್ರಮಿಕರು ಚೆನ್ನಾಗಿ ತಿಂದುಂಡರೆ ಪರವಾಗಿಲ್ಲ. ಹಾಗೆಂದು ಎಲ್ಲರೂ ಅದನ್ನೇ ಮಾಡಿದರೆ ಖಾಸಗಿ ಆಸ್ಪತ್ರೆಗಳವರಿಗೆ ಮಾತ್ರ ಖುಷಿ. ತಮ್ಮಿಂದ ಸಾಧ್ಯ ಎಂದು ಶ್ರೀಮಂತರು ದುಂದುವೆಚ್ಚಗಳನ್ನು ಮಾಡಿ ಮೆರೆದರೆ ಅದು ಸಮಾಜದಲ್ಲಿ ನಕಾರಾತ್ಮಕ ಬೆಳವಣಿಗೆಗಳಿಗೆ ಕಾರಣವಾಗುತ್ತದೆ. ಇಲ್ಲಿ ಕೊನೆಗೆ ಎಲ್ಲರೂ ಬಾಧಿತರೇ.
‎
‎ಚಿನ್ನದ ವಿಚಾರಕ್ಕಂತೂ ಬಹಳಷ್ಟು ಜನ ಮೂರ್ಖ ತೀರ್ಮಾನಗಳನ್ನೇ ಮಾಡುತ್ತಾರೆ. ಐದು ಬೆರಳಿಗೆ ಐದುಂಗುರ, ಕುತ್ತಿಗೆಗೆ ಚಿನ್ನದ ನಾಯಿಚೈನು ಹಾಕಿಕೊಂಡು ಅಸಹ್ಯವಾಗಿ ಮೆರೆಯುವವರನ್ನೇ ನಾವು ಯಶಸ್ವಿಗಳು ಮತ್ತು ನಮ್ಮ ನಾಯಕರು ಎಂದು ಭಾವಿಸಿದ್ದೇವೆ. ಇಂತಹ ವಿಕೃತಿಗಳನ್ನು ಜನ ನಿವಾರಿಸಿಕೊಳ್ಳಬೇಕು.
‎
‎ಅಂದಹಾಗೆ, ಅನಗತ್ಯ ರ್‍ಯಾಲಿ, ರೋಡ್ ಶೋ, ವಿದೇಶ ಪ್ರವಾಸ, ಡಿಸೈನರ್ ಬಟ್ಟೆಗಳು ಮುಂತಾದುವುಗಳನ್ನು ಒಂದಷ್ಟು ಕಡಿಮೆ ಮಾಡಿ ನರೇಂದ್ರ ಮೋದಿಯವರು ದೇಶವಾಸಿಗಳಿಗೆ ಈ ಉಪದೇಶ ಮಾಡಿದ್ದರೆ ಜನರು ನಿಜಕ್ಕೂ ಅದನ್ನು ಸ್ವಾಗತಿಸುತ್ತಿದ್ದರು ಮತ್ತು ಪಾಲಿಸುತ್ತಿದ್ದರು. ಹಾಗಾಗಿಯೇ ಈಗ ಬಹುತೇಕರು ಅವರ ಮಾತುಗಳನ್ನು “ಹೇಳೋದು ಪುರಾಣ, ತಿನ್ನೋದು ಬದನೆಕಾಯಿ” ಎಂದು ವ್ಯಂಗ್ಯವಾಡುತ್ತಿದ್ದಾರೆ.
‎
‎ಹಾಗೆಂದು ಅವರು ಹೇಳಿದ್ದನ್ನು ನಿರಾಕರಿಸಬೇಕಿಲ್ಲ. ವ್ಯಕ್ತಿ, ಕುಟುಂಬ, ಸಮುದಾಯ, ದೇಶದ ಹಿತದೃಷ್ಟಿಯಿಂದ ಮಾತ್ರವಲ್ಲ, ಒಟ್ಟಾರೆ ಮನುಷ್ಯರ ಬದುಕಿನ ಹಿತದೃಷ್ಟಿಯಿಂದ ಸರಳವಾಗಿ ಬದುಕುವುದು ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ಶ್ರೇಯಸ್ಕರ.
‎
‎ನಾನಂತೂ ಇದರಲ್ಲಿ ಹಲವನ್ನು ಸುಮಾರು ಎರಡು ದಶಕಗಳಿಂದ ಪ್ರತಿಪಾದಿಸುತ್ತಿದ್ದೇನೆ ಮತ್ತು ಬಹಳಷ್ಟನ್ನು ಪಾಲಿಸುತ್ತಿದ್ದೇನೆ. ನಾವು ಚಿನ್ನ ಖರೀದಿಸಿ ಬಹುಶಃ ಹತ್ತು ವರ್ಷಗಳ ಮೇಲಾದವು. ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತೇನೆ. ಕುಟುಂಬದವರ ಜೊತೆ ಮಾಡುವ ಪ್ರವಾಸಗಳನ್ನು ಬಿಟ್ಟರೆ ಕಾರಣವಿಲ್ಲದೆ ಪ್ರವಾಸಗಳೂ ಇಲ್ಲ. ಸಾಧ್ಯವಾದಷ್ಟೂ ಸ್ಥಳೀಯವಾಗಿ ಬೆಳೆಯುವ ಆಹಾರ ಪದಾರ್ಥಗಳನ್ನೇ ತಿನ್ನಬೇಕು (#Locovore) ಎನ್ನುವುದರಿಂದ ಮೊದಲ್ಗೊಂಡು ಊಟದಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಅತಿಪ್ರಿಯವಾಗಿದ್ದ ಮಾಂಸಾಹಾರವನ್ನು ತ್ಯಜಿಸಿದ್ದೇನೆ. Fossil Fuels ಬಳಕೆ ಮಾಡುವಾಗಲಂತೂ ಬಹಳ ಯೋಚಿಸುತ್ತೇನೆ. ಹಾಗಾಗಿಯೇ ಇವೆಲ್ಲದರ ಕುರಿತಾಗಿ ಹೇಳಲು ನನಗೆ ನೈತಿಕತೆ ಇದೆ ಎಂದು ಭಾವಿಸಿದ್ದೇನೆ.
‎
‎ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
‎
‎- ರವಿ ಕೃಷ್ಣಾರೆಡ್ಡಿ
‎
‎13-05-2026.

About Author

Leave a Reply

Your email address will not be published. Required fields are marked *

You may have missed